ನವದೆಹಲಿ: Central University: ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಕಟ್ ಆಫ್ ಪರ್ಸಂಟೇಜ್ ನಿಂದ ವಿದ್ಯಾರ್ಥಿಗಳಿಗೆ ನೆಮ್ಮದಿ ನೀಡಲು ಸರ್ಕಾರ ಮುಂದಿನ ವರ್ಷದಿಂದ ದೇಶದ ಎಲ್ಲ ಕೇಂದ್ರೀಯ ವಿವಿಗಳ ಪದವಿ ಪೂರ್ವ ಕೋರ್ಸ್ ಗಳಿಗೆ (UG)ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ. ಆಪ್ಟಿಟ್ಯೂಡ್ ಪರೀಕ್ಷೆಯ ಸ್ವರೂಪವನ್ನು ನಿರ್ಧರಿಸಲು ಸರ್ಕಾರ ಸಮಿತಿಯನ್ನು ರಚಿಸಿದೆ. 2021-22ರ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿರುವ ಪ್ರವೇಶ ಪರೀಕ್ಷೆಯ ಮಟ್ಟ ಮತ್ತು ಮಾದರಿಯನ್ನು 7 ಸದಸ್ಯರ ಸಮಿತಿ ನಿರ್ಧರಿಸಲಿದೆ. ಪ್ರಸ್ತುತ, 12 ನೇ ತರಗತಿಯ  ಕಟ್ ಆಫ್ ಅಂಕಗಳನ್ನು ಕಾಲೇಜುಗಳಲ್ಲಿ ಪ್ರವೇಶಕ್ಕೆ ಆಧಾರವೆಂದು ಪರಿಗಣಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ


ಕಂಪ್ಯೂಟರ್ ಆಧಾರಿತ ಈ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಲಿದೆ. ಎಲ್ಲಾ ಕೇಂದ್ರ ವಿಶ್ವವಿದ್ಯಾಲಯಗಳ ಯುಜಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. "ಇದನ್ನು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ 2021-2022ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು" ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ. ಪರೀಕ್ಷೆಯಲ್ಲಿ ಸಾಮಾನ್ಯ ಪರೀಕ್ಷೆ ಮತ್ತು ವಿಷಯ-ನಿರ್ದಿಷ್ಟ ಪರೀಕ್ಷೆ ಇರುತ್ತದೆ. ಸಾಮಾನ್ಯ ಪರೀಕ್ಷೆಯ ಮೂಲಕ, ಅಭ್ಯರ್ಥಿಯ ಯೋಗ್ಯತೆಯನ್ನು ಪರೀಕ್ಷಿಸಲಾಗುತ್ತದೆ, ಇದರಲ್ಲಿ ಮೌಖಿಕ, ಪರಿಮಾಣಾತ್ಮಕ, ತರ್ಕ ಮತ್ತು ತಾರ್ಕಿಕತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎಲ್ಲರಿಗೂ ಆಪ್ಟಿಟ್ಯೂಡ್ ಪರೀಕ್ಷೆ ಕಡ್ಡಾಯವಾಗಿದ್ದರೆ, ವಿಷಯ ಪರೀಕ್ಷೆಯಲ್ಲಿ ವಿದ್ಯಾರ್ಥಿ/ನಿ  ತಮ್ಮ ತಮ್ಮ ವಿಷಯವನ್ನು ಆಯ್ಕೆ ಮಾಡಬಹುದಾಗಿದೆ.


ಇದನ್ನು ಓದಿ- UGC NET July 2020 ಫಲಿತಾಂಶ ಪ್ರಕಟ, nta.ac.in ಮೇಲೆ ಫಲಿತಾಂಶ ಪರಿಶೀಲಿಸಿ


ಸಮಿತಿಯು ಒಂದು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವಾಲಯದ ಅಧಿಕಾರಿಗಳು, ಯಾವುದೇ ವಿಷಯದಲ್ಲಿ ಆಪ್ಟಿಟ್ಯೂಡ್ ಹೊಂದಿರುವ ವಿದ್ಯಾರ್ಥಿಗೆ ಆ ವಿಷಯಕ್ಕೆ ಸಂಬಂಧಿಸಿದ ಯುಜಿ ಕೋರ್ಸ್‌ನಲ್ಲಿ ಪ್ರವೇಶ ಪಡೆಯಲು ಇದು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ. ಇದರಿಂದ ವಿಶ್ವವಿದ್ಯಾಲಯಗಳು ತಮ್ಮ ಹಲವು ರೀತಿಯ ಪ್ರವೇಶ ಪರೀಕ್ಷೆಗಳು ಮತ್ತು ಪ್ರವೇಶ ಪ್ರಕ್ರಿಯೆಗಳನ್ನು ಮೊಟಕುಗೊಳಿಸಬಹುದಾಗಿದೆ.


ಇದನ್ನು ಓದಿ- NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್


ಉದಾಹರಣೆಗೆ, 12 ನೇ ತರಗತಿಯಲ್ಲಿ ಶೇಕಡಾ 90 ಅಂಕಗಳನ್ನು ಪಡೆದಿರುವ ಕಾಯ್ದಿರಿಸದ ವರ್ಗದ ವಿದ್ಯಾರ್ಥಿಗೆ ದೆಹಲಿ ವಿಶ್ವವಿದ್ಯಾಲಯದ ಹೆಚ್ಚಿನ ಕಾಲೇಜುಗಳ ವಾಣಿಜ್ಯ ಕೋರ್ಸ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ 2021 ರಿಂದ, ಶೇ.60 ರಷ್ಟು ಅಂಕ ಪಡೆದ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯನ್ನು ನೀಡುವ ಮೂಲಕ  ಪ್ರವೇಶ ಪಡೆಯಲು ಸಾಧ್ಯವಾಗಲಿದೆ. ಇದಲ್ಲದೆ, ದೇಶದ ಎಲ್ಲಾ ಶಾಲಾ ಶಿಕ್ಷಣ ಮಂಡಳಿಗಳ ಅಂಕ ನೀಡುವ ಪ್ರಕ್ರಿಯೆ  ಕೂಡ ವಿಭಿನ್ನವಾಗಿದೆ. ಕೆಲವು ಬೋರ್ಡ್‌ಗಳಲ್ಲಿ ಮಕ್ಕಳ ಅಂಕಗಳು ಸಾಕಷ್ಟು ಹೆಚ್ಚಾಗಿರುತ್ತವೆ. ಅಷ್ಟೇ ಅಲ್ಲ, ಸೈನ್ಸ್ ಸ್ಟ್ರೀಮ್‌ನಿಂದ 12 ನೇ ತರಗತಿಯ ಪಾಸಾದ ವಿದ್ಯಾರ್ಥಿ ಸ್ಕೊರಿಂಗ್ ಕಾರಣ ಆರ್ಟ್ಸ್ ಕಾಲೇಜುಗಳಲ್ಲಿ ದಾಖಲಾತಿ ಪಡೆಯಬೇಕಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.