ನವದೆಹಲಿ : ಹೆಚ್ಚುತ್ತಿರುವ ಕರೋನಾ (Coronavirus) ಪ್ರಕರಣಗಳ  ಹಿನ್ನೆಲೆಯಲ್ಲಿ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ  ಸಲಹೆ ಸೂಚನೆಗಳನ್ನು ನೀಡಿದೆ. ಇದರ ಅಡಿಯಲ್ಲಿ, ಈ ರಾಜ್ಯಗಳಲ್ಲಿ ಕರೋನಾ ಪರೀಕ್ಷೆಗಳ ಸಂಖ್ಯೆಯನ್ನು ಗಣನೀಯವಾಗಿ  ಹೆಚ್ಚಿಸಲು ಸೂಚಿಸಲಾಗಿದೆ. ಅಲ್ಲದೆ, ಕೋವಿಡ್ (COVID-19) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.


COMMERCIAL BREAK
SCROLL TO CONTINUE READING

ಒಬ್ಬ ಸೋಂಕಿತ ವ್ಯಕ್ತಿಯು 30 ದಿನಗಳಲ್ಲಿ ಸರಾಸರಿ 406 ಜನರಿಗೆ ಸೋಂಕು ತಗುಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. ಮೇ 2020 ರ ನಂತರ , ಕೋವಿಡ್ -19 (Covid-19) ಸೋಂಕು ಮತ್ತು ಸಾವಿನ ಪ್ರಕರಣಗಳು ಈ ವಾರದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ ಎಂದು ಸರ್ಕಾರ ಹೇಳಿದೆ.


ಇದನ್ನೂ ಓದಿ Corona ಸಮಯದಲ್ಲಿ ಹೋಳಿ ಆಚರಣೆ, ಇವುಗಳ ಬಗ್ಗೆ ಇರಲಿ ಎಚ್ಚರ


12 ರಾಜ್ಯಗಳ 46 ಜಿಲ್ಲೆಗಳತ್ತ ಗಮನ ಹರಿಸುವಂತೆ ಸೂಚನೆ :
ಒಟ್ಟು ಸೋಂಕಿನ ಪ್ರಕರಣಗಳಲ್ಲಿ 71% ಮತ್ತು  69% ಸಾವಿನ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಸರ್ಕಾರ (Central government) ಹೇಳಿದೆ. "ಮಹಾರಾಷ್ಟ್ರದ ಒಟ್ಟು 36 ಜಿಲ್ಲೆಗಳಲ್ಲಿ 25 ಜಿಲ್ಲೆಗಳಲ್ಲಿ ಹೆಚ್ಚು  ಕರೋಣ ಪ್ರಕರಣಗಳು ದಾಖಲಾಗಿವೆ ಎಂದು ಸರ್ಕಾರ ಹೇಳಿದೆ. ಕರೋನಾ (Coronavirus) ಪ್ರಕರಣಗಳು ಹೆಚ್ಚುತ್ತಿರುವ ೧೨ ರಾಜ್ಯಗಳೆಂದರೆ ಮಹಾರಾಷ್ಟ್ರ, ಗುಜರಾತ್, ಹರಿಯಾಣ, ತಮಿಳುನಾಡು, ಛತ್ತೀಸ್ ಘಡ್,  ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಜಮ್ಮು ಕಾಶ್ಮೀರ, ಕರ್ನಾಟಕ (Karnataka), ಪಂಜಾಬ್ ಮತ್ತು ಬಿಹಾರ.


ನಿರ್ಲಕ್ಷಿಸಿದರೆ ಸೋಂಕು ಹರಡುವ ಅಪಾಯ ಹೆಚ್ಚು : 
ಸಭೆಯಲ್ಲಿ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೀಡಿತ ಜಿಲ್ಲೆಗಳ ವಿಶ್ಲೇಷಣೆ ಮತ್ತುಅಂಕಿ ಅಂಶಗಳನ್ನು ಮಂಡಿಸಲಾಯಿತು. ಇದರ  ಪ್ರಕಾರ, ಕೋವಿಡ್ -19 ರ  ಪ್ರಕರಣಗಳಲ್ಲಿ ಮೃತಪಟ್ಟವರಲ್ಲಿ ಸುಮಾರು 90% ರಷ್ಟು 45 ವರ್ಷ ವಯಸ್ಸಿನವರಾಗಿದ್ದಾರೆ.   90% ಜನರಿಗೆ ಈ ರೋಗದ ಬಗ್ಗೆ ತಿಳಿದಿದ್ದರೂ,  ಕೇವಲ 44% ಜನರು ಮಾತ್ರ ಮಾಸ್ಕ್ ಗಳನ್ನು (Mask) ಧರಿಸುತ್ತಿದ್ದಾರೆ ಎಂದು ಅಧ್ಯಯನ ವರದಿ ಹೇಳಿದೆ. ಮುಂಜಾಗ್ರತೆ ವಹಿಸದಿದ್ದಲ್ಲಿ , ಒಬ್ಬ ಸೋಂಕಿತ ವ್ಯಕ್ತಿ 30 ದಿನಗಳಲ್ಲಿ 406 ಜನರಿಗೆ ಸೋಂಕು ತಗುಲಿಸಬಹುದು ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ : Sachin Tendulkar: ಸಚಿನ್ ತೆಂಡೂಲ್ಕರ್‌ಗೆ ಕರೋನಾ ಪಾಸಿಟಿವ್


5 ಹಂತದ ಕಾರ್ಯತಂತ್ರದಲ್ಲಿ ಕೆಲಸ ಮಾಡಲು ಸೂಚನೆ :
ಕೋವಿಡ್ -19 ರ ಪರಿಣಾಮಕಾರಿ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಐದು ಹಂತದ ಕಾರ್ಯತಂತ್ರವನ್ನು ಸಿದ್ಧಪಡಿಸಿದೆ. ಕೋವಿಡ್ -19ಪರೀಕ್ಷೆಯ (COVD test) ಸಂಖ್ಯೆಯನ್ನು ವ್ಯಾಪಕವಾಗಿ ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ.  70% ದಷ್ಟು ಆರ್ ಟಿ -ಪಿಸಿಆರ್ (RT-PCR) ಪರೀಕ್ಷೆ ನಡೆಸುವಂತೆ ಹೇಳಲಾಗಿದೆ. ಸೋಂಕಿತರನ್ನು ಪತ್ತೆ ಹಚ್ಚುವುದು ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕಾರ್ಯ ಕ್ಷಿಪ್ರಗತ್ತಿಯಲ್ಲಿ ನಡೆಸಬೇಕು. ಸೋಂಕಿತರು ಅಥವ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ತಕ್ಷಣ ಮೊದಲ 72 ಗಂಟೆಗಳ ಕಾಲ ಐಸೋಲೇಶನ್ ಗೆ (Isolation) ಕಳುಹಿಸಬೇಕು ಎಂದು ಹೇಳಲಾಗಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.