#NewYearOffer ಕೇವಲ 101 ರೂಪಾಯಿಗೆ ಖರೀದಿಸಿ Vivo ಸ್ಮಾರ್ಟ್ ಫೋನ್!
ಕಂಪನಿಯು ವೀವೋ ನೆಕ್ಸ್, ವೈವೋ V11, ವಿವೋ V11 ಪ್ರೊ ಮತ್ತು ವೀವೋ Y95 ಸೇರಿದಂತೆ ಇತರ ಸ್ಮಾರ್ಟ್ಫೋನ್ಗಳಿಗೆ ಈ ವಿಶೇಷ ಕೊಡುಗೆ ಲಭ್ಯವಿದೆ.
ನವದೆಹಲಿ: ಹೊಸವರ್ಷಾಚರಣೆ ಸಂಭ್ರಮದಲ್ಲಿ ಪ್ರಸಿದ್ಧ ಮೊಬೈಲ್ ಕಂಪನಿ Vivo ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. ಈ ಸುಸಂದರ್ಭದಲ್ಲಿ ನೀವೇನಾದರೂ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಆಲೋಚಿಸಿದ್ದರೆ, ಕೇವಲ 101 ರೂ.ಗಳನ್ನೂ ಪಾವತಿಸಿ ಹೊಸ ವೀವೋ ಸ್ಮಾರ್ಟ್ ಫೋನ್ ಖರೀದಿಸಬಹುದು.
ಕಂಪನಿಯು ವೀವೋ ನೆಕ್ಸ್, ವೈವೋ V11, ವಿವೋ V11 ಪ್ರೊ ಮತ್ತು ವೀವೋ Y95 ಸೇರಿದಂತೆ ಇತರ ಸ್ಮಾರ್ಟ್ಫೋನ್ಗಳಿಗೆ ವಿಶೇಷ ಕೊಡುಗೆ ನೀಡಿದ್ದು, ಇದಕ್ಕೆ 'New Phone, New You' ಎಂದು ಹೆಸರಿಸಿದೆ. ಈ ಕೊಡುಗೆ ಮೂಲಕ ಗ್ರಾಹಕರು ಕೇವಲ 101 ರೂಪಾಯಿಗಳನ್ನು ಪಾವತಿಸಿ, 6 ತಿಂಗಳ EMI ನಲ್ಲಿ ಸ್ಮಾರ್ಟ್ಫೋನ್ ಖರೀದಿಸಬಹುದು.
ಏನಿದು ವಿಶೇಷ ಕೊಡುಗೆ?
ಈ ಕೊಡುಗೆ ಪಡೆಯಲು ಆನ್ಲೈನ್ ಶಾಪಿಂಗ್ ನಲ್ಲಿ ಅವಕಾಶವಿರುವುದಿಲ್ಲ. ಗ್ರಾಹಕರು ನೇರವಾಗಿ ವೀವೋ ಸ್ಟೋರ್ಗಳಿಗೆ ತೆರಳಿ ಮೊಬೈಲ್ ಖರೀದಿಸಬಹುದು. ಈ ಕೊಡುಗೆ ಜನವರಿ 31ರವರೆಗೆ ಮಾತ್ರ ಲಭ್ಯವಿರಲಿದ್ದು, 10,000ರೂ.ಗಳಿಗಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಗ್ರಾಹಕರು 6 ತಿಂಗಳ EMIನಲ್ಲಿ ಸ್ಮಾರ್ಟ್ ಫೋನ್ ಖರೀದೀಸಬಹುದು.
ಪೂರ್ಣ ದರ ಪಾವತಿಸಬೇಕಿದ್ದರೂ ಆರಂಭಿಕ ಪಾವತಿ ಅಗ್ಗ!
ಗ್ರಾಹಕರು ಈ ಕೊಡುಗೆಯಲ್ಲಿ ಸ್ಮಾರ್ಟ್ ಫೋನ್'ನ ಪೂರ್ಣ ಬೆಲೆ ಪಾವತಿಸಲೇಬೇಕಿದ್ದರೂ, ಆರಂಭಿಕ ಪಾವತಿ ಮೊತ್ತ ಬಹಳ ಕಡಿಮೆ ಇದೆ. ಹಾಗಾಗಿ ಸ್ಮಾರ್ಟ್ ಫೋನ್ ಖರೀದಿಸುವ ಸಂದರ್ಭದಲ್ಲಿ ಕೇವಲ 101 ರೂ. ಪಾವತಿಸಿ, ಉಳಿದ ಮೊತ್ತವನ್ನು 6 ಕಂತುಗಳಲ್ಲಿ ಪಾವತಿಸಬಹುದು. ಒಂದು ವೇಳೆ ನೀವು ಆ 101 ರೂ.ಗಳನ್ನೂ ಪಾವತಿಸದೇ ಮೊಬೈಲ್ ಖರೀದಿಸಲು ಇಚ್ಛಿಸಿದಲ್ಲಿ, ಅದಕ್ಕೂ ಒಂದು ಆಫರ್ ಘೋಷಿಸಲಾಗಿದೆ. ಅದರಂತೆ HDFC ಕ್ರೆಡಿಟ್ ಡೆಬಿಟ್ ಕಾರ್ಡ್ ಬಳಸಿ ಶಾಪಿಂಗ್ ಮಾಡಿದವರಿಗೆ 5% ಹೆಚ್ಚುವರಿ ರಿಯಾಯಿತಿಯೂ ದೊರೆಯಲಿದೆ.