ಭೂಪಾಲ್: ಬಿಜೆಪಿ ನಾಯಕ ಮತ್ತು ಮಧ್ಯಪ್ರದೇಶದ ಸಚಿವ ಗೋಪಾಲ್ ಭಾರ್ಗವ ಮೀಸಲಾತಿ ವ್ಯವಸ್ಥೆಯು ಸಾಮಾನ್ಯವಾಗಿ ದೇಶ ಮತ್ತು ಜನರ ಹಿತಾಸಕ್ತಿಗನುಗುಣವಾಗಿ ಕಾರ್ಯನಿರ್ವಹಿಸುವುದಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಉದ್ಯೋಗದ ಆಯ್ಕೆ ಮತ್ತು ಕಾಲೇಜಿನಲ್ಲಿನ ದಾಖಲಾತಿಗಳನ್ನು ಉಲ್ಲೇಖಿಸಿ,ಮಾತನಾಡಿದ ಅವರು ಮೀಸಲಾತಿ ಆಧಾರದ ಮೇಲೆ ಹೆಚ್ಚು ಅರ್ಹತೆಯನ್ನು ಹೊಂದಿದ ವ್ಯಕ್ತಿಯ ಬದಲಾಗಿ ಕಡಿಮೆ ಶೈಕ್ಷಣಿಕ ಕೌಶಲ್ಯತೆಯನ್ನು ಹೊಂದಿದ ಅಭ್ಯರ್ಥಿಯನ್ನು ಆಯ್ಕೆಮಾಡಿದಾಗ, ಇದು ರಾಷ್ಟ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.


ಇತ್ತೀಚಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಯವರು ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಶಿಕ್ಷಣ ಮತ್ತು ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಇರುವ ಮೀಸಲಾತಿ ಕೊನೆಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು.