Wedding Trending Video: ಮದುವೆಗಳಲ್ಲಿ ವಿಧಿವಿಧಾನಗಳನ್ನು ಮಾಡುವಾಗ ವಧು-ವರರು ಬೇಸರಗೊಳ್ಳುವಂತಹ ಮತ್ತು ಸುಸ್ತಾಗಿಸುವ ಹಲವು ಸಂದರ್ಭಗಳು ಎದುರಾಗುತ್ತವೆ. ಇಂತಹ  ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಜನರು ವಾತಾವರಣವನ್ನು ಸೃಷ್ಟಿಸಲು ಮಾತನಾಡಲು ಇಷ್ಟಪಡುತ್ತಾರೆ, ಮತ್ತು ಕೆಲವೊಮ್ಮೆ ಜನರು ಮೋಜಿನ ಆಟಗಳನ್ನು ಆಡಲು ಇಷ್ಟಪಡುತ್ತಾರೆ. ಈ ವೀಡಿಯೋದಲ್ಲಿ ಜೋಡಿಯ ಕಂಡುಕೊಂಡ ಕಲ್ಪನೆಯನ್ನು ನೋಡಿದರೆ ನೀವೂ ಆಶ್ಚರ್ಯಪಡುವಿರಿ.


COMMERCIAL BREAK
SCROLL TO CONTINUE READING

ವಿವಾಹಕ್ಕೆ ಆಗಮಿಸಲು ಲೇಟಾದ ಅರ್ಚಕರು
ಈ ವೀಡಿಯೊದಲ್ಲಿ ಕಂಡುಬರುವ ವಧು-ವರರು ತುಂಬಾ ಕೂಲ್ ಕಾಣಿಸುತ್ತಿದ್ದಾರೆ. ವಾಸ್ತವದಲ್ಲಿ ಈ ವಿವಾಹಕ್ಕೆ ಅರ್ಚಕರು ಲೇಟಾಗಿ ಆಗಮಿಸಲಿದ್ದಾರೆ ಎಂಬುದು ಇವರಿಗೆ ತಿಳಿದು ಇಬ್ಬರೂ ಬೇಸರಗೊಳ್ಳುತ್ತಿದ್ದರು. ಹೀಗಿರುವಾಗ ಇಬ್ಬರೂ ತಮ್ಮ ಬೇಸರವನ್ನು ದೂರಾಗಿಸಲು ಆಟವೊಂದನ್ನು ಆಡತೊಡಗಿದ್ದಾರೆ. ಈ ಜೋಡಿ ಯಾವ ಆಟ ಆಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು.



ಇದನ್ನೂ ಓದಿ-Viral News: ಬಾಲಕಿಗೆ ‘ಕ್ಯಾಂ ಐಟಂ’ ಎಂದು ಕರೆದ ಉದ್ಯಮಿಗೆ 1.5 ವರ್ಷ ಜೈಲು ಶಿಕ್ಷೆ..!


ಆಟ ಯಾವುದು ಗೊತ್ತಾ? 
ಈ ವಿಡಿಯೋದಲ್ಲಿ ವಧು-ವರರು ನೀರಿನ ಬಾಟಲಿಯೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ಕೆಲವೊಮ್ಮೆ ವರನು ಬಾಟಲಿಯನ್ನು ಎಸೆಯುವ ಮೂಲಕ ಅದನ್ನು ನೇರವಾಗಿ ನಿಲ್ಲಲು ಪ್ರಯತ್ನಿಸುತ್ತಾನೆ, ಮತ್ತು ಕೆಲವೊಮ್ಮೆ ವಧು ಹಾಗೆ ಮಾಡಲು ಹೆಚ್ಚಿನ ಒತ್ತು ನೀಡುತ್ತಾಳೆ. ಮಂಟಪದಲ್ಲಿ ಕುಳಿತ ವಧು-ವರರು ತಾವು ಮದುವೆ ಮಂಟಪದಲ್ಲಿ ಕುಳಿತಿದ್ದೇವೆ ಎನ್ನುವುದನ್ನು ಮರೆತು ಆಟವಾಡುತ್ತಿದ್ದು, ವಿವಾಹಕ್ಕೆ ಆಗಮಿಸಿದ ಅತಿಥಿಗಳೆಲ್ಲರೂ ಅವರನ್ನು ಕಣ್ಣು ಪಿಳುಕಿಸದೆಯೇ ನೋಡುತ್ತಿದ್ದಾರೆ. ಆದರೆ, ಜೋಡಿಗೆ ಮಾತ್ರ ಬೇಸರ ಕಳೆದು ಎಂಜಾಯ್ ಮಾಡಬೇಕು.


ಇದನ್ನೂ ಓದಿ-Viral Video: ವಿಶ್ವದ ಅತ್ಯಂತ ಸುಂದರ ಹಾವು ಇದೇನಾ? ನೋಡಿ ಕಾಮದೇವ ಕೂಡ ಮಂತ್ರಮುಗ್ಧನಾಗುವುದು ಗ್ಯಾರಂಟಿ!


ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಹಲವರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ ಮತ್ತು ಉಳಿದವರು ಕಾಮೆಂಟ್ ಸೆಕ್ಷನ್ ನಲ್ಲಿ ವಧು-ವರರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವರು ತಮಾಷೆಯ ರೀತಿಯಲ್ಲಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.