Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..!

ಎಫ್ಎಸ್ ಸುಸಂತಾ ನಂದಾ  ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ ನಂತರ ಈ ವಿಡಿಯೋ ಬೆಳಕಿಗೆ ಬಂದಿದೆ. 

Written by - Ranjitha R K | Last Updated : Apr 29, 2021, 07:09 PM IST
  • ಮರುಭೂಮಿಯಲ್ಲೂ ಹೂವುಗಳು ಅರಳುತ್ತವೆ.
  • ಮರುಭೂಮಿಯಲ್ಲಿ ಅರಳಿ ನಿಂತಿರುವ ಹೂವುಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
  • ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ.
Desert Rose Tree: ಮರುಭೂಮಿಯಲ್ಲಿ ಅರಳಿ ನಿಂತ ಪುಷ್ಪಗಳು: ಸ್ವರ್ಗವೇ ಧರೆಗಿಳಿದಂಥಹ ನೋಟ..! title=
ಮರುಭೂಮಿಯಲ್ಲಿ ಅರಳಿ ನಿಂತಿರುವ ಹೂವುಗಳ ವಿಡಿಯೋ (photo twitter)

Desert Rose Tree:  ಮರುಭೂಮಿಯಲ್ಲೂ ಹೂವುಗಳು ಅರಳುತ್ತವೆ. ಮರುಭೂಮಿಯ  ಹೂವುಗಳು ಎಷ್ಟು ನಯನ ಮನೋಹರವಾಗಿರುತ್ತದೆಯೆಂದರೆ, ನೋಡಿದವರು ನೋಡುತ್ತಲೇ ಇರುತ್ತಾರೆ.  ಇದೀಗ  ಮರುಭೂಮಿಯಲ್ಲಿ ಅರಳಿ ನಿಂತಿರುವ ಹೂವುಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಈ ವಿಡಿಯೋ ವೀಕ್ಷಿಸಿದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.   

ಎಫ್ಎಸ್ ಸುಸಂತಾ ನಂದಾ (IFS Susanta Nanda)  ಅವರು ಸೋಶಿಯಲ್ ಮೀಡಿಯಾದಲ್ಲಿ (Social media) ಈ ವಿಡಿಯೋವನ್ನು ಶೇರ್ ಮಾಡಿದ ನಂತರ ಈ ವಿಡಿಯೋ ಬೆಳಕಿಗೆ ಬಂದಿದೆ. 

 

ಇದನ್ನೂ ಓದಿ : 35 ಗರ್ಲ್ ಫ್ರೆಂಡ್ಸ್ ಗಳ ಜೊತೆ ಆಟವಾಡುತ್ತಿದ್ದ ಭೂಪ, ಒಂದೇ ತಪ್ಪಿನಿಂದ ಹೀಗೆ ಸಿಕ್ಕಿ ಬಿದ್ದ..!

ಈ ವಿಡಿಯೋದಲ್ಲಿ ಒಂದಲ್ಲ, ಎರಡಲ್ಲ ಸಾವಿರಾರು ಹೂವುಗಳು (Flower) ಅರಳಿ ನಿಂತಿರುವುದು ಕಂಡುಬರುತ್ತದೆ.  ಅಲ್ಲದೆ ವಿಭಿನ್ನ ಬಣ್ಣಗಳಲ್ಲಿ ಇರುವ ಈ ಪುಷ್ಪಗಳು ಎಂಥವರನ್ನೂ ಮನಸೂರೆಗೊಳಿಸದೆ ಇರದು .  ವೀಡಿಯೊದಲ್ಲಿ ಕಂಡುಬರುವ ಮರುಭೂಮಿ ಗುಲಾಬಿ (Desert Rose) ಒಂದು ರೀತಿಯ ಸಣ್ಣ ಮರವಾಗಿದೆ. ಅವು ಗುಲಾಬಿ, ಬಿಳಿ  ಕೆಂಪು ಬಣ್ಣಗಳಲ್ಲಿ ಹೂವುಗಳಲ್ಲಿ ಕಂಡು ಬರುತ್ತವೆ.

ಈ  ವೀಡಿಯೊದಲ್ಲಿ ಇರುವ ನೋಟ ಯೆಮನ್‌ನ ಮರುಭೂಮಿಯದ್ದಾಗಿದೆ. ಈ ನೋಟ ಎಲ್ಲರನ್ನೂ ಮಂತ್ರ ಮಗ್ನರನ್ನಾಗಿಸಿದ್ದಂತೂ ಸುಳ್ಳಲ್ಲ..

ಇದನ್ನೂ ಓದಿ : ಹದಿನೈದು ವರ್ಷ ಕೆಲಸಕ್ಕೆ ಚಕ್ಕರ್, ಆದರೂ ತಿಂಗಳ ಕೊನೆಗೆ ಬರುತ್ತಿತ್ತು ಸ್ಯಾಲರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News