ಪೋರ್ಟ್ ಬ್ಲೇರ್: ದೇಶದ ಹಲವು ರಾಜ್ಯಗಳಲ್ಲಿ ಕರೋನವೈರಸ್ ಮತ್ತೆ ತಲ್ಲಣ ಸೃಷ್ಟಿಸಿದೆ.  ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರ (Maharashtra) ಮತ್ತು ಪಂಜಾಬ್ (Punjab) ಈ ಎರಡೂ ರಾಜ್ಯಗಳಲ್ಲಿ ಕರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.  ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ಒಂದೇ ಒಂದು ಕರೋನಾ ಪ್ರಕರಣವೂ ಪತ್ತೆಯಾಗದ ಸ್ಥಳವೂ ದೇಶದಲ್ಲಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆ ಸ್ಥಳ ಅಂಡಮಾನ್ ಮತ್ತು ನಿಕೋಬಾರ್. 


COMMERCIAL BREAK
SCROLL TO CONTINUE READING

ಕರೋನಾ ಸಾಂಕ್ರಾಮಿಕ ರೋಗವನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿದ್ದ  ಲಾಕ್‌ಡೌನ್ (Lockdown) ಅನ್ನು ತೆರವುಗೊಳಿಸಿದ ನಂತರ ಈ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ, ಇದರ ಹೊರತಾಗಿಯೂ ಕಳೆದ 24 ಗಂಟೆಗಳಲ್ಲಿ ಈ ಸುಂದರವಾದ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ -19 (Covid 19) ರ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.


8 ಜನರು ಚಿಕಿತ್ಸೆಯನ್ನು ಮುಂದುವರಿಕೆ:
ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ (Andaman and Nicobar) ಈವರೆಗೆ ಒಟ್ಟು 5,039 ಕರೋನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 4969 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. 8 ಜನರ ಚಿಕಿತ್ಸೆ ನಡೆಯುತ್ತಿದೆ. "ಪ್ರತಿದಿನ ಸುಮಾರು 700-800 ಪ್ರವಾಸಿಗರು ಆಗಮಿಸಿದರೂ, ಕರೋನಾವೈರಸ್ ಸ್ಥಿತಿಯನ್ನು ಒಟ್ಟಾರೆ ನಿಯಂತ್ರಿಸಲಾಗುತ್ತಿದೆ" ಎಂದು ಅವರು ಹೇಳಿದರು.


ಇದನ್ನೂ ಓದಿ- Bollywood ನಟ ಅಮೀರ್ ಖಾನ್ ಗೆ ಕರೋನಾ ಸೋಂಕು


ಕರೋನಾ ನೆಗೆಟಿವ್ ವರದಿಯಿಲ್ಲದೆ ಪ್ರವೇಶವಿಲ್ಲ :
ವಿಮಾನಗಳು ಅಥವಾ ಕೋಲ್ಕತಾ ಅಥವಾ ಚೆನ್ನೈನಿಂದ ನೀರಿನ ಹಡಗುಗಳ ಮೂಲಕ ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಜನರಿಗೆ ಕರೋನದ ಋಣಾತ್ಮಕ ವರದಿಯನ್ನು ತರುವುದು ಅಗತ್ಯ. ಕರೋನಾ ನೆಗೆಟಿವ್ ವರದಿಯಿಲ್ಲದ ಯಾವುದೇ ಪ್ರವಾಸಿಗರಿಗೆ ಇಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.


ಕಟ್ಟುನಿಟ್ಟಿನ ಪ್ರೋಟೋಕಾಲ್ ಪಾಲನೆ:
ಅಧಿಕಾರಿಯ ಪ್ರಕಾರ, ಸ್ಥಳೀಯ ಆಡಳಿತವು ಆರೋಗ್ಯ ಸಂರಕ್ಷಣಾ ಶಿಷ್ಟಾಚಾರವನ್ನು ಅನುಸರಿಸುವ ಬಗ್ಗೆ ಕಟ್ಟುನಿಟ್ಟಾಗಿರುವುದರಿಂದ ರೋಗದ ಹರಡುವಿಕೆಯನ್ನು ತಡೆಯಬಹುದು.


ಇದನ್ನೂ ಓದಿ-  18 ರಾಜ್ಯಗಳಲ್ಲಿ ಹೊಸ ಕೊರೊನಾ ತಳಿ ಸಕ್ರಿಯವಾಗಿರುವುದು ಆತಂಕದ ಸಂಗತಿ'


ಅಂಕಿಅಂಶಗಳ ಒಂದು ನೋಟ:
ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಎಂಟು ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, 4969 ರೋಗಿಗಳು ಸೋಂಕು ಮುಕ್ತರಾಗಿದ್ದಾರೆ. ಕರೋನಾ ಸೋಂಕಿನಿಂದ ಇದುವರೆಗೆ 62 ಜನರು ಸಾವನ್ನಪ್ಪಿದ್ದರೆ, ಸೋಮವಾರ ಯಾವುದೇ ಸಾವಿನ ವರದಿ ಆಗಿಲ್ಲ. 12,401 ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಿಗೆ ಕರೋನಾ ಲಸಿಕೆ ನೀಡಲಾಗಿದ್ದು, 45 ವರ್ಷಕ್ಕಿಂತ ಮೇಲ್ಪಟ್ಟ 2952 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.