Flood Video: ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೀರಲ್ಲಿ ಕೊಚ್ಚಿಹೋದ ನೂರಾರು ವಾಹನಗಳು, ವಿಡಿಯೋ ನೋಡಿ

Saudi Arabia Flood Video:ವಿಶ್ವಾದ್ಯಂತದ ನಮ್ಮ ಮುಸ್ಲಿಂ ಬಾಂಧವರಿಗೆ ಮೆಕ್ಕಾ ಒಂದು ಪವಿತ್ರ ತೀರ್ಥಕ್ಷೇತ್ರವಾಗಿದೆ. ಆದರೆ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಅಲ್ಲಿನ ದೊಡ್ಡ ಮಸೀದಿಯಲ್ಲಿಯೂ ಕೂಡ ಪ್ರವಾಹ ಉಂಟಾಗಿದೆ.  

Written by - Nitin Tabib | Last Updated : Dec 24, 2022, 04:50 PM IST
  • ಮೆಕ್ಕಾದ ಉತ್ತರದಲ್ಲಿರುವ ಜೆಡ್ಡಾ ಪ್ರಾಂತ್ಯದಲ್ಲಿ ಭಾರೀ ಮಳೆಯೊಂದಿಗೆ ಪ್ರವಾಹ ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ.
  • ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ ಜೆಡ್ಡಾದಲ್ಲಿ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಮಳೆ ಅಲ್ಲಿ ತೀವ್ರತರವಾದ ಹಾಹಾಕಾರ ಸೃಷ್ಟಿಸಿದೆ.
Flood Video: ಮೆಕ್ಕಾದಲ್ಲಿ ಹಠಾತ್ ಪ್ರವಾಹ, ನೀರಲ್ಲಿ ಕೊಚ್ಚಿಹೋದ ನೂರಾರು ವಾಹನಗಳು, ವಿಡಿಯೋ ನೋಡಿ title=
Mecca Flood

Flood In Mecca: ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಶುಕ್ರವಾರ (ಡಿಸೆಂಬರ್ 23) ರಾತ್ರಿ ಸುರಿದ ಧಾರಾಕಾರ ಮಳೆಯ ನಂತರ ಹಠಾತ್ ಪ್ರವಾಹ ಸ್ಥಿತಿ ಉಂಟಾಗಿದೆ. ಈ ಪ್ರವಾಹ ನಗರದ ವಾಹನಗಳು ಮತ್ತು ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯನ್ನುಂಟು ಮಾಡಿದೆ. ಮೆಕ್ಕಾದಿಂದ ಹೊರಹೊಮ್ಮಿದ ಒಂದು ವೀಡಿಯೊದಲ್ಲಿ, ಭಾರಿ ನೀರಿನ ಪ್ರವಾಹದಲ್ಲಿ ವಾಹನಗಳು ಹೇಗೆ ಕೊಚ್ಚಿಕೊಂಡು ಹೋಗುತ್ತಿವೆ ಎಂಬುದನ್ನು ನೀವು ನೋಡಬಹುದು ಮತ್ತು ಅನೇಕ ಮುಖ್ಯ ರಸ್ತೆಗಳು ನೀರಿನಿಂದ ಹೇಗೆ ಆವ್ರುತ್ತವಾಗಿವೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು.

ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವದವರೆಗೆ ಮೆಕ್ಕಾದಲ್ಲಿ ಧಾರಾಕಾರ ಮಳೆ ಸುರಿದಿದೆ. ರಾಷ್ಟ್ರೀಯ ಹವಾಮಾನ ಕೇಂದ್ರವು ಶುಕ್ರವಾರ ಮಕ್ಕಾ ಪ್ರಾಂತ್ಯದಲ್ಲಿ ಹವಾಮಾನ ಎಚ್ಚರಿಕೆ ನೀಡಿದೆ. ಅಲ್ಲಿನ ರಾನಿಯಾ, ತೈಫ್, ಅದಮ್ ಮತ್ತು ಮೇಸನ್ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳ ಹಾರಾಟವನ್ನು ಕೂಡ ರದ್ದುಗೊಳಿಸಲಾಗಿದೆ.

ನವೆಂಬರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು
ಮೆಕ್ಕಾದ ಉತ್ತರದಲ್ಲಿರುವ ಜೆಡ್ಡಾ ಪ್ರಾಂತ್ಯದಲ್ಲಿ ಭಾರೀ ಮಳೆಯೊಂದಿಗೆ ಪ್ರವಾಹ ಮತ್ತು ಗುಡುಗು ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಕೇಂದ್ರವು ಎಚ್ಚರಿಕೆ ನೀಡಿದೆ. ನವೆಂಬರ್‌ನಲ್ಲಿಯೂ ಮಳೆಯಿಂದಾಗಿ ಕರಾವಳಿ ನಗರವಾದ ಜೆಡ್ಡಾದಲ್ಲಿ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಮಳೆ ಅಲ್ಲಿ ತೀವ್ರತರವಾದ ಹಾಹಾಕಾರ ಸೃಷ್ಟಿಸಿದೆ.

ಇದನ್ನೂ ಓದಿ-Video: ಹೈದ್ರಾಬಾದ್ ನಲ್ಲಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿದ ರಸ್ತೆ, ವಿಡಿಯೋ ನೋಡಿ

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ
ಪ್ರಬಲವಾದ ನೀರಿನ ಪ್ರವಾಹದಲ್ಲಿ ಕಾರುಗಳು ಕೊಚ್ಚಿಹೋಗುತ್ತಿರುವ ವಿಡಿಯೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚರಂಡಿ ಒಡೆದು ಹೋಗಿದ್ದರಿಂದ ಮಳೆ ನೀರು ರಸ್ತೆಗಳ ಮೇಲೆ ಹರಿದಿದೆ. ಕಿಂಗ್ ಅಬ್ದುಲ್ ಅಜೀಜ್ ವಿಮಾನ ನಿಲ್ದಾಣವನ್ನು ತಲುಪುವ ಮೊದಲು, ವಿಮಾನಗಳ ಬಗ್ಗೆ ಮಾಹಿತಿ ಪಡೆಯಲು ಸೂಚನೆಗಳನ್ನು ನೀಡಲಾಗಿದೆ.

ಇದನ್ನೂ ಓದಿ-Shocking Video: ಈ ಹುಚ್ಚಾಟಿ ಪ್ರೇಮಿಯ ಹುಚ್ಚಾಟ ನೋಡಿ ತಲೆ ಒಂದು ಕ್ಷಣ ದಿಮ್ಮೆನ್ನುವುದು ಗ್ಯಾರಂಟಿ.. ವಿಡಿಯೋ ನೋಡಿ

ಮಳೆಯ ನಂತರ ನಗರದ ಶಾಲೆಗಳಿಗೆ ರಜೆ
ಮೆಕ್ಕಾ ವಿಶ್ವಾಧ್ಯಂತದ ಮುಸ್ಲಿಂ ಬಾಂಧವರಿಗೆ ಅತ್ಯಂತ ಪವಿತ್ರ ಯಾತ್ರಾ ತಾಣವಾಗಿದೆ. ಅಲ್ಲಿಗೆ ಭೇಟಿ ನೀಡಿದ ಯಾತ್ರಾರ್ಥಿಗಳು ಕೂಡ ಮಳೆಯಿಂದಾಗಿ ಭಾರಿ ತೊಂದರೆ ಅನುಭವಿಸಬೇಕಾದ ಪ್ರಸಂಗ ಎದುರಾಗಿದೆ. ಮಳೆಯ ನಂತರ ನಗರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ವರ್ಷದ ಜನವರಿಯಲ್ಲಿಯೂ ಸಹ, ಸೌದಿಯ ಜನರು ತಾಪಮಾನದಲ್ಲಿ ಭಾರಿ ಏರುಪೇರಾದ ನಂತರ ಭಾರೀ ಹಿಮಪಾತದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News