ನವದೆಹಲಿ: ಭಾರತವು ಸಂಸ್ಕೃತಿ ಮತ್ತು ಧರ್ಮಗಳಲ್ಲಿ ವೈವಿಧ್ಯತೆಗೆ ಹೆಸರುವಾಸಿಯಾಗಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ಸಂಪ್ರದಾಯಗಳನ್ನು ಆಚರಿಸುತ್ತಾರೆ.


COMMERCIAL BREAK
SCROLL TO CONTINUE READING

ಸಾಮಾನ್ಯವಾಗಿ ಹಿಂದೂ ದೇವಸ್ತಾನಗಳಲ್ಲಿ ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ವಿತರಿಸುವುದನ್ನು ನೋಡಿರುತ್ತೇವೆ ಆದರೆ.ದೇಸಿ ಚೈನೀಸ್ ಆಹಾರವನ್ನು ದೇವಸ್ಥಾನಗಳಲ್ಲಿ ಪ್ರಸಾದವಾಗಿ ನೀಡುವುದನ್ನು ನೀವು ಎಂದಾದರೂ ಕೇಳಿದ್ದೀರಾ? ಹೌದು ಇದು ನಿಮಗೆ ಅಚ್ಚರಿ ಎನಿಸಿದರು, ನೀವು ನಂಬಲೇಬೇಕು.


ಇದನ್ನೂ ಓದಿ: Viral Video: ವಿಶ್ವ ಆದಿವಾಸಿ ದಿನಾಚರಣೆಯಂದು ಮಮತಾ ಬ್ಯಾನರ್ಜಿ ‘ಕುಣಿಯೋಣ ಬಾರಾ’..!


ಮಾಧ್ಯಮಗಳ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳ (West Bengal)ದ ಕೋಲ್ಕತ್ತಾದಲ್ಲಿ ಪ್ರಸಿದ್ಧವಾದ 'ಚೈನೀಸ್ ಕಾಳಿ ದೇವಸ್ಥಾನ' ಎಂದು ಕರೆಯಲ್ಪಡುವ ದೇವಸ್ಥಾನವು ನೂಡಲ್ಸ್, ಮೊಮೊಗಳಿಂದ ಹಿಡಿದು ಅಕ್ಕಿ ಮತ್ತು ತರಕಾರಿ ಭಕ್ಷ್ಯಗಳನ್ನು ಪ್ರಸಾದದ ರೂಪದಲ್ಲಿ ವಿತರಿಸುತ್ತದೆ.ಈ ದೇವಸ್ಥಾನವು ಕೋಲ್ಕತ್ತಾದ ಮಠೇಶ್ವರತಾಳ ರಸ್ತೆಯಲ್ಲಿದೆ, ಇದನ್ನು 'ಚೀನಾ ಟೌನ್' ಎಂದೂ ಕರೆಯುತ್ತಾರೆ.ಈ ಕಾಳಿ ದೇಗುಲವು ತನ್ನ ವಿಶಿಷ್ಟ ಪ್ರಸಾದಕ್ಕಾಗಿ ಸಾಕಷ್ಟು ಖ್ಯಾತಿಯನ್ನು ಪಡೆದಿದೆ.


ಇದನ್ನೂ ಓದಿ:Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ?


ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 1930 ರ ಚೀನಾ ಯುದ್ಧದಲ್ಲಿ ಹಲವಾರು ಚೀನೀ ನಿರಾಶ್ರಿತರು ಭಾರತಕ್ಕೆ ವಲಸೆ ಬಂದಾಗ ಈ ದೇವಾಲಯವನ್ನು ನಿರ್ಮಿಸಲಾಯಿತು. ಸುಮಾರು 60 ವರ್ಷಗಳ ಹಿಂದೆ, ಚೀನಾದ ನಿರಾಶ್ರಿತರು ತಮ್ಮ ಕನಸಿನಲ್ಲಿ ಮಾ ಕಾಳಿಯನ್ನು ನೋಡಿದರು, ನಂತರ ಅವರು ಇತರ ಪ್ರದೇಶಗಳೊಂದಿಗೆ ಈ ದೇವಸ್ಥಾನವನ್ನು ನಿರ್ಮಿಸಲು ಸ್ಫೂರ್ತಿ ಪಡೆದರು.ಈ ವಲಸಿಗರು ಕೋಲ್ಕತ್ತಾದ ಟ್ಯಾಂಗ್ರಾಕ್ಕೆ ತೆರಳಿದರು.ಆಗ ಅವರ ಪ್ರಭಾವವು ಕೂಡ ಈ ಪ್ರದೇಶಕ್ಕೆ ಹರಡಿತು. ಆದ್ದರಿಂದ ಈ ಸ್ಥಳವನ್ನು ಈಗಲೂ ಚೀನಾ ಟೌನ್ ಎಂದು ಕರೆಯಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.