ನವದೆಹಲಿ: 'China Like Discipline Not Possible In India' - ಕರೋನಾ ವೈರಸ್ (Coronavirus) ಸೋಂಕಿನ ಮೂರನೇ ಮತ್ತು ನಾಲ್ಕನೇ ಅಲೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಗುಜರಾತ್ ಹೈಕೋರ್ಟ್ (Gujarat HC) ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಫೇಸ್ ಮಾಸ್ಕ್, ಸಾಮಾಜಿಕ ದೂರ ಮತ್ತು ನೈರ್ಮಲ್ಯದಂತಹ ನಿಯಮಗಳನ್ನು ಜನರು ಅನುಸರಿಸುವುದಿಲ್ಲವಾದ್ದರಿಂದ ಇದನ್ನು ಮಾಡುವುದು ಸಹ ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.


COMMERCIAL BREAK
SCROLL TO CONTINUE READING

ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಭಾರ್ಗವ ಡಿ ಕರಿಯಾ ಅವರ ವಿಭಾಗೀಯ ಪೀಠವು ಚೀನಾದಂತಹ (China) ಶಿಸ್ತನ್ನು ಭಾರತದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಯಾವುದೇ ಹೊಸ ಅಲೆಯನ್ನು ಎದುರಿಸಲು ಮೂಲಸೌಕರ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವಂತೆ ನ್ಯಾಯಾಲಯ ಗುಜರಾತ್ ಸರ್ಕಾರವನ್ನು ನ್ಯಾಯಾಲಯ ಕೋರಿದೆ. ಗುಜರಾತ್‌ನಲ್ಲಿ ಕೋವಿಡ್ -19(Covid-19) ಸ್ಥಿತಿ ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಪೀಠ ಈ ಹೇಳಿಕೆ ನೀಡಿದೆ.


ಇದನ್ನೂ ಓದಿ-"ಅಧಿಕಾರದಲ್ಲಿರುವ ಅಜ್ಞಾನಿಗಳು ಲಕ್ಷದ್ವೀಪವನ್ನು ನಾಶ ಮಾಡುತ್ತಿದ್ದಾರೆ"


"ಈ ರೀತಿಯ ಮೂರನೇ ಮತ್ತು ನಾಲ್ಕನೇ ಅಲೆಯ ಬಗ್ಗೆ ಏನು? ಮುಖವಾಡಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಯುವುದು ಮತ್ತು ನೈರ್ಮಲ್ಯದಂತಹ ನಿಯಮಗಳನ್ನು ರಾಜ್ಯದ ಜನರು ಪಾಲಿಸುತ್ತಿಲ್ಲ . ಈ ದೇಶದಲ್ಲಿ (India) ಯಾರೂ ಅನುಸರಿಸುತ್ತಿಲ್ಲ. ಹೀಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಹೊಸ ಅಲೆ ಬರಲಿದೆ" ಎಂದು ನ್ಯಾಯಪೀಠ ಹೇಳಿದೆ. ಈ ಕುರಿತಾದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ, ಈ ತಿಳುವಳಿಕೆ ಜೊತೆಗೆ ನಿಮಗೆ ನೀವು ಸಿದ್ಧಗೊಳಿಸಬೇಕಿದೆ ಎಂದು ಅಡ್ವೋಕೇಟ್ ಜನರಲ್ ಕಮಲ್ ತ್ರಿವೇದಿ ಅವರಿಗೆ ನ್ಯಾಯಪೀಠ ಹೇಳಿದೆ.


ಇದನ್ನೂ ಓದಿ-Coronavirus Fake News Alert: 'Corona Vaccine ಹಾಕಿಸಿಕೊಂಡ 2 ವರ್ಷಗಳೊಳಗೆ ಸಾವು!' ಏನಿದರ ಹಿಂದಿನ ಸತ್ಯಾಸತ್ಯತೆ?


ವಿಚಾರಣೆಯ ವೇಳೆ ಭಾರತವನ್ನು ಯುರೋಪಿಯನ್ ದೇಶಗಳ ಜೊತೆಗೆ ಹೋಲಿಕೆ ಮಾಡಿದ ಅಡ್ವೋಕೇಟ್ ಜನರಲ್ ತ್ರಿವೇದಿ, ಏಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಹಾಮಾರಿಯ ಕಾರಣ ಅಧಿಕ ರೋಗಿಗಳು ಹಾಗೂ ಸಾವುಗಳು ಸಂಭವಿಸಿವೆ ಎಂದು ಉಲ್ಲೇಖಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ "ನೀವು ಭಾರತವನ್ನು ಚೀನಾ ಜೊತೆಗೆ ಹೋಲಿಸಬೇಕು. ನಿಮ್ಮ ಈ ಹೋಲಿಕೆ ಯೋಗ್ಯವಲ್ಲ. ಯಾವ ರೀತಿಯ ಶಿಸ್ತು ಚೀನಾದಲ್ಲಿ ಜಾರಿಗೆ ಬಂದಿದೆಯೋ, ಅದು ಭಾರತದಲ್ಲಿ ಸಂಭವವಿಲ್ಲ. ಹೀಗಾಗಿ ಚಿಕಿತ್ಸಾ ಸೌಕರ್ಯಗಳನ್ನು ಹೆಚ್ಚಿಸಿ" ಎಂದು ಹೇಳಿದೆ.


ಇದನ್ನೂ ಓದಿ-IMA Vs Baba Ramdev: PM Modiಗೆ ಪತ್ರ ಬರೆದ IMA, Baba Ramdev ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.