ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಲಂಚದ ಆರೋಪದ ಮೇಲೆ ಏಮ್ಸ್ ಭೋಪಾಲ್ ನ ಹಿರಿಯ ಅಧಿಕಾರಿಯನ್ನು ಬಂಧಿಸಿದೆ.ಏಜೆನ್ಸಿ ಸೋಮವಾರದಂದು ಉಪ ನಿರ್ದೇಶಕರ ಆವರಣದಲ್ಲಿ ಶೋಧ ನಡೆಸಿದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿದೆ.


COMMERCIAL BREAK
SCROLL TO CONTINUE READING

ಆಸ್ಪತ್ರೆಗೆ ಸರಬರಾಜು ಮಾಡಿದ ಔಷಧಗಳು ಮತ್ತು ಇತರ ಉಪಭೋಗ್ಯದ ಪಾವತಿಗಳನ್ನು ಬಿಡುಗಡೆ ಮಾಡಲು ಉಪ ನಿರ್ದೇಶಕರು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.ಅವರು ದೂರುದಾರರಿಂದ 1 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.


ಇದನ್ನೂ ಓದಿ-Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ?


ಸಿಬಿಐ (CBI) 6.75 ಲಕ್ಷ (ಅಂದಾಜು) ರೂ. ಹಣವನ್ನು ವಶಕ್ಕೆ ಪಡೆದಿದೆ.ಆರೋಪಿಯು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಲ್ಲಿ,1.11 ಕೋಟಿ ರೂ ಇದೆ ಎನ್ನಲಾಗಿದೆ.ಅದರಲ್ಲಿ ಮ್ಯೂಚುವಲ್ ಫಂಡ್‌ನಲ್ಲಿನ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಮ್ಯಾಟ್ ಫಾರ್ಮ್‌ನಲ್ಲಿ  79.20 ಲಕ್ಷ ರೂ (ಅಂದಾಜು), ಚಿನ್ನದ ನಾಣ್ಯಗಳು/ಬಾರ್ ಅಳತೆ 465 ಗ್ರಾಂ (ಅಂದಾಜು) ಮತ್ತು ಪ್ಲಾಟ್ ಮತ್ತು ಫ್ಲಾಟ್‌ಗೆ ಸಂಬಂಧಿಸಿದ ದಾಖಲೆಗಳು, ಇತ್ಯಾದಿ ಇವೆ "ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.


ಲಂಚದ ಬೇಡಿಕೆ ಮತ್ತು ಸ್ವೀಕಾರಕ್ಕಾಗಿ 25.09.2021 ರಂದು ಸಿಬಿಐ ಉಪ ನಿರ್ದೇಶಕ (ಅಡ್ಮಿನರ್), ಏಮ್ಸ್, ಭೋಪಾಲ್ ಅವರನ್ನು ಬಂಧಿಸಿದೆ ಎನ್ನಲಾಗಿದೆ.


ಇದನ್ನೂ ಓದಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ವೈರಸ್-ಮುಕ್ತವಾಗಿಸಲು ಬಳಸಿ ಗೂಗಲ್‌ನ ಈ ಫೀಚರ್


ಅಧಿಕಾರಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ, ಇದರಲ್ಲಿ ಅವರು ಎಐಐಎಂಎಸ್, ಭೋಪಾಲ್ ಗೆ ನೀಡಿದ ಔಷಧಗಳು ಮತ್ತು ಇತರ ಉಪಭೋಗ್ಯ ವಸ್ತುಗಳ ಖಾತೆಯಲ್ಲಿ ಬಾಕಿ ಇರುವ ಬಿಲ್ಲುಗಳ ಪಾವತಿಯನ್ನು ಬಿಡುಗಡೆ ಮಾಡಲು ದೂರುದಾರರಿಂದ 2 ಲಕ್ಷ ರೂ.ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಬಂಧಿತ ಆರೋಪಿಯನ್ನು ಭೋಪಾಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮತ್ತು ಅಕ್ಟೋಬರ್ 1 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.