CBSE Board 12th Result 2021: CBSE ಮಂಡಳಿಯ 12ನೇ ತರಗತಿಯ ಫಲಿತಾಂಶ ಪ್ರಕಟ, ಈ ಡೈರೆಕ್ಟ್ ಲಿಂಕ್ ಬಳಸಿ ಫಲಿತಾಂಶ ಪರಿಶೀಲಿಸಿ
CBSE Board 12th Result 2021: ಸಿಬಿಎಸ್ಇ 12ನೇ ತರಗತಿಯ ಫಲಿತಾಂಶಗಳು ಪ್ರಕಟಗೊಂಡಿದ್ದು ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಆಗಿರುವ cbseresults.nic.inಗೆ ಭೇಟಿ ನೀಡುವ ಮೂಲಕ ಫಲಿತಾಂಶಗಳನ್ನು ಪರಿಶೀಲಿಸಬಹುದು.
CBSE Board 12th Result 2021: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಇಂದು ಮಧ್ಯಾಹ್ನ 12ಗಂಟೆಗೆ 12 ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ (CBSE 12th Exam Results Announced). ಇದಕ್ಕೂ ಮೊದಲು ಈ ಕುರಿತು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಸಿಬಿಎಸ್ಇ ಸೇರಿದಂತೆ ಎಲ್ಲಾ ರಾಜ್ಯಗಳ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಲು ಜುಲೈ 31 ಅಂತಿಮ ಡೆಡ್ ಲೈನ್ ನಿಗದಿಪಡಿಸಿತ್ತು. ಈ ಹಿನ್ನೆಲೆ CBSE 12ನೇ ತರಗತಿಯ ಫಲಿತಾಂಶ 2021 ಘೋಷಣೆಯ ಬಳಿಕ 12ನೇ ತರಗತಿಯ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನೆಮ್ಮದಿಯ ನಿಟ್ಟುಸಿರುವ ಬಿಡಲಿದ್ದಾರೆ.
Result Direct Link - ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳ ಫಲಿತಾಂಶ 2021
ಶೇ.99.37ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ, ವಿದ್ಯಾರ್ಥಿನಿಯರ ಮೇಲುಗೈ
ಈ ಬಾರಿ ಸುಮಾರು 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಬಿಎಸ್‌ಇಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಶೇ.99.37 ರಷ್ಟು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಉತ್ತೀರ್ಣರಾಗಿದ್ದಾರೆ (CBSE Class 12th Result) ಮತ್ತು ವಿದ್ಯಾರ್ಥಿನಿಯರು ಮತ್ತೆ ಮೇಲುಗೈ ಸಾಧಿಸಿದ್ದಾರೆ. ಅಂದರೆ, ಈ ಬಾರಿ ಶೇ.99.67 ರಷ್ಟು ವಿದ್ಯಾರ್ಥಿನೀಯರು ಉತ್ತೀರ್ಣರಾಗಿದ್ದರೆ, ಶೇ. 99.13 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದರೆ, ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರ ಉತ್ತೀರ್ಣದ ಪ್ರಮಾಣ ಶೇಕಡಾ 0.54 ಹೆಚ್ಚಾಗಿದೆ.
65184 ವಿಘ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗಿಲ್ಲ
65184 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಇಂದು ಘೋಷಿಸಲಾಗಿಲ್ಲ. ಹಲವು ಶಾಲೆಗಳು ತಪ್ಪಾದ ಡೇಟಾ ನೀಡುತ್ತವೆ ಅಥವಾ ಸಮಯಕ್ಕೆ ಸರಿಯಾಗಿ ಡೇಟಾವನ್ನು ಒದಗಿಸುವುದಿಲ್ಲ. ಈ ಕಾರಣದಿಂದಾಗಿ ಈ ವಿದ್ಯಾರ್ಥಿಗಳ ಫಲಿತಾಂಶವು ಬಂದಿಲ್ಲ. ಈ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶಗಳನ್ನು ಆಗಸ್ಟ್ 5 ರಂದು ಬಿಡುಗಡೆ ಮಾಡಲಾಗುತ್ತಿದೆ. ಇದೇ ವೇಳೆ, ಶೇಕಡಾ 0.47 ರಷ್ಟು ವಿದ್ಯಾರ್ಥಿಗಳು ವಿಭಾಗೀಯ ಪರೀಕ್ಷೆಯನ್ನು ನೀಡಬೇಕಾಗಿದೆ. 6149 ವಿದ್ಯಾರ್ಥಿಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಭಾಗೀಯ ಪರೀಕ್ಷೆಗಳಿಗೆ ಹಾಜರಾಗಬೇಕಿದೆ.
CBSE 12th Result : ಫಲಿತಾಂಶ ಅಂತಿಮಗೊಳಿಸುವ ಗಡುವು ವಿಸ್ತರಣೆ , ಈ ದಿನ ಹೊರ ಬೀಳಲಿದೆ ಫಲಿತಾಂಶ
CBSE ಆಪ್ಷನಲ್ ಪರೀಕ್ಷೆಯನ್ನು ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ಮಧ್ಯೆ ಆಯೋಜಿಸಲಾಗುತ್ತಿದೆ
ಮೌಲ್ಯಮಾಪನದ ಮಾನದಂಡಗಳಿಂದ ಪಡೆದ ಫಲಿತಾಂಶಗಳಿಂದ ತೃಪ್ತಿ ಹೊಂದಿಲ್ಲದ ವಿದ್ಯಾರ್ಥಿಗಳಿಗಾಗಿ ಮಂಡಳಿ ಸಿಬಿಎಸ್ಇ 12ನೇ ತರಗತಿಯ ಐಚ್ಛಿಕ ಪರೀಕ್ಷೆ ನಡೆಯಲಿದೆ. . ಶಿಕ್ಷಣ ಮಂಡಳಿಯು ಈ ಐಚ್ಛಿಕ ಪರೀಕ್ಷೆಯ ದಿನಾಂಕಗಳನ್ನು ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರವರೆಗೆ ನಿಗದಿಪಡಿಸಿದೆ. 12 ನೇ ತರಗತಿ ಫಲಿತಾಂಶ ಘೋಷಣೆಯ ನಂತರ ಸಿಬಿಎಸ್‌ಇ ಐಚ್ಛಿಕ ಪರೀಕ್ಷೆಗೆ ಹೆಸರು ನೋಂದಣಿಯ ಕಾರ್ಯ ಆರಂಭಗೊಳ್ಳಲಿದೆ.
IVRS, SMS ಮೂಲಕವೂ ಕೂಡ CBSE 12th Exam Results 2021 ಪರಿಶೀಲಿಸಬಹುದು.
CBSE 12th Exam Results 2021 ಫಲಿತಾಂಶಗಳು IVRS, SMSಗಳ ಮೂಲಕವೂ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ . ಮಂಡಳಿಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗಳಲ್ಲಿ ಸಿಬಿಎಸ್‌ಇ ಮೂಲಕ ಫಲಿತಾಂಶಗಳನ್ನು ಕಳುಹಿಸಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಸಿಬಿಎಸ್‌ಇ 12 ನೇ ಫಲಿತಾಂಶ 2021 ಅನ್ನು ತಿಳಿಯಲು ಸಿಬಿಎಸ್‌ಇ ಮಂಡಳಿ ನೀಡಿದ ಸಂಖ್ಯೆಗಳಿಗೆ ಕರೆ ಮಾಡಬಹುದು.
ಇದಕ್ಕಾಗಿ, ವಿದ್ಯಾರ್ಥಿಗಳು CBSE12 <ROLLNUMBER> <ADMITCARDNUMBER> ಅನ್ನು ನಮೂದಿಸಬೇಕು ಮತ್ತು ಅದನ್ನು 7738299899 ಸಂಖ್ಯೆಗೆ ಕಳುಹಿಸಬೇಕು. ಈ ರೀತಿಯಾಗಿ ಅವರು ತಮ್ಮ ಫಲಿತಾಂಶವನ್ನು ತಿಳಿಯಬಹುದು. ಉದಾಹರಣೆಗೆ - ನಿಮ್ಮ ರೋಲ್ ಸಂಖ್ಯೆ 231212 ಮತ್ತು ನಿಮ್ಮ ಅಡ್ಮಿಟ್ ಕಾರ್ಡ್ ಸಂಖ್ಯೆ ಎಬಿ 231212 ಆಗಿದ್ದರೆ, ನೀವು ಸಿಬಿಎಸ್ಇ 12 231212 ಎಬಿ 231212 ನಂತಹ ಸಂದೇಶವನ್ನು ಟೈಪ್ ಮಾಡಿ 7738299899 ಸಂಖ್ಯೆಗೆ ಕಳುಹಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ