ಲಕ್ನೋ: ದೇಶದಲ್ಲಿ  ಕೊರೊನಾವೈರಸ್ಗೆ (Coronavirus) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗ ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಜನರಲ್ಲಿ ಕರೋನಾ ಸೋಂಕು ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ಕೋವಿಡ್ -19 (Covid-19) ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಹಲವು ನಗರಗಳಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಕಳೆದ ವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ವಾರಗಳ ಲಾಕ್‌ಡೌನ್ ವಿಧಿಸಲಾಗಿತ್ತು. ಇದೀಗ ಇಂದಿನಿಂದ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಲಾಕ್‌ಡೌನ್ (Lockdown) ವಿಧಿಸಲಾಗುತ್ತಿದೆ. ಜುಲೈ 20 ರ ಸೋಮವಾರದಿಂದ ರಾತ್ರಿ 10 ಗಂಟೆಗೆ ಲಕ್ನೋ, ಇಂದಿರಾ ನಗರ, ಗಾಜಿಪುರ, ಆಶಿಯಾನಾ, ಸರೋಜಿನಿ ನಗರದ ನಾಲ್ಕು ಪ್ರದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗುತ್ತಿದೆ. ರಾಜಧಾನಿಯ ಈ ಪ್ರದೇಶಗಳಿಂದ ಗರಿಷ್ಠ ಕರೋನಾ ಪ್ರಕರಣಗಳು ಬರುತ್ತಿವೆ ಎಂದು ಲಕ್ನೋದ ಡಿಎಂ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಜುಲೈ 24 ರೊಳಗೆ ಈ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.


ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿಕ್ರಿಯೆ ಕೇಳಿದ ಕೇಂದ್ರ


ಅಗತ್ಯ ಸೇವೆಗಳನ್ನು ಹೊರತುಪಡಿಸಿ ಈ ಸ್ಥಳಗಳಲ್ಲಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದಲ್ಲದೆ ವಿನಾಕಾರಣ ಹೊರಗೆ ಸಂಚರಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಡಳಿತ ನಿರ್ದೇಶನ ನೀಡಿದೆ. ಲಾಕ್‌ಡೌನ್ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು. ಜನರು ತುರ್ತು ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸಬಹುದು. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹೋಗಲು ಒಟ್ಟಿಗೆ ಟಿಕೆಟ್ ಹೊಂದಿರುವುದು ಅವಶ್ಯಕ ಎಂದು ತಿಳಿಸಲಾಗಿದೆ.


ಲಕ್ನೋ (Lucknow) ದಲ್ಲಿ ಮಂತ್ರಿಗಳು, ಐಪಿಎಸ್ ಅಧಿಕಾರಿಗಳು ಸೇರಿದಂತೆ 224 ಜನರಲ್ಲಿ ಕರೋನಾ ದೃಢಪಟ್ಟಿದೆ. ಐಪಿಎಸ್ ನವನೀತ್ ಸಿಕೆರಾ, ಸಚಿವ ಕಮಲ್ ರಾಣಿ ವರುಣ್ ಅವರಿಗೂ ಕೂಡ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ. ಲಕ್ನೋದಲ್ಲಿ ಒಟ್ಟು 4,009 ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1453 ಜನರನ್ನು ಗುಣಪಡಿಸಲಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ಸೋಂಕಿನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನೋಯ್ಡಾದಲ್ಲಿ 4,144 ಕೋವಿಡ್ -19 ಪ್ರಕರಣಗಳಿದ್ದು, 39 ಜನರು ಸಾವನ್ನಪ್ಪಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಯೋಗಿ ಸರ್ಕಾರ ಕರೋನಾ ಪರಿಸ್ಥಿತಿಯನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದು ರಾಜ್ಯದಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್ ಜಾರಿಗೆ ತಂದಿದೆ.


ಮಾನ್ಸೂನ್, ಚಳಿಗಾಲದಲ್ಲಿ ಕರೋನಾ ಹೆಚ್ಚಾಗುವ ಸಾಧ್ಯತೆ: IIT, ಏಮ್ಸ್ ಸಂಶೋಧನೆ


ಇದಲ್ಲದೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್ ಅನ್ನು ವಿಧಿಸಲಾಗಿದೆ. ಲಕ್ನೋ ಹೊರತುಪಡಿಸಿ ಜುಲೈ 22 ಮಧ್ಯರಾತ್ರಿಯಿಂದ ಜುಲೈ 28ರವರೆಗೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಲಾಕ್‌ಡೌನ್ ವಿಧಿಸಲಾಗುವುದು. ಛತ್ತೀಸ್‌ಗಢ (Chhattisgarh)ದಲ್ಲಿ 5,407 ಕೋವಿಡ್ ಪ್ರಕರಣಗಳಿದ್ದು, 24 ಜನರು ಸಾವನ್ನಪ್ಪಿದ್ದಾರೆ.


ಇಡೀ ದೇಶದಲ್ಲಿ  ಕೋವಿಡ್ -19 ಪ್ರಕರಣಗಳ ಸಂಖ್ಯೆ 11 ಲಕ್ಷ ತಲುಪಿದೆ. ಅದೇ ಸಮಯದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 26 ಸಾವಿರವನ್ನು ದಾಟಿದೆ. ದೇಶದ ದಕ್ಷಿಣದ ರಾಜ್ಯಗಳಲ್ಲಿ ಭಾನುವಾರ ಕರೋನಾವೈರಸ್‌ನ ಹೊಸ ಪ್ರಕರಣಗಳಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ.