ಛತ್ತೀಸ್ಗಡ ಪೊಲೀಸರಿಂದ ಜೀ ನ್ಯೂಸ್ ನಿರೂಪಕನ ಮನೆ ಮೇಲೆ ದಾಳಿ: ಬಂಧನಕ್ಕೆ ಯತ್ನ!
ಛತ್ತೀಸ್‌ಗಢದ ಪೊಲೀಸರು ಬೆಳಗ್ಗೆ 5 ಗಂಟೆ ಸುಮಾರಿಗೆ ರೋಹಿತ್ ರಂಜನ್ ಮನೆ ಬಳಿ ಆಗಮಿಸಿದ್ದಾರೆ. ಆದರೆ ರೋಹಿತ್ ವಾಸಿಸುವ ಮನೆಯ ಸೆಕ್ಯುರಿಟಿ ಸಿಬ್ಬಂದಿ, ಪೊಲೀಸರನ್ನು ತಡೆದಿದ್ದಾನೆ. ಆದರೆ ಛತ್ತೀಸ್‌ಗಢ ಪೊಲೀಸರು ದುರ್ವರ್ತನೆ ತೋರಿದ್ದು, ಸಿಬ್ಬಂದಿಯ ಫೋನ್ ಕಸಿದುಕೊಂಡು ನಿಂದಿಸಿದ್ದಾರೆ ಎನ್ನಲಾಗಿದೆ.
ನವದೆಹಲಿ: ಜೀ ನ್ಯೂಸ್ ವಾಹಿನಿಯ ನಿರೂಪಕ ರೋಹಿತ್ ರಂಜನ್ ಅವರನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ಯತ್ನಿಸಿದ್ದಾರೆ. ಛತ್ತೀಸ್‌ಗಢ ಪೊಲೀಸ್ ಸಿಬ್ಬಂದಿ ಇಂದು ಯುಪಿ ಪೊಲೀಸರಿಗೆ ಮಾಹಿತಿ ನೀಡದೆ ರೋಹಿತ್ ರಂಜನ್ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಅವರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: Ind vs Eng: ಟೀಂ ಇಂಡಿಯಾ ಸೋಲಿನ ಸುಳಿಗೆ ಸೇರಲು ಕಾರಣ ಇವರೇ!
ಛತ್ತೀಸ್‌ಗಢ ಪೊಲೀಸರು ಉತ್ತರ ಪ್ರದೇಶದ ಪೊಲೀಸರಿಗೆ ಮಾಹಿತಿ ನೀಡದೆ ಜೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಅವರನ್ನು ಬಂಧಿಸಲು ಪ್ರಯತ್ನಿಸಿದ್ದರು. ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ಮನೆಗೆ ದಾಳಿ ನಡೆಸಿದ ಛತ್ತೀಸ್‌ಗಢ ಪೊಲೀಸರು ಅವರ ಮನೆಯೊಳಗೆ ನುಗ್ಗಿ ಗೂಂಢಾಗಿರಿ ತೋರಿದ್ದಾರೆ.
ಈ ಬಗ್ಗೆ ರೋಹಿತ್ ರಂಜನ್ ಟ್ವೀಟ್ ಮೂಲಕ ತಿಳಿಸಿದ್ದಾರೆ. "ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ನನ್ನನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ಬಂದಿದ್ದಾರೆ. ಅವರು ನನ್ನ ಮನೆಯ ಹೊರಗಡೆ ನಿಂತಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯೇ? " ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಢದ ಪೊಲೀಸರು ಬೆಳಗ್ಗೆ 5 ಗಂಟೆ ಸುಮಾರಿಗೆ ರೋಹಿತ್ ರಂಜನ್ ಮನೆ ಬಳಿ ಆಗಮಿಸಿದ್ದಾರೆ. ಆದರೆ ರೋಹಿತ್ ವಾಸಿಸುವ ಮನೆಯ ಸೆಕ್ಯುರಿಟಿ ಸಿಬ್ಬಂದಿ, ಪೊಲೀಸರನ್ನು ತಡೆದಿದ್ದಾನೆ. ಆದರೆ ಛತ್ತೀಸ್‌ಗಢ ಪೊಲೀಸರು ದುರ್ವರ್ತನೆ ತೋರಿದ್ದು, ಸಿಬ್ಬಂದಿಯ ಫೋನ್ ಕಸಿದುಕೊಂಡು ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿಬ್ಬಂದಿ ಮಾತನಾಡಿದ್ದು, "ಪೊಲೀಸರು ಎಂದು ಹೇಳಿದಾಗ ಐಡಿ ತೋರಿಸಿ ಎಂದೆ. ಆದರೆ ಅವರು ಬಹಿರಂಗಪಡಿಸಲಿಲ್ಲ. ತಡೆದರೂ ಸಹ ರೋಹಿತ್ ರಂಜನ್‌ನನ್ನು ಬಂಧಿಸಲು 10-15 ಮಂದಿ ಛತ್ತೀಸ್‌ಗಢ ಪೊಲೀಸರು ಸಮವಸ್ತ್ರವಿಲ್ಲದೆ ಆಗಮಿಸಿದ್ದರು. ಪೊಲೀಸರು ಬರುವಾಗ ರೋಹಿತ್ ರಂಜನ್ ಕುಟುಂಬದವರು ಮಲಗಿದ್ದರು. ಪೊಲೀಸರು ಬಲವಂತವಾಗಿ ಡ್ರಾಯಿಂಗ್ ರೂಮಿಗೆ ನುಗ್ಗಿ ಗಂಟೆಗಟ್ಟಲೆ ಕುಳಿತಿದ್ದರು. ರೋಹಿತ್ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನೀವು ಬಳಸುವ ವೆಬ್‌ಸೈಟ್ ಅಸಲಿಯೋ ನಕಲಿಯೋ ನಿಮಿಷಗಳಲ್ಲಿ ಪತ್ತೆ ಹಚ್ಚಿ ..!
ಈ ಇಡೀ ಘಟನೆಯ ನಂತರ ಛತ್ತೀಸ್‌ಗಢ ಪೊಲೀಸರ ಕಾರ್ಯಶೈಲಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಷ್ಟಕ್ಕೂ ಆಕೆ ಗುರುತಿನ ಚೀಟಿ ಮತ್ತು ಸಮವಸ್ತ್ರವಿಲ್ಲದೆ ಮನೆ ಪ್ರವೇಶಿಸಿದ್ದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.