ನವದೆಹಲಿ: 'ಉಜ್ವಲಾ' ಯೋಜನೆಯಡಿ ಉಚಿತ ಎಲ್ ಪಿಜಿ ಸಂಪರ್ಕ ಪಡೆಯುವ ಯೋಚನೆಯಲ್ಲಿದ್ದರೆ ನಿಮಗೊಂದು ಮಹತ್ವದ ಸುದ್ದಿಯಿದೆ. ಉಜ್ವಲಾ ಯೋಜನೆಯಡಿ ಲಭ್ಯವಿರುವ ಸಬ್ಸಿಡಿ ನಿಯಮದಲ್ಲಿ ಸರ್ಕಾರ ಬದಲಾವಣೆ ಮಾಡುತ್ತಿದೆ. ಪೆಟ್ರೋಲಿಯಂ ಸಚಿವಾಲಯ 2 ಹೊಸ ಬದಲಾವಣೆಗೆ ಮುಂದಾಗಿದೆ, ಅವುಗಳನ್ನ ಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆಯಿದೆ. ಸರ್ಕಾರ ಒಎಂಸಿಗಳ ಮುಂಗಡ ಪಾವತಿ ಮಾದರಿಯನ್ನು ಬದಲಾಯಿಸುವ ಸಾಧ್ಯತೆಯಿದೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಒಎಂಸಿ(Oil Marketing Companies) ಮುಂಗಡ ಹಣವನ್ನು ಇಎಂಐ ರೂಪದಲ್ಲಿ ಪಡೆಯುತ್ತದೆ. ಆದ್ರೆ ಇನ್ಮುಂದೆ ಇದನ್ನು ಒಂದೇ ಬಾರಿ ವಸೂಲಿ ಮಾಡುವ ಸಾಧ್ಯತೆಯಿದೆ. ಉಳಿದ 1600 ರೂಪಾಯಿ ಸಬ್ಸಿಡಿಯನ್ನು ಸರ್ಕಾರ ನೀಡಲಿದೆ. ಸರ್ಕಾರದ ಯೋಜನೆಯಲ್ಲಿ ಗ್ರಾಹಕರಿಗೆ 14.2 ಕೆಜಿ ಸಿಲಿಂಡರ್ ಮತ್ತು ಸ್ಟೌವ್ ನೀಡಲಾಗುತ್ತದೆ. ಇದರ ಬೆಲೆ ಸುಮಾರು 3200 ರೂಪಾಯಿ. ಸರ್ಕಾರದ ಪರವಾಗಿ 1600 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. ಒಎಂಸಿಗಳು 1600 ರೂಪಾಯಿ ನೀಡುತ್ತವೆ. ಒಎಂಸಿ ಈ ಮೊತ್ತವನ್ನು ಇಎಂಐ ರೂಪದಲ್ಲಿ ಪಡೆಯತ್ತದೆ.


West Bengal Assembly Election 2021: ECI ಕಟ್ಟುನಿಟ್ಟಿನ ಕ್ರಮ , RO ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆ


ಉಜ್ವಲಾ ಯೋಜನೆ(PM Ujjwala Yojana)ಯಲ್ಲಿ ಹೆಸರು ನೋಂದಾಯಿಸುವುದು ತುಂಬಾ ಸುಲಭ. ಉಜ್ವಲಾ ಯೋಜನೆಯಡಿ ಬಿಪಿಎಲ್ ಕಾರ್ಡ್ ಕುಟುಂಬದ ಮಹಿಳೆ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ವಿವರವಾಗಿ ಮಾಹಿತಿಯನ್ನು ಪಡೆಯಬಹುದು.


"ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಸ್ಸಾಂ ಸಂಸ್ಕೃತಿಯ ಮೇಲಿನ ದಾಳಿ"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.