Shocking Accident Video: ನೀವು ರಸ್ತೆಯಲ್ಲಿ ಅನೇಕ ಭೀಕರ ಅಪಘಾತಗಳನ್ನು ನೋಡಿರಬಹುದು. ಆದರೆ ಕೆಲವೊಂದು ಅಪಘಾತಗಳು ಎಷ್ಟೊಂದು ಭಯಾನಕವಾಗಿರುತ್ತವೆಂದರೆ, ನೋಡುಗರ ಎದೆ ಝಲ್ಲೇನ್ನುತ್ತದೆ. ಇತ್ತೀಚಿನ ದಿನಗಳಲ್ಲಿ ಇಂತಹುದೇ ಒಂದು ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದರೆ ನೀವು ನಿಮ್ಮ ಕಣ್ಣುಗಳ ಮೇಲಿನ ವಿಶ್ವಾಸವೇ ಕಳೆದುಕೊಳ್ಳುವಿರಿ . ಈ ವೀಡಿಯೊದಲ್ಲಿ, ಎರಡು ಕಾರುಗಳ ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಒಂದು ಕಾರಿನ ಚಾಲಕ ಗಗನಕ್ಕೆ ತೂರಲ್ಪಟ್ಟಿದ್ದಾನೆ. ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ. ವಿಡಿಯೋ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಷಣ ಸ್ಥಬ್ಧರಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Shocking Video: ಈ ಹುಚ್ಚಾಟಿ ಪ್ರೇಮಿಯ ಹುಚ್ಚಾಟ ನೋಡಿ ತಲೆ ಒಂದು ಕ್ಷಣ ದಿಮ್ಮೆನ್ನುವುದು ಗ್ಯಾರಂಟಿ.. ವಿಡಿಯೋ ನೋಡಿ

ಆಘಾತಕಾರಿ ವಿಡಿಯೋ ನೋಡಿ
ರಸ್ತೆಯಲ್ಲಿ ಹಲವು ವಾಹನಗಳು ಓಡುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಷ್ಟರಲ್ಲಿ ಎದುರಿನಿಂದ ಬಂದ ಕಾರು ಮತ್ತೊಂದು ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಎರಡು ಕಾರುಗಳ ಡಿಕ್ಕಿ ಎಷ್ಟು ವೇಗವಾಗಿತ್ತು ಎಂದರೆ ಒಂದು ಕಾರು ಚಲಾಯಿಸುತ್ತಿದ್ದ ಚಾಲಕ ಗಾಳಿಗೆ ಹಾರಿ ಹೋಗಿದ್ದಾನೆ. ಆತ ಗಾಳಿಯಲ್ಲಿ ತೋರಿ ದೂರಕ್ಕೆ ಹೋಗಿ ಬೀಳುವುದನ್ನು ನೀವು ನೋಡಬಹುದು. ಈ ಅಪಾಯಕಾರಿ ಅಪಘಾತದ ವೀಡಿಯೋವನ್ನು ನೋಡಿದರೆ, ಆ ವ್ಯಕ್ತಿ ಕಾರುಗಳ ಮಧ್ಯೆ ಸಂಭವಿಸಿದ ಇಂತಹ ಭಯಾನಕ  ಡಿಕ್ಕಿಯಲ್ಲಿ ಹೇಗೆ ಹೊರಬಂದು ಗಾಳಿಯಲ್ಲಿ ತೂರಿದ ಎಂದು ನೀವೂ ಕೂಡ ಯೋಚನೆಗೋಳಗಾಗುವಿರಿ. ವಿಡಿಯೋ ನೋಡಿ....


Video: ಹೈದ್ರಾಬಾದ್ ನಲ್ಲಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿದ ರಸ್ತೆ, ವಿಡಿಯೋ ನೋಡಿ


@ViciousVideos ಹೆಸರಿನ ಟ್ವಿಟರ್ ಖಾತೆಯ ಮೂಲಕ ಈ  ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದ್ದು, ನೂರಾರು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಹೊರಹೊಮ್ಮಿದೆ ಎಂಬುದು ತಿಳಿದುಬಂದಿಲ್ಲ. ಆದರೆ, ವೀಡಿಯೋ ನೋಡಿದ ಮೇಲೆ ಜನರ ಸ್ಥಿತಿ ಮಾತ್ರ ಹದಗೆಟ್ಟಿರುವುದು ಮಾತ್ರ ನಿಜ. ಒಬ್ಬ ವ್ಯಕ್ತಿ ಕಾರಿನಿಂದ ಗಾಳಿಯಲ್ಲಿ ಬಹಳ ದೂರ ದೂರದವರೆಗೆ ಹಾರಿ ನಂತರ ಕೆಳಗೆ ಬೀಳುವ ರೀತಿ. ಆತನನ್ನು ನೋಡಿದರೆ ಆ ವ್ಯಕ್ತಿಗೆ ಬಹಳ ಗಂಭೀರವಾದ ಗಾಯಗಳಾಗಿರಬೇಕೆಂದು ತೋರುತ್ತದೆ. ವ್ಯಕ್ತಿಯ ಜೀವ ಉಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಪ್ರಸ್ತುತ ತಿಳಿದುಬಂದಿಲ್ಲ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.