Pradhan Mantri Kisan Samman Nidhi: ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ 14 ನೇ ಕಂತನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸರ್ಕಾರವು ರೈತರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ. ಈ ಯೋಜನೆಯ ಮೂಲಕ ಮೋದಿ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರಯೋಜನವನ್ನು ನೀಡುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Tamannaah Bhatia: ರೆಡ್‌ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ತಮನ್ನಾ;ಫೋಟೊಸ್‌ ನೋಡಿ


ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಸಿಕಾರ್‌ ನ 8.5 ಕೋಟಿಗೂ ಹೆಚ್ಚು ರೈತರಿಗೆ ಕಂತು ಬಿಡುಗಡೆ ಮಾಡಿದ್ದಾರೆ. ಈ ನಿಧಿ (PMKSN) ಒಂದು ಕೇಂದ್ರ ಉಪಕ್ರಮವಾಗಿದ್ದು, ಭೂಮಾಲೀಕ ರೈತರು ಮತ್ತು ಅವರ ಕುಟುಂಬಗಳಿಗೆ ವರ್ಷಕ್ಕೆ ರೂ 6,000 ವರೆಗೆ ಹಣಕಾಸಿನ ನೆರವು ನೀಡುತ್ತದೆ. ಈ ಉಪಕ್ರಮವನ್ನು 2019 ರಲ್ಲಿ ಘೋಷಿಸಲಾಯಿತು. ಯೋಜನೆಯಡಿ ಕೇಂದ್ರವು ಉದ್ದೇಶಿತ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುತ್ತದೆ.


ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಆಧಾರ್ ಮತ್ತು ಎನ್‌ಪಿಸಿಐಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಲ್ಲಿ 14 ನೇ ಕಂತನ್ನು ಪಾವತಿಸಿದೆ. NPCI ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಾಗಿ, ಫಲಾನುಭವಿಯು ಸ್ಥಳೀಯ ಅಂಚೆ ಕಚೇರಿಗೆ ಕಂತು ಸ್ವೀಕರಿಸಲು ಭೇಟಿ ನೀಡಬಹುದು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ನಲ್ಲಿ ಹೊಸ (DBT ಸಕ್ರಿಯಗೊಳಿಸಿದ) ಖಾತೆಯನ್ನು ತೆರೆಯಬಹುದು. ಇದಲ್ಲದೆ, ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟ್’ಮೆಂಟ್’ನ್ನು ಪರಿಶೀಲಿಸುವ ಮೂಲಕ ಮನೆಯಲ್ಲಿ ಕುಳಿತು ಚೆಕ್ ಮಾಡಿಕೊಳ್ಳಬಹುದು.


ಪ್ರಧಾನ ಮಂತ್ರಿ ಕಿಸಾನ್ ಯೋಜನೆ


EKYC ಪೂರ್ಣಗೊಂಡಿರುವ ಫಲಾನುಭವಿಗಳಿಗೆ 14 ನೇ ಪಾವತಿಯ ಪ್ರಯೋಜನವನ್ನು ನೀಡಲಾಗಿದೆ. ಫಲಾನುಭವಿಯು ನೋಂದಾಯಿತ ಆಧಾರ್ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಬಳಸಿಕೊಂಡು eKYC ಅನ್ನು ಸ್ವತಂತ್ರವಾಗಿ ಪರಿಶೀಲಿಸಬಹುದು. ಈ ಬಗ್ಗೆ PM ಕಿಸಾನ್ ಪೋರ್ಟಲ್‌ನಲ್ಲಿ ಸಹ ಉಲ್ಲೇಖಿಸಲಾಗಿದೆ. ಫಲಾನುಭವಿಯ ವಿವರಗಳನ್ನು ಪರಿಶೀಲಿಸಲು, ನೀವು PMKISAN GOI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ನಿಮ್ಮ ಆಧಾರ್ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಬಹುದು.


ಇದನ್ನೂ ಓದಿ: ODI ಏಷ್ಯಾಕಪ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರು ಯಾರು? ಭಾರತದ ದಿಗ್ಗಜರೂ ಇದ್ದಾರೆ…


ಫಲಾನುಭವಿಗಳ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸುವುದು ಹೇಗೆ?


  • ಅಧಿಕೃತ PM Kisan ಪೋರ್ಟಲ್‌ ಗೆ ಹೋಗಿ.

  • 'Farmer's Corner' ಅಡಿಯಲ್ಲಿ ಮತ್ತು 'Beneficiary List' ಬಟನ್ ಕ್ಲಿಕ್ ಮಾಡಿ.

  • ಸ್ಥಳ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್, ಗ್ರಾಮವನ್ನು ನಮೂದಿಸಿ ಮತ್ತು 'Get Report' ಬಟನ್ ಕ್ಲಿಕ್ ಮಾಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ