Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ?

Liquor Consumption - ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಲಾಗುತ್ತದೆ. ಪಶ್ಚಿಮ ಬಂಗಾಳ ಈ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಅಲ್ಲಿ 14 ಕೋಟಿ ಜನರು ಮದ್ಯ ಸೇವಿಸುತ್ತಾರೆ.

Written by - Nitin Tabib | Last Updated : Aug 13, 2021, 09:07 PM IST
  • ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮದ್ಯ ಸೇವಿಸಲಾಗುತ್ತದೆ.
  • ಮಧ್ಯದ ವಿಷಯಕ್ಕೆ ಬಂದರೆ ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ.
  • 3 ವರ್ಷಗಳಲ್ಲಿ ಶೇ.6.8 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ.
Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ? title=

ನವದೆಹಲಿ: Hightst Liquor Consumption State - ಭಾರತದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಅತಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ (Liquor) ಸೇವಿಸಲಾಗುತ್ತದೆ. ಪಶ್ಚಿಮ ಬಂಗಾಳ ಈ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಅಲ್ಲಿ 14 ಕೋಟಿ ಜನರು ಮದ್ಯ (LIquor) ಸೇವಿಸುತ್ತಾರೆ. ಆರ್ಥಿಕ ಸಂಶೋಧನಾ ಸಂಸ್ಥೆಯಾಗಿರುವ ಇಕ್ರಿಯಾರ್  (ICRIER) ಹಾಗೂ Law ಸಂಸ್ಥೆಯಾಗಿರುವ  (PLR Chamber) ನಡೆಸಿರುವ ಒಂದು ಜಂಟಿ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

14 ಕೋಟಿ ಜನರು ಸಾರಾಯಿ ಕುಡಿಯುತ್ತಾರೆ
ಅಧ್ಯಯನದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ (Werst Bengal) ಸುಮಾರು 14 ಕೋಟಿ ಜನರು ಮದ್ಯಪಾನ ಮಾಡುತ್ತಾರೆ. ಇದು ರಾಜ್ಯದ 3 ಪ್ರಮುಖ ಆದಾಯ ಗಳಿಸುವ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಬೆಲೆ ಮಾದರಿಯನ್ನು ಇತ್ತೀಚೆಗಷ್ಟೇ ಬದಲಾವಣೆ ಮಾಡಲಾಗಿದೆ ಎಂದು ವರದಿ ಹೇಳಿದೆ. ಇದನ್ನು ಮುಕ್ತ ಮಾರುಕಟ್ಟೆಯಲ್ಲಿ ಕೆಳಮಟ್ಟದ ಎಕ್ಸ್-ಡಿಸ್ಟಿಲರಿ ಮೌಲ್ಯದ  (ಇಡಿಪಿ) ಮೂಲಕ ಗುರಿತಿಸಲಾಗಿದೆ. ಮದ್ಯದ ಮೇಲಿನ ತೆರಿಗೆಯಲ್ಲಿ ಏರಿಕೆಯಾಗಿದೆ, ಇದು ಉದ್ಯಮದ ಪ್ರಮುಖ ಚಿಂತೆಗೆ ಕಾರಣವಾಗಿದೆ. ಈ ಇದೇ ವೇಳೆ , ಚಿಲ್ಲರೆ ಬೆಳೆಗಳು ತೀವ್ರ ಏರಿಕೆಯಿಂದಾಗಿ, ರಾಜ್ಯದಲ್ಲಿ ಭಾರತೀಯ ಮೇಡ್ ಫಾರಿನ್ ಲಿಕ್ಕರ್ (ಐಎಂಎಫ್ಎಲ್) ಮಾರಾಟದಲ್ಲಿ ಇಳಿಕೆಯಾಗಿದೆ.

ಇದನ್ನೂ ಓದಿ-Pre-Paid Smart Meter ಅಳವಡಿಕೆಗೆ ಟ್ರೈಲ್ ಶುರು : ಮೊದಲು ಎಲ್ಲಿ? ಬಿಲ್ ಕಟ್ಟುವುದು ಹೇಗೆ?

ಮೂರು ವರ್ಷಗಳಲ್ಲಿ ಶೇ. 6.8 ರಷ್ಟು ಮದ್ಯ ಮಾರಾಟ ಹೆಚ್ಚಾಗಿದೆ
ಲೆಕ್ಕಾಚಾರದ ವಿಧಾನವು ಕನಿಷ್ಠ ಮಟ್ಟದ ಇಡಿಪಿಯಾಗಿದ್ದರೂ, ಅಬಕಾರಿ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ವರದಿ ಹೇಳಿದೆ. ಬೆಲೆ ಬದಲಾವಣೆಗಳ ಕುರಿತು ಗ್ರಾಹಕರ ಪ್ರತಿಕ್ರಿಯೆಯ ದೃಷ್ಟಿಯಿಂದ ಸಮಸ್ಯೆಯನ್ನು ಪರಿಶೀಲಿಸಬೇಕಾಗಿದೆ. 

ಇದನ್ನೂ ಓದಿ-Vehicle Scrappage Policy ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ, ಇಲ್ಲಿದೆ ವಿಶೇಷತೆ

ಭಾರತವು ಆಲ್ಕೊಹಾಲ್ಯುಕ್ತ ಪಾನೀಯಗಳ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. 2020 ರಲ್ಲಿ ಈ ಮಾರುಕಟ್ಟೆಯ ಗಾತ್ರ $ 52.5 ಬಿಲಿಯನ್ ಆಗಿತ್ತು. ಮದ್ಯ ಮಾರುಕಟ್ಟೆಯು 2020 ರಿಂದ 2023 ರವರೆಗೆ ವಾರ್ಷಿಕವಾಗಿ 6.8 ಪ್ರತಿಶತದಷ್ಟು ಹೆಚ್ಚಾಗಿದೆ. 2015-16 ರಿಂದ 2018-19ರ ಅವಧಿಯಲ್ಲಿ ದೇಶದಲ್ಲಿ ಮದ್ಯದ ಉತ್ಪಾದನೆಯು ಸುಮಾರು ಶೇ. 23.8 ರಷ್ಟು ಹೆಚ್ಚಾಗಿದೆ. ಈ ಕ್ಷೇತ್ರ ಸುಮಾರು 15 ಲಕ್ಷ ಜನರಿಗೆ ಉದ್ಯೋಗ ನೀಡಿದೆ. 2019 ರಲ್ಲಿ ಈ ವಲಯದ ಮಾರಾಟ ವಹಿವಾಟು $ 48.8 ಬಿಲಿಯನ್ ಆಗಿತ್ತು.

ಇದನ್ನೂ ಓದಿ-Sputnik Light Vaccine: ದೇಶಕ್ಕೆ ಯಾವಾಗ ಸಿಗಲಿದೆ ಸಿಂಗಲ್ ಡೋಸ್ ಲಸಿಕೆ ಸ್ಪುಟ್ನಿಕ್? ಅದರ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News