ನವದೆಹಲಿ: 2020 ರ ಎರಡನೇ ಚಂದ್ರ ಗ್ರಹಣ (Lunar Eclipse) ಕ್ಕೆ ಶುಕ್ರವಾರ ಸಾಕ್ಷಿಯಾಗಲಿದ್ದು, ಮೊದಲನೆಯದು ಜನವರಿ 10 ರಂದು ಸಂಭವಿಸಿದೆ.


COMMERCIAL BREAK
SCROLL TO CONTINUE READING

ಏಷ್ಯಾ, ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಕ್ಟಿಕಾದ ಜನರು ಮುಂಬರುವ ಭಾಗಶಃ ಚಂದ್ರ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.ಭಾಗಶಃ ಚಂದ್ರ ಗ್ರಹಣ ಪೂರ್ಣ ಚಂದ್ರ ಗ್ರಹಣಕ್ಕಿಂತ ಭಿನ್ನವಾಗಿದೆ.


ಈ ವಿದ್ಯಮಾನದಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ತನ್ನನ್ನು ತಾನೇ ಇರಿಸುತ್ತದೆ ಮತ್ತು ಒಂದು ರೇಖೆಯನ್ನು ರೂಪಿಸುತ್ತದೆ, ಅದು ನೇರವಾಗಿರುವುದಿಲ್ಲ. ಈ ಜೋಡಣೆಯಿಂದಾಗಿ, ಭೂಮಿಯು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನ ಮೇಲ್ಮೈಗೆ ತಲುಪದಂತೆ ತಡೆಯುತ್ತದೆ, ಹೀಗಾಗಿ ಪೆನಂಬ್ರಾ ಎಂದು ಕರೆಯಲ್ಪಡುವ ನೆರಳು ರೂಪಿಸುತ್ತದೆ.ಈ ರಚನೆ ಅಡಿಯಲ್ಲಿ, ಚಂದ್ರನ ಶೇ 57ರಷ್ಟು  ಮಾತ್ರ ಭೂಮಿಯ ಪೆನಂಬ್ರಾ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಪೆನಂಬ್ರಲ್ ಗ್ರಹಣವು ಸಾಮಾನ್ಯ ಹುಣ್ಣಿಮೆಗೆ ಹೋಲುತ್ತದೆ.


ಪ್ರಪಂಚದಾದ್ಯಂತದ ಖಗೋಳಶಾಸ್ತ್ರಜ್ಞರು ಜೂನ್ 5 ರ ಚಂದ್ರ ಗ್ರಹಣವನ್ನು "ಸ್ಟ್ರಾಬೆರಿ ಚಂದ್ರ ಗ್ರಹಣ" ಎಂದು ಕರೆಯುತ್ತಾರೆ, ಏಕೆಂದರೆ ಜೂನ್ ಹುಣ್ಣಿಮೆಯನ್ನು ಸ್ಟ್ರಾಬೆರಿ ಚಂದ್ರ ಎಂದು ಕರೆಯಲಾಗುತ್ತದೆ. 2020 ರ ಇತರ ಚಂದ್ರಗ್ರಹಣಗಳು ಜುಲೈ ಮತ್ತು ನವೆಂಬರ್‌ನಲ್ಲಿ ಸಂಭವಿಸಲಿವೆ ಮತ್ತು ಇದು ಭಾಗಶಃ ಆಗಿರುತ್ತದೆ. " ಸೂರ್ಯಗ್ರಹಣ ಜೂನ್ 21 ರಂದು ಸಂಭವಿಸುತ್ತದೆ.