ನವದೆಹಲಿ: ಸಿಂಗಲ್ ಶಾಟ್ ಜಾನ್ಸನ್ ಮತ್ತು ಜಾನ್ಸನ್ ಕೊರೊನಾವೈರಸ್ ಲಸಿಕೆ ಬಳಕೆಗೆ ಶುಕ್ರವಾರದಂದು ಬ್ರಿಟನ್  ಅನುಮೋದನೆ ನೀಡಿದೆ ಎಂದು ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಹೆಚ್‌ಆರ್‌ಎ) ತಿಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Corona Vaccination ವಿಷಯದಲ್ಲಿ ದಾಖಲೆ ಬರೆದ ಭಾರತ


'ಇದು ಯುಕೆಯ ಭಾರಿ ಯಶಸ್ವಿ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ, ಇದು ಈಗಾಗಲೇ 13,000 ಕ್ಕೂ ಹೆಚ್ಚು ಜೀವಗಳನ್ನು ಉಳಿಸಿದೆ, ಮತ್ತು ಈ ಭೀಕರ ವೈರಸ್‌ನಿಂದ ಜನರನ್ನು ರಕ್ಷಿಸಲು ಸಹಾಯ ಮಾಡಲು ನಾವು ಈಗ ನಾಲ್ಕು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ಅನುಮೋದಿಸಿದ್ದೇವೆ" ಎಂದು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದಾರೆ.


ಇದನ್ನೂ ಓದಿ- Corona Vaccination - 60 ದಿನಗಳಲ್ಲಿ 50 ಕೋಟಿ ಭಾರತೀಯರಿಗೆ ಲಸಿಕೆ ಹೇಗೆ ಸಾಧ್ಯ? ಇಲ್ಲಿದೆ Azim Premji Idea


ಸಿಂಗಲ್-ಡೋಸ್ Johnson & Johnson ಲಸಿಕೆ ಮುಂದಿನ ತಿಂಗಳುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸರ್ಕಾರ ಸರ್ಕಾರ ಹೇಳಿದೆ.ಈಗಾಗಲೇ ಬ್ರಿಟನ್ ಸುಮಾರು 20 ಮಿಲಿಯನ್ ಡೋಸ್ ಲಸಿಕೆಗೆ ಆರ್ಡರ್ ಮಾಡಿದೆ.ಕೊರೊನಾವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಈ ಲಸಿಕೆ ಶೇಕಡಾ 72 ರಷ್ಟು ಪರಿಣಾಮಕಾರಿ ಎಂದು ಸಂಶೋಧನೆಗಳು ಹೇಳಿವೆ.


ಬ್ರಿಟನ್ ಇದುವರೆಗೆ 62 ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ನೀಡಿದೆ, ಮುಖ್ಯವಾಗಿ ಫಿಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳನ್ನು ಬಳಸುತ್ತಿದೆ. ಜೊತೆಗೆ ಮಾಡರ್ನಾ ಲಸಿಕೆ ಬಳಕೆಯನ್ನು ಅನುಮೋದಿಸಿದೆ. ಈಗ ತಿಂಗಳುಗಳ ಕಾಲ ಪ್ರಕರಣಗಳ ಕುಸಿತದ ನಂತರ ಬ್ರಿಟನ್ ನಲ್ಲಿ ಮತ್ತೆ ಏರಿಕೆಯಾಗಲು ಪ್ರಾರಂಭಿಸಿವೆ, ಇದು ಜೂನ್ 21 ರಂದು ದೇಶವನ್ನು ಪುನಃ ತೆರೆಯುವ ಲೆಕ್ಕಾಚಾರಕ್ಕೆ ಅಡ್ಡಿಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.