ನವದೆಹಲಿ: ಕರೋನಾ ಸೋಂಕಿಗೆ ಒಳಗಾದ ನಂತರ ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್  ವಿಜ್ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಬುಧವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಅನಿಲ್ ವಿಜ್ (Anil Vij) ಅವರನ್ನು ಮಂಗಳವಾರ ಸಂಜೆ ಮೇದಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸೆಂಬರ್ 5 ರಂದು ಕರೋನಾವೈರಸ್ ಸೋಂಕಿಗೆ  ತುತ್ತಾದ ನಂತರ ಹರಿಯಾಣದ ಆರೋಗ್ಯ ಸಚಿವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು PGIMS ರೋಹ್ಟಕ್ಗೆ ದಾಖಲಿಸಲಾಯಿತು.


Good news: ಸ್ವದೇಶೀ ಕರೋನಾ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿ


ಅಧಿಕೃತ ಹೇಳಿಕೆಯಲ್ಲಿ ಅನಿಲ್ ವಿಜ್ ಅವರನ್ನು  ಡಿಸೆಂಬರ್ 15 ರ ರಾತ್ರಿ ಗುರುಗ್ರಾಮ್ನ ಮೆದಂತದಲ್ಲಿ  ದಾಖಲಿಸಲಾಗಿದೆ ಎಂದು ವಿಜ್ ಅವರ ಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಆಮ್ಲಜನಕವನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.


ಮದಂತಾ ವೈದ್ಯಕೀಯ ಅಧೀಕ್ಷಕರ ಪ್ರಕಾರ ಡಾ. ಎ.ಕೆ. ದುಬೆ ಅವರು ಸಚಿವರಿಗೆ ಕೋವಿಡ್ ನ್ಯುಮೋನಿಯಾ ಇದೆ. ಇದರಿಂದಾಗಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.


Watch: ಖುದ್ದು Covaxin ಪ್ರಯೋಗಕ್ಕೆ ಒಳಪಟ್ಟ ಹರಿಯಾಣ ಅರೋಗ್ಯ ಸಚಿವ ಅನಿಲ್ ವಿಜ್


ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಸ್ಥಳೀಯ ಕರೋನವೈರಸ್ನ "ಕೋವಾಕ್ಸಿನ್" (Covaxin) ಲಸಿಕೆಯ ಪ್ರಮಾಣವನ್ನು ವಿಜ್ ತೆಗೆದುಕೊಂಡಿದ್ದಾರೆ. ಕರೋನಾ ಲಸಿಕೆಯ ಮೂರನೇ ಹಂತದ ಪ್ರಯೋಗದ ವೇಳೆ ಸ್ವಯಂಸೇವಕರಾಗಿ ವಿಜ್ ಸ್ವತಃ ಲಸಿಕೆ ತೆಗೆದುಕೊಳ್ಳಲು ಮುಂದಾಗಿದ್ದರು. ಅವರಿಗೆ ನವೆಂಬರ್ 20 ರಂದು ಲಸಿಕೆ ಡೋಸ್ ನೀಡಲಾಯಿತು.