Do Not Share Vaccination Certificate On Social Media: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಕ್ಸಿನೆಶನ್ ಸರ್ಟಿಫಿಕೆಟ್ ಹಂಚಿಕೊಳ್ಳಬೇಡಿ

Do Not Share Vaccination Certificate On Social Media - ಕೊರೊನಾವೈರಸ್  (Coronavirus) ಪ್ರಕೋಪದ ಹಿನ್ನೆಲೆ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಜೋರಾಗಿ ಮುಂದುವರೆದಿದೆ. ಲಸಿಕೆ ಪಡೆಯುತ್ತಿರುವ ಜನರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (vaccination Certificate) ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಸೈಬರ್ ಸೆಕ್ಯುರಿಟಿ (Cyber Security) ಎಚ್ಚರಿಕೆ ನೀಡಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯ ನಂತರ ಜನರಿಗೆ  ಹಾರ್ಡ್ ಹಾಗೂ ಸಾಫ್ಟ್  ಎರಡೂ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ನಿಮ್ಮ ವ್ಯಾಕ್ಸಿನೇಷನ್ ಮುಗಿದ ತಕ್ಷಣ, ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸೈಬರ್ ಸುರಕ್ಷತೆಯ ಮಾರ್ಗಸೂಚಿಗಳ ಹಿನ್ನೆಲೆ ಜನರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಕೋರಲಾಗಿದೆ.

Written by - Nitin Tabib | Last Updated : May 25, 2021, 08:44 PM IST
  • ನಿಮ್ಮ ಕೊವಿಡ್-19 ಸರ್ಟಿಫಿಕೆಟ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ.
  • ಸೈಬರ್ ದೋಸ್ತ್ ಮೂಲಕ ಎಚ್ಚರಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ
  • ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗಿ, ನಿಮಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.
Do Not Share Vaccination Certificate On Social Media: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಕ್ಸಿನೆಶನ್ ಸರ್ಟಿಫಿಕೆಟ್ ಹಂಚಿಕೊಳ್ಳಬೇಡಿ title=
Do Not Share Your Covid-19 Certificate On Social Media (File Photo)

ನವದೆಹಲಿ: Do Not Share Vaccination Certificate On Social Media - ಕೊರೊನಾವೈರಸ್  (Coronavirus) ಪ್ರಕೋಪದ ಹಿನ್ನೆಲೆ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಜೋರಾಗಿ ಮುಂದುವರೆದಿದೆ. ಲಸಿಕೆ ಪಡೆಯುತ್ತಿರುವ ಜನರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (vaccination Certificate) ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಸೈಬರ್ ಸೆಕ್ಯುರಿಟಿ (Cyber Security) ಎಚ್ಚರಿಕೆ ನೀಡಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯ ನಂತರ ಜನರಿಗೆ  ಹಾರ್ಡ್ ಹಾಗೂ ಸಾಫ್ಟ್  ಎರಡೂ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ನಿಮ್ಮ ವ್ಯಾಕ್ಸಿನೇಷನ್ ಮುಗಿದ ತಕ್ಷಣ, ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸೈಬರ್ ಸುರಕ್ಷತೆಯ ಮಾರ್ಗಸೂಚಿಗಳ (Cyber Security Guidelines) ಹಿನ್ನೆಲೆ ಜನರು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಕೋರಲಾಗಿದೆ.

ಅಲರ್ಟ್ ಜಾರಿಗೊಳಿಸಿದ ಸೈಬರ್ ದೋಸ್ತ್ (Cyber ​​Dost Alert)
ಲಸಿಕೆ ಪ್ರಮಾಣಪತ್ರವನ್ನು ಯಾರೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಗೃಹ ಸಚಿವಾಲಯ (Home Ministry ಹೊರಡಿಸಿರುವ ನಿರ್ದೇಶನದಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಗೃಹ ಸಚಿವಾಲಯದ ಸೈಬರ್ ಜಾಗೃತಿ (Cyber Awareness) ಟ್ವಿಟರ್ ಹ್ಯಾಂಡಲ್‌ನಲ್ಲಿ ನೀಡಲಾಗಿದೆ. ಗೃಹ ಸಚಿವಾಲಯವು ಸೈಬರ್ ದೋಸ್ತ್ (Cyber Dost) ಹೆಸರಿನಲ್ಲಿ ಈ ಜಾಗೃತಿ ಟ್ವಿಟರ್ ಹ್ಯಾಂಡಲ್ ಅನ್ನು ನಡೆಸುತ್ತಿದೆ. ಕೋವಿಡ್ -19  ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ, ಲಸಿಕೆ ತೆಗೆದುಕೊಳ್ಳುವ ವ್ಯಕ್ತಿಯ ಹೆಸರು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಬರೆಯಲಾಗಿದೆ ಎಂದು ಸೈಬರ್ ದೋಸ್ತ್ ಹೇಳಿದೆ. ಈ ಹಿನ್ನೆಲೆಯಲ್ಲಿ ಯಾರು ತಮ್ಮ ಸರ್ಟಿಫಿಕೆಟ್ ಚಿತ್ರವನ್ನು ಸಾಮಾಹಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಅದು ಎಚ್ಚರಕೆ ನೀಡಿದೆ.

ಇದನ್ನೂ ಓದಿ- Coronavirus Found In Water: ನೀರಿನಲ್ಲಿ ಪತ್ತೆಯಾದ ಕೊರೊನಾ ವೈರಸ್! ಭಾರಿ ಕೋಲಾಹಲ ಸೃಷ್ಟಿ

ನಿಮ್ಮ ಸರ್ಟಿಫಿಕೇಟ್ ಅನ್ನು ಸಾರ್ವಜನಿಕಗೊಳಿಸಬೇಡಿ (Do not make the certificate public)
ನೀವು ಪ್ರಮಾಣಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳತನವಾಗುವ ಅಪಾಯವಿದೆ. ಇದರಿಂದಾಗಿ ನಿಮಗೆ ವೈಯಕ್ತಿಕ ಹಾನಿಯಾಗಬಹುದು. ಇದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಪ್ರಮಾಣಪತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕಗೊಳಿಸದೇ ಇರುವುದು ಎಂದು ಸೈಬರ್ ದೋಸ್ತ್ ಹೇಳಿದೆ.

ಇದನ್ನೂ ಓದಿ-ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 1.25 ಲಕ್ಷ ಡೋಸ್ COVAXIN ಬಿಡುಗಡೆ!

ಸೈಬರ್ ಫ್ರಾಡ್ ನಿಂದ ಅಪಾಯ (There may be danger from cyber fraud)
ನಿಮ್ಮ ವೈಯಕ್ತಿಕ ಮಾಹಿತಿಯನ್ನು ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ (Vaccination Certificate) ನಮೂದಿಸಲಾಗಿರುತ್ತದೆ. ಅದನ್ನು ಸೈಬರ್ ಅಪರಾಧಿಗಳಿಗೆ (Cyber Fraud) ಹಸ್ತಾಂತರಿಸಬೇಡಿ, ಇಲ್ಲದಿದ್ದರೆ ಆ ಮಾಹಿತಿಯ ಆಧಾರದ ಮೇಲೆ ಯಾರಾದರೂ ನಿಮಗೆ ವಂಚನೆ ಎಸಗುವ ಸಾಧ್ಯತೆ ಇದೆ. ಹೀಗಾಗಿ ಈ ರೀತಿಯ  ಹಂಚಿಕೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತಿದೆ.  ಲಸಿಕೆ ಹೆಸರಿನಲ್ಲಿ ಅನೇಕ ಜನರು ಮೋಸ ಹೋಗುತ್ತಿದ್ದಾರೆ. ಆ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್ ಖಾತೆಗಳನ್ನು ಸಹ ಖಾಲಿ ಮಾಡಲಾಗುತ್ತಿದೆ ಎಂದು ಸೈಬರ್ ದೋಸ್ತ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ- ಇನ್ಮುಂದೆ ನಿಮ್ಮ ಕೋರೋನಾ ಟೆಸ್ಟ್ ನೀವೇ ಮಾಡ್ಬಹುದು! ಕೇವಲ ಒಂದೇ ಸೆಕೆಂಡ್ ನಲ್ಲಿ ರಿಸಲ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News