Road Caved Downside And Collapsed: ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಜನನಿಬಿಡ ಪ್ರದೇಶದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ, ಘಟನೆ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ಇದ್ದಕ್ಕಿದ್ದಂತೆ ಜನನಿಬಿಡ ರಸ್ತೆಯೊಂದು ಪಾತಾಳಕ್ಕೆ ಕುಸಿದಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಮತ್ತು ಬಂಡಿಗಳು ಅದರೊಳಗೆ ಹೂತುಹೋಗಿವೆ. ಘಟನೆ ಮುನ್ನೆಲೆಗೆ ಬಂದ ಕೂಡಲೇ ಅಲ್ಲಿ ಭಾರಿ ಗೊಂದಲದ ವಾತಾವರಣ ಉಂಟಾಗಿ ಜನರು ಇತ್ತಿಂದತ್ತ ಓಡತೊಡಗಿದ್ದಾರೆ.
ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿದ ರಸ್ತೆ
ಈ ಘಟನೆ ಹೈದರಾಬಾದಿನ ಗೋಶಾಮಹಲ್ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಲಿನ ಚಂದನವಾಡಿ ಪ್ರದೇಶದಲ್ಲಿ ಚರಂಡಿಯ ಪಕ್ಕದ ರಸ್ತೆಯೊಂದು ಏಕಾಏಕಿ ಮುರಿದು ಪಾತಾಳಕ್ಕೆ ಕುಸಿದಿದೆ. ರಸ್ತೆ ಕುಸಿಯುತ್ತಿದ್ದಂತೆ ಅದರ ಮೇಲೆ ನಿಂತಿದ್ದ ಮತ್ತು ಚಲಿಸುತ್ತಿದ್ದ ಹಲವು ವಾಹನಗಳು ಮತ್ತು ಬಂಡಿಗಳು ರಸ್ತೆಯಿಂದಿಗೆ ಪಾತಾಳಕ್ಕೆ ಇಳಿದಿವೆ. ಘಟನೆಯಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದರ ಹೊರತಾಗಿ ಯಾವುದೇ ಸಾವು ನೋವು ಸಂಭವಿಸಿದ ಸುದ್ದಿ ವರದಿಯಾಗಿಲ್ಲ.
ಇದನ್ನೂ ಓದಿ-Trending News: ಅದ್ವಿತೀಯ ಶಕ್ತಿಯುಳ್ಳ ಈ ಜೀವ ದಿಢೀರ್ ಮಾಯವಾಗುತ್ತದೆ, ಹುಡುಕಾಡಿದ್ರು ಸಿಗಲ್ಲ !
ಚರಂಡಿ ಮೇಲೆ ರಸ್ತೆ ನಿರ್ಮಿಸಲಾಗಿದೆ
ಘಟನೆಯ ನಂತರ ಸಾಕಷ್ಟು ಪ್ರಮಾಣದಲ್ಲಿ ಜನರು ಭಯಭೀತರಾಗಿದ್ದಾರೆ ಮತ್ತು ಜನರು ಪರಸ್ಪರ ಸಹಾಯದಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ, ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಪೊಲೀಸ್ ತಂಡ ಮತ್ತು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಪರಿಸ್ಥಿತಿ ಹತೋಟಿಗೆ ತಂದು ರಸ್ತೆಯ ಕೆಳಗಿರುವ ಚರಂಡಿ ಮುರಿದುಹೋದ ಕಾರಣ ಈ ಘಟನೆ ಸಂಭವಿಸಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ರಸ್ತೆಯನ್ನು ಚರಂಡಿಯ ಮೇಲೆಯೇ ನಿರ್ಮಿಸಲಾಗಿದೆ.
ಇದನ್ನೂ ಓದಿ-Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ
ಪರಿಸ್ಥಿತಿಯನ್ನು ಹತೋಟಿಗೆ ತಂದ ಅಧಿಕಾರಿಗಳು
ಪ್ರಸ್ತುತ ಪೊಲೀಸ್ ತಂಡ ಸ್ಥಳದಲ್ಲಿದ್ದು, ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ರಸ್ತೆ ಗುಂಡಿಗೆ ಕುಸಿದ ನಂತರ ಜನರು ತಮ್ಮ ತಮ್ಮ ವಾಹನಗಳನ್ನು ಹೊರ ತೆಗೆಯುತ್ತಿದ್ದಾರೆ. ಗುಂಡಿ ಬಿದ್ದ ರಸ್ತೆಯನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
हैदराबाद में बीच बाज़ार धंस गई सड़क, भीड़-भाड़ इलाके में मचा हड़कंप#Hyderabad #Viral pic.twitter.com/cVG3GdWL9I
— Zee News (@ZeeNews) December 23, 2022
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.