ನವದೆಹಲಿ :  ಇಡೀ ದೇಶದಲ್ಲಿ ಕರೋನಾ (Coronavirus) ಅಟ್ಟಹಾಸ ಮಿತಿ ಮೀರುತ್ತಿದೆ.   ಕೋವಿಡ್ ನಿಯಮ (COVID Guidelines) ಕಟ್ಟು ನಿಟ್ಟಾಗಿ ಅನುಸರಿಸಬೆಕಾಗಿರುವ ಕಾರಣ , ಅದೆಷ್ಟೋ ಕಾರ್ಯಕ್ರಮಗಳು ರದ್ದಾಗಿವೆ. ಮದುವೆ ಸಮಾರಂಭಗಳಿಗೂ ಇಷ್ಟೇ ಜನ ಸೇರಬೇಕು ಎಂಬ ನಿಯಮವಿದೆ. ಅಲ್ಲದೆ ಮದುವೆ ಸಮಾರಂಭದಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಹೀಗಿರುವಾಗ ಮದುವೆ ಸಮಾರಂಭಗಳ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲೂ ಹರಿದಾಡುತ್ತಿವೆ. ಕೆಲ ವಿಡಿಯೋಗಳನ್ನು ನೋಡಿದರೆ ಅಯ್ಯೋ ಅನಿಸಿದರೆ, ಇನ್ನು ಕೆಲವನ್ನು ನೋಡಿದರೆ ನಗು ತಡೆಯುವುದೇ ಇಲ್ಲ. 


Marriage) ಸಮಾರಂಭದಲ್ಲೂ ಸಾಮಾಜಿಕ ಅಂತರವನ್ನು (Social distancing) ಕಾಯ್ದುಕೊಳ್ಳಲೇ ಬೇಕು ಎಂಬ ನಿಯಮವಿದೆ. ಈ ನಿಯಮ ಪಾಲಿಸುತ್ತಿರುವ ವಧು ವರರ ವಿಡೀಯೋ ಇದೀಗ ವೈರಲ್ (Viral video) ಆಗಿದೆ. ಈ ವಿಡೀಯೋದಲ್ಲಿ ವಧು ವರರು ಮಾಲೆ ಹಾಕುವ ವೇಳೆ ಉದ್ದವಾದ ಕೋಲನ್ನು ಬಳಸಿದ್ದಾರೆ. ಇದು ವಧು ವರರರಿಗೆ ಫಜೀತಿಯಾಗಿದ್ದು, ವಿಡಿಯೋ ನೊಡಿದವರು ಮಾತ್ರ ನಕ್ಕು ನಕ್ಕು ಸುಸ್ತಾಗುತ್ತಾರೆ. 


COMMERCIAL BREAK
SCROLL TO CONTINUE READING

 


 ಇದನ್ನೂ ಓದಿ Edappadi K Palaniswami : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಳನಿಸ್ವಾಮಿ..!


ಈ ವಿಡಿಯೋವನ್ನು ಐಪಿಎಸ್ ದೀಪಂಶು ಕಬ್ರಾ ಟ್ವಿಟರ್‌ನಲ್ಲಿ (Twitter) ಹಂಚಿಕೊಂಡಿದ್ದಾರೆ. ವಧು-ವರರು ವೇದಿಕೆಯಲ್ಲಿ ಕರೋನಾ ನಿಯಮಗಳನ್ನು ಅನುಸರಿಸುತ್ತಿರುವುದಕ್ಕೆ ಜನರಿಂದ ಬಹಳ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. 
 
ದೇಶದಲ್ಲಿ ದಿನೇ ದಿನೇ ಕರೋನಾ (COVID-19) ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದಿನವೊಂದಕ್ಕೆ ಸುಮಾರು, 3 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕರೋನಾ ವಿರುದ್ಧ ಸೆಣಸಾಡಲು ಎಲ್ಲಾ ರಾಜ್ಯಗಳು ಕೂಡಾ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್ (Lockdown) ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆ ಮತ್ತು ಇತರ ಸಮಾರಂಭಗಳಿಗೆ ವಿನಾಯಿತಿ ನೀಡಲಾಗಿದ್ದರೂ, ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿದೆ.  ಕೋವಿಡ್ ನಿಯಮ ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. 


 ಇದನ್ನೂ ಓದಿ West Bengal Elections 2021 : ಪಶ್ಚಿಮ ಬಂಗಾಳದಲ್ಲಿ ದೀದಿ ಗೆಲುವಿಗೆ ಪ್ರಮುಖ 5 ಕಾರಣಗಳು : ಇಲ್ಲಿವೆ ನೋಡಿ 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.