JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ

JEE Main 2021: ಜಂಟಿ ಪ್ರವೇಶ ಪರೀಕ್ಷೆ ಮುಖ್ಯ 2021 ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತೆಗೆದುಹಾಕಿದೆ. ಅರ್ಜಿ ಪ್ರಕ್ರಿಯೆಯು ಮಂಗಳವಾರದಿಂದ ಪ್ರಾರಂಭವಾಗಲಿದೆ ಮತ್ತು ಫಾರ್ಮ್ ಭರ್ತಿ ಮಾಡಲು ಕೊನೆಯ ದಿನಾಂಕ ಜನವರಿ 15 ಎಂದು ವರದಿಗಳು ಬಂದವು.

Last Updated : Dec 16, 2020, 02:45 PM IST
  • JEE ಪರೀಕ್ಷೆಯ ಅಧಿಸೂಚನೆ ತೆಗೆದು ಹಾಕಿದ NTA.
  • JEE Main 2021ಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಅಧಿಕೃತ ವೆಬ್ ನಿಂದ ತೆಗೆದುಹಾಕಿದ NTA.
  • JEE MAIN 2021 ಪರೀಕ್ಷೆಯನ್ನು ಅನ್ನು ಒಟ್ಟು 4 ಸೆಷನ್‌ಗಳಲ್ಲಿ ನಡೆಸಲಾಗುವುದು ಎಂದು ಎನ್‌ಟಿಎ ತಿಳಿಸಿತ್ತು.
JEE Main 2021: ಪರೀಕ್ಷೆಯ ಅಧಿಸೂಚನೆಯನ್ನು ಅಧಿಕೃತ ವೆಬ್ ಸೈಟ್ ನಿಂದ ತೆಗೆದುಹಾಕಿದ NTA, ಕಾರಣ ಇಲ್ಲಿದೆ title=
JEE Main 2021

ನವದೆಹಲಿ: JEE Main 2021: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಅಧಿಕೃತ ವೆಬ್‌ಸೈಟ್ jeemain.nta.nic.in ನಲ್ಲಿ JEE Main 2021ಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ನೀಡಿತ್ತು. ಅಧಿಸೂಚನೆಯ ಪ್ರಕಾರ, ಫೆಬ್ರವರಿ 2021 ರಿಂದ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ ಎನ್ನಲಾಗಿತ್ತು. ಆದರೆ, ಈ  ಅಧಿಸೂಚನೆಯನ್ನು ಎನ್‌ಟಿಎ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಾಗಿ, ನೀವು ಎನ್‌ಟಿಎ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜೆಇಇ ಮುಖ್ಯ ಪರೀಕ್ಷೆಯನ್ನುಒಟ್ಟು  ನಾಲ್ಕು ಸೆಷನ್ಸ್ ನಡೆಸಲಾಗುವುದು, ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ 2021 ರಲ್ಲಿ ನಡೆಯಲಿದೆ ಎಂದು ಅಧಿಸೂಚನೆ ತಿಳಿಸಲಾಗಿತ್ತು. ಜೆಇಇ ಮುಖ್ಯ 2021 ರ ಮೊದಲ ಸೆಶನ್ ಅನ್ನು ಫೆಬ್ರವರಿ 22 ರಿಂದ 25 ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿತ್ತು.

ಇದನ್ನು ಓದಿ- NEET, JEE Main 2021 Syllabus Change! NTA ಗೆ ಶಿಕ್ಷಣ ಸಚಿವಾಲಯ ನೀಡಿದೆ ಈ ಗೈಡ್ ಲೈನ್ಸ್

JEE MAIN 2021 ಪರೀಕ್ಷೆಯನ್ನು ಅನ್ನು ಒಟ್ಟು 4 ಸೆಷನ್‌ಗಳಲ್ಲಿ ನಡೆಸಲಾಗುವುದು ಎಂದು ಎನ್‌ಟಿಎ ತಿಳಿಸಿತ್ತು. ಪರೀಕ್ಷೆಯ ಮೊದಲ ಸೆಶನ್ 2021 ಫೆಬ್ರವರಿ 22 ರಿಂದ 25 ರವರೆಗೆ ನಡೆಯಲಿದ್ದು, ಮುಂದಿನ ಮೂರು ಸೆಶನ್ ಗಳನ್ನೂ ಮಾರ್ಚ್, ಏಪ್ರಿಲ್ ಮತ್ತು ಮೇ 2021 ರಲ್ಲಿ ನಡೆಯಲಿವೆ NTA ಹೇಳಿತ್ತು. 2021 ರ ಬೋರ್ಡ್ ಪರೀಕ್ಷೆಗಳಲ್ಲಿ ಜೆಇಇ (ಮುಖ್ಯ) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಸಮಯಗಳಲ್ಲಿ ಇದನ್ನು ಆಯೋಜಿಸುವ ಇದೆ.

ಇದನ್ನು ಓದಿ- UGC NET July 2020 ಫಲಿತಾಂಶ ಪ್ರಕಟ, nta.ac.in ಮೇಲೆ ಫಲಿತಾಂಶ ಪರಿಶೀಲಿಸಿ

Trending News