ಕರೋನಾ: ಹಾಟ್ ಸ್ಪಾಟ್ಗಳಿರುವ ಪ್ರದೇಶಗಳಿಗೆ ICMR ಹೊಸ ಮಾರ್ಗಸೂಚಿ ಬಿಡುಗಡೆ
ಈ ಎಲ್ಲಾ ಕ್ರಮಗಳ ಮುಖ್ಯ ಉದ್ದೇಶವೆಂದರೆ ದೇಶದಲ್ಲಿ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳುವುದು.
ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೇಶದಲ್ಲಿ ಕೊರೋನಾವೈರಸ್ (Coronavirus) ಸೋಂಕಿನ ಹೆಚ್ಚು ಪೀಡಿತ ಪ್ರದೇಶಗಳಿಗೆ ಅಂದರೆ ಹಾಟ್ ಸ್ಪಾಟ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಯಲ್ಲಿ ಹಾಟ್ ಸ್ಪಾಟ್‌ಗಳಲ್ಲಿ ಯಾರನ್ನು ಪರೀಕ್ಷಿಸಲಾಗುತ್ತದೆ ಮತ್ತು ಪರೀಕ್ಷೆಗಳನ್ನು ಹೇಗೆ ಮಾಡಲಾಗುವುದು ಎಂಬ ವಿವರಗಳನ್ನು ನೀಡಲಾಗಿದೆ.
ಹಾಟ್ ಸ್ಪಾಟ್‌ಗಳಲ್ಲಿ ಯಾರಿಗೆ ಪರೀಕ್ಷೆ?
ಹಾಟ್ ಸ್ಪಾಟ್‌ಗಳಲ್ಲಿ ಶೀತ, ಕೆಮ್ಮು ಅಥವಾ ಜ್ವರ ಇರುವ ಎಲ್ಲರಿಗೂ ಕೋವಿಡ್-19 (COVID -19 ) ಪರೀಕ್ಷೆಗಳನ್ನು ಮಾಡಲಾಗುತ್ತದೆ. ಅಂತಹ ಜನರನ್ನು ಮೊದಲು ಆರ್ಟಿ ಪಿಸಿಆರ್ ಮತ್ತು ಏಳು ದಿನಗಳ ನಂತರ ಕ್ಷಿಪ್ರ ಪ್ರತಿಕಾಯ ಪರೀಕ್ಷೆಯಿಂದ ಪರೀಕ್ಷಿಸಲಾಗುತ್ತದೆ. ರೋಗಿಯ ಕರೋನಾ ಪರೀಕ್ಷೆಯು ನಕಾರಾತ್ಮಕವಾಗಿದ್ದರೆ ಆತನನ್ನು 7 ದಿನಗಳವರೆಗೆ ನಿರ್ಬಂಧಿಸಲಾಗುತ್ತದೆ. ಏತನ್ಮಧ್ಯೆ, ಕೋವಿಡ್ 19 ರ ಲಕ್ಷಣಗಳು ಮತ್ತೆ ಕಂಡುಬಂದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಇದಲ್ಲದೆ ಇಂತಹವರಿಗೂ ಕೂಡ ಕೊರೋನಾ ಟೆಸ್ಟ್ ಮಾಡಲಾಗುತ್ತದೆ:
- ಕರೋನಾ ರೋಗಲಕ್ಷಣಗಳನ್ನು ಹೊಂದಿರುವವರು ಮತ್ತು ಕಳೆದ 14 ದಿನಗಳಲ್ಲಿ ವಿದೇಶದಿಂದ ಬಂದವರು.
- ಯಾರ ಕರೋನಾ ಪರೀಕ್ಷೆಯು ಸಕಾರಾತ್ಮಕವಾಗಿ ಬಂದಿದೆ ಮತ್ತು ಅವನೊಂದಿಗೆ ಸಂಪರ್ಕಕ್ಕೆ ಬರುವವರಿಗೂ ಕರೋನ ಟೆಸ್ಟ್ ಮಾಡಲಾಗುತ್ತದೆ.
- ಕರೋನಾ ಲಕ್ಷಣಗಳು ಕಂಡು ಬರುವ ಆರೋಗ್ಯ ಕಾರ್ಯಕರ್ತರಿಗೆ ಕರೋನಾ ಪರೀಕ್ಷೆಯನ್ನು ಮಾಡಲಾಗುವುದು.
- SARI (Severe Acute Respiratory Illness) ಎಲ್ಲಾ ರೋಗಿಗಳನ್ನು ಪರೀಕ್ಷಿಸಲಾಗುವುದು.
ಈ ಎಲ್ಲಾ ಕ್ರಮಗಳ ಮುಖ್ಯ ಉದ್ದೇಶವೆಂದರೆ ಕೊರೋನಾ ಸೋಂಕಿತ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡುವುದು ಮತ್ತು ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗದಂತೆ ನಿಗಾ ವಹಿಸುವುದು.