DTH ಮಾರ್ಗಸೂಚಿಗಳ ಪರಿಷ್ಕರಣೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ
ದೇಶದಲ್ಲಿ ಡೈರೆಕ್ಟ್-ಟು-ಹೋಮ್ ಟೆಲಿವಿಷನ್ (ಡಿಟಿಎಚ್) ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಹೇಳಿದ್ದಾರೆ.
ನವದೆಹಲಿ: ದೇಶದಲ್ಲಿ ಡೈರೆಕ್ಟ್-ಟು-ಹೋಮ್ ಟೆಲಿವಿಷನ್ (ಡಿಟಿಎಚ್) ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಹೇಳಿದ್ದಾರೆ.
ಮಹಾಮೈತ್ರಿಯ ಮೂಲ ಅಜೆಂಡಾ ಮೋದಿಯನ್ನು ತೊಲಗಿಸುವುದು- ಜಾವಡೆಕರ್
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜವಾಡೇಕರ್, ಡಿಟಿಎಚ್‌ಗೆ 20 ವರ್ಷಗಳವರೆಗೆ ಪರವಾನಗಿ ನೀಡಲಾಗುವುದು ಮತ್ತು ತ್ರೈಮಾಸಿಕ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು. ಈ ಹಿಂದೆ, ಎಲ್ಲಾ ಸೇವಾ ಪೂರೈಕೆದಾರರಿಗೆ 10 ವರ್ಷಗಳ ಅವಧಿಗೆ ಪರವಾನಗಿ ನೀಡಲಾಗಿತ್ತು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ತಿಳಿಸಿದೆ.
ವಿರೋಧ ಪಕ್ಷಗಳಿಗೆ ಯಾವುದೇ ನೇತಾ,ನೀತಿ,ರಣನೀತಿ ಇಲ್ಲ- ಪ್ರಕಾಶ್ ಜಾವಡೆಕರ್
ದೇಶದಲ್ಲಿ ಡಿಟಿಎಚ್ ಸೇವೆಗಳನ್ನು ಒದಗಿಸುವ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ ಅನುಮೋದಿಸಲು ಕ್ಯಾಬಿನೆಟ್ ಇಂದು ನಿರ್ಧರಿಸಿದೆ. ಈಗ, ಡಿಟಿಎಚ್ ಪರವಾನಗಿಯನ್ನು 20 ವರ್ಷಗಳವರೆಗೆ ನೀಡಲಾಗುವುದು, ಪರವಾನಗಿ ಶುಲ್ಕವನ್ನು ತ್ರೈಮಾಸಿಕವಾಗಿ ಸಂಗ್ರಹಿಸಲಾಗುವುದು ಎಂದು ಜಾವೇಡಕರ್ ಹೇಳಿದರು.
ರಾಜಕೀಯ ಹತ್ಯೆಗಳಿಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲ - ಪ್ರಕಾಶ್ ಜಾವಡೇಕರ್
ನಿಯಂತ್ರಕ ಪ್ರಾಧಿಕಾರವು 2014 ರಲ್ಲಿ ಡಿಟಿಎಚ್ ಮತ್ತು ಮಲ್ಟಿ-ಸಿಸ್ಟಮ್ ಆಪರೇಟರ್ಸ್ (ಎಂಎಸ್ಒ) ಸೇವೆಗಳಿಗಾಗಿ ಪ್ಲಾಟ್‌ಫಾರ್ಮ್ ಸೇವೆಗಳಿಗಾಗಿ ನಿಯಂತ್ರಕ ಫ್ರೇಮ್‌ವರ್ಕ್ ಕುರಿತು ಶಿಫಾರಸುಗಳನ್ನು ಬಿಡುಗಡೆ ಮಾಡಿತು, ಇವುಗಳನ್ನು ಅಕ್ಟೋಬರ್ 2020 ರಲ್ಲಿ ಪ್ರಸಾರ ಸಚಿವಾಲಯವು ಉಲ್ಲೇಖಿಸಿತು. MSO ಅನ್ನು ಅದರ ಚಂದಾದಾರರಿಗೆ ಕೇಬಲ್ ಟಿವಿ ಸೇವೆಗಳನ್ನು ಒದಗಿಸುವ ಅಧಿಕೃತ ಸೇವಾ ಪೂರೈಕೆದಾರ ಎಂದು ವ್ಯಾಖ್ಯಾನಿಸಲಾಗಿದೆ.