ನವದೆಹಲಿ: ಭಾರತದಲ್ಲಿ ಬಾಲ್ಯ ವಿವಾಹಗಳು ಕ್ರಮೇಣ ಇಳಿಕೆಯಾಗಿದ್ದರೂ ಸಹ ಬಿಹಾರ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಂತಹ ಕೆಲವು ರಾಜ್ಯಗಳಲ್ಲಿ ಈ ಪದ್ಧತಿ ಇಂದಿಗೂ ಶೇ.40ರಷ್ಟು ಜೀವಂತವಾಗಿದೆ ಎಂದು ಯುನಿಸೆಫ್ ವರದಿ ಹೇಳಿದೆ. 


COMMERCIAL BREAK
SCROLL TO CONTINUE READING

ಸೋಮವಾರ ಬಾಲ್ಯ ವಿವಾಹದ ಕುರಿತು ಯುನಿಸೆಫ್ ಬಿಡುಗಡೆ ಮಾಡಿದ ವರದಿಯಲ್ಲಿ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಬಾಲ್ಯ ವಿವಾಹ ಪ್ರಮಾಣ ಶೇ.20ಕ್ಕಿಂತಲೂ ಕಡಿಮೆ ಇದ್ದು, ಬುಡಕಟ್ಟು ಸಮುದಾಯ ಮತ್ತು ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಪ್ರಚಲಿತದಲ್ಲಿದೆ ಎಂದು ಹೇಳಲಾಗಿದೆ. 


2005-2006ರಲ್ಲಿ ಶೇ.47 ಇದ್ದು ಬಾಲ್ಯ ವಿವಾಹ ಪ್ರಮಾಣ 2015-2016ರಲ್ಲಿ ಶೇ.27ಕ್ಕೆ ಇಳಿಕೆಯಾಗಿದೆ. ವಿಶ್ವಾದ್ಯಂತ ಸುಮಾರು 650 ದಶಲಕ್ಷ ಹುಡುಗಿಯರು 18 ವರ್ಷ ಪೂರ್ಣಗೊಳ್ಳುವ ಮೊದಲೇ ವಿವಾಹವಾಗುತ್ತಾರೆ. ಇನ್ನು, ವರ್ಷಕ್ಕೆ ಸುಮಾರು 12 ಮಿಲಿಯನ್ ಬಾಲಕಿಯರು ಬಾಲ್ಯದಲ್ಲಿಯೇ ವಿವಾಹವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.