CBSE Result: ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ, ಈ ರೀತಿ ಪರಿಶೀಲಿಸಿ

ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ ಎಂದು ಸಿಬಿಎಸ್ಇ ತಿಳಿಸಿದೆ.

Written by - Yashaswini V | Last Updated : Jul 30, 2021, 11:55 AM IST
  • ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಲಿದೆ
  • ಸಿಬಿಎಸ್ಇ 12ನೇ ತರಗತಿ ಫಲಿತಾಂಶವನ್ನು 30:30:40 ಸೂತ್ರದಡಿ ತಯಾರಿಸಲಾಗಿದೆ
  • ಈ ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಕೂಡ ಅವಕಾಶ ನೀಡಲಾಗುತ್ತದೆ
CBSE Result: ಇಂದು ಮಧ್ಯಾಹ್ನ 2 ಗಂಟೆಗೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶ, ಈ ರೀತಿ ಪರಿಶೀಲಿಸಿ title=
CBSE 12th result will be announced at 2pm today

ನವದೆಹಲಿ: ಬಹು ನಿರೀಕ್ಷಿತ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನ 12 ನೇ ತರಗತಿ ಫಲಿತಾಂಶ (CBSE Class 12th Result) ಇಂದು (ಜುಲೈ 30) ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಲಿದೆ. ಸಿಬಿಎಸ್‌ಇ ಮಂಡಳಿಯ ಅಧಿಕೃತ ವೆಬ್‌ಸೈಟ್ cbseresults.nic.in ಅಥವಾ cbse.gov.in ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ.

ಈ ಸೂತ್ರದ ಆಧಾರದ ಮೇಲೆ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ:
ಸಿಬಿಎಸ್ಇ 12ನೇ ತರಗತಿ ಫಲಿತಾಂಶವನ್ನು (CBSE Class 12th Result) 30:30:40 ಸೂತ್ರದಡಿ ತಯಾರಿಸಲಾಗಿದೆ.  ಇದರಲ್ಲಿ 10 ಮತ್ತು 11 ನೇ ತರಗತಿಯ ಅಂಕಗಳಿಗೆ 30-30 ಪ್ರತಿಶತದಷ್ಟು ವೆಟೆಜ್ ನೀಡಲಾಗಿದೆ ಮತ್ತು 12 ನೇ ತರಗತಿಯ ಆಂತರಿಕ ಪರೀಕ್ಷೆಗೆ 40% ವೆಟೆಜ್ ನೀಡಲಾಗಿದೆ. 

ಇದನ್ನೂ ಓದಿ- Home Insurance Scheme: ಪ್ರವಾಹ, ಭೂಕಂಪದಿಂದ ಮನೆ ಹಾನಿಗೊಳಗಾದರೆ ಸಿಗಲಿದೆ 3 ಲಕ್ಷ ರೂಪಾಯಿ!

ಸಿಬಿಎಸ್ಇ 12ನೇ ತರಗತಿ ಫಲಿತಾಂಶಕ್ಕಾಗಿ (Class 12th Result) ವಿದ್ಯಾರ್ಥಿಗಳ 10 ನೇ ತರಗತಿಯ 5 ರಲ್ಲಿ ಅತ್ಯುತ್ತಮ 3 ಪತ್ರಿಕೆಗಳ ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂತೆಯೇ, 11 ನೇ ತರಗತಿಯ ಅತ್ಯುತ್ತಮ 3 ಪತ್ರಿಕೆಗಳ ಮಾರ್ಕ್ಸ್ ಅನ್ನು ಸಹ ತೆಗೆದುಕೊಳ್ಳಲಾಗಿದೆ. ಅದೇ ಸಮಯದಲ್ಲಿ, 12 ನೇ ತರಗತಿಯಲ್ಲಿ, ಘಟಕ ಪರೀಕ್ಷೆ ಮತ್ತು ಮಾಸಿಕ ಪರೀಕ್ಷೆಯ ಅಂಕಗಳು ಹಾಗೂ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಕೂಡ ಪರಿಗಣಿಸಲಾಗಿದೆ. ಆದರೆ ಈ ಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಕೂಡ ಅವಕಾಶವನ್ನು ನೀಡಲಾಗುತ್ತದೆ. ಅದಾಗ್ಯೂ, ಅದಕ್ಕಾಗಿ ಕರೋನಾ ಸಾಂಕ್ರಾಮಿಕದ ಪರಿಸ್ಥಿತಿ ಸಮಾನ್ಯವಾಗುವವರೆಗೂ ಕಾಯಬೇಕಾಗುತ್ತದೆ.

CBSE ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಈ ರೀತಿ ಪರಿಶೀಲಿಸಿ:
1: CBSE cbseresults.nic.in ಅಥವಾ cbse.gov.in. ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
 2. ಇಲ್ಲಿ ಮುಖಪುಟದಲ್ಲಿ, ನೀವು ಫಲಿತಾಂಶ (Result) ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
3. ಸಿಬಿಎಸ್ಇ 12ನೇ ಫಲಿತಾಂಶ 2021 ಅನ್ನು ಪರೀಕ್ಷಿಸಲು ರೋಲ್ ಸಂಖ್ಯೆಯನ್ನು ನಮೂದಿಸಿ.
4. ಸಿಬಿಎಸ್‌ಇ 12ನೇ ಫಲಿತಾಂಶ 2021 ಪರದೆಯ ಮೇಲೆ ತೆರೆಯುತ್ತದೆ, ವಿವರಗಳನ್ನು ಪರಿಶೀಲಿಸಿ.
5. CBSE 12ನೇ ಬೋರ್ಡ್ ಫಲಿತಾಂಶ 2021 ಮಾರ್ಕ್ಶೀಟ್ ಅನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ- CBSE Launches DADS Portal: CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE

IVRS  ಮತ್ತು ಎಸ್ಎಂಎಸ್ ಮೂಲಕ ಈ ರೀತಿಯ ಫಲಿತಾಂಶವನ್ನು ತಿಳಿಯಿರಿ:
ವಿದ್ಯಾರ್ಥಿಗಳು IVRS ಮತ್ತು SMS ಮೂಲಕವೂ CBSE 12ನೇ ತರಗತಿ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು. ಸಿಬಿಎಸ್‌ಇ ಮಂಡಳಿ ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗಳಲ್ಲಿ ಕಳುಹಿಸುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಸಿಬಿಎಸ್‌ಇ 12 <ROLLNUMBER> <ADMITCARDID> ಅನ್ನು ನಮೂದಿಸಿ. ಅದನ್ನು 7738299899 ಸಂಖ್ಯೆಗೆ ಕಳುಹಿಸಬೇಕು. ಈ ರೀತಿಯಾಗಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ತಿಳಿಯಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News