ನವದೆಹಲಿ: ಲಕ್ಷದ್ವೀಪದ ಹೊಸ ಕರಡು ನಿಯಮಗಳ ವಿಚಾರವಾಗಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲಕ್ಷದ್ವೀಪವು ಸಾಗರದಲ್ಲಿನ ಭಾರತದ ಆಭರಣವಾಗಿದೆ, ಅಧಿಕಾರದಲ್ಲಿರುವ ಅಜ್ಞಾನಿಗಳು ಲಕ್ಷದ್ವೀಪವನ್ನು ನಾಶಮಾಡುತ್ತಿದ್ದಾರೆ ಮತ್ತು ತಾವು ಕೇಂದ್ರಾಡಳಿತ ಪ್ರದೇಶದ ಜನರೊಂದಿಗೆ ನಿಲ್ಲುವುದಾಗಿ ರಾಹುಲ್ ಗಾಂಧೀ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿಯವರ ನೈತಿಕ ಹೊಣೆಗಾರಿಕೆ ಇಂದಿನ ರಾಜಕೀಯದಲ್ಲಿ ಅಪರೂಪ - ಅಧೀರ್ ರಂಜನ್ ಚೌಧರಿ
Lakshadweep is India’s jewel in the ocean.
The ignorant bigots in power are destroying it.
I stand with the people of Lakshadweep.
— Rahul Gandhi (@RahulGandhi) May 26, 2021
ಗೋಮಾಂಸ ನಿಷೇಧ, ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಮತದಾನ ಆಕಾಂಕ್ಷಿಗಳ ಅನರ್ಹತೆ ವಿಚಾರವಾಗಿ ಉಲ್ಲೇಖಿತವಾಗಿರುವ ಕರಡು ನಿಯಮಗಳ ವಿರುದ್ಧ ರಾಹುಲ್ ಗಾಂಧೀ (Rahul Gandhi) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷದ್ವೀಪದ ಆಡಳಿತ ಅಧಿಕಾರಿ ಪ್ರಪುಲ್ ಪಟೇಲ್ ಕೇವಲ ದ್ವೀಪಗಳ ಶಾಂತಿ ಮತ್ತು ಸಂಸ್ಕೃತಿಯನ್ನು ನಾಶಪಡಿಸುವುದಷ್ಟೇ ಅಲ್ಲದೆ ಅನಿಯಂತ್ರಿತ ನಿರ್ಬಂಧಗಳನ್ನು ಹೇರುವ ಮೂಲಕ ಜನರಿಗೆ ಕಿರುಕುಳ ನೀಡಲಾಗುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಲಾಗುತ್ತದೆ- ರಾಹುಲ್ ಗಾಂಧಿ
ಇನ್ನೊಂದೆಡೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಟೀಕಾ ಪ್ರಹಾರ ನಡೆಸಿ "ಬಿಜೆಪಿ ಸರ್ಕಾರ ಮತ್ತು ಅದರ ಆಡಳಿತವು ತನ್ನ ಪರಂಪರೆಯನ್ನು ನಾಶಮಾಡಲು, ಲಕ್ಷದ್ವೀಪದ ಜನರಿಗೆ ಕಿರುಕುಳ ನೀಡಲು ಅಥವಾ ಅವರ ಮೇಲೆ ಅನಿಯಂತ್ರಿತ ನಿರ್ಬಂಧಗಳನ್ನು ಮತ್ತು ನಿಯಮಗಳನ್ನು ಹೇರಲು ಯಾವುದೇ ವ್ಯವಹಾರವನ್ನು ಹೊಂದಿಲ್ಲ" ಎಂದು ಹೇಳಿದರು.
The people of Lakshadweep deeply understand and honour the rich natural and cultural heritage of the islands they inhabit. They have always protected and nurtured it.
The BJP government and its administration have no business to destroy this heritage, to harass the people… 1/3— Priyanka Gandhi Vadra (@priyankagandhi) May 25, 2021
ತಮ್ಮ ಸರಣಿ ಟ್ವೀಟ್ ಗಳ ಮೂಲಕ ಲಕ್ಷದ್ವೀಪದ ಜನರಿಗೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿರುವ ಪ್ರಿಯಾಂಕಾ ಗಾಂಧಿ,ಲಕ್ಷದ್ವೀಪದ ನಿವಾಸಿಗಳು ತಾವು ವಾಸಿಸುವ ದ್ವೀಪಗಳ ಶ್ರೀಮಂತ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಳವಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಗೌರವಿಸುತ್ತಾರೆ ಮತ್ತು ಅದನ್ನು ಯಾವಾಗಲೂ ರಕ್ಷಿಸಿ ಪೋಷಿಸಿದ್ದಾರೆ. ಲಕ್ಷದ್ವೀಪದ ಜನರ ಜೊತೆಗೆ ಈ ವಿಚಾರವಾಗಿ ಮಾತುಕತೆ ನಡೆಸಬೇಕೆಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.