ನವದೆಹಲಿ: ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಿದೆ. ತನಿಖೆಯ ಜೊತೆಗೆ ರಾಜಸ್ಥಾನ ಸರ್ಕಾರವು ಕೋವಿಡ್ -19 (Covid 19) ತನಿಖೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗದರ್ಶಿ ರೇಖೆಗಳ ಪ್ರಕಾರ ಕರೋನಾ ತನಿಖೆಗಾಗಿ ರಾಜ್ಯದಲ್ಲಿ ಈಗ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.
 
ಈಗ ರಾಜಸ್ಥಾನದಲ್ಲಿ ಕರೋನಾವೈರಸ್ (Coronavirus) ಪರೀಕ್ಷೆಗೆ ಒಳಪಡುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ತನಿಖಾ ಕೇಂದ್ರದಲ್ಲಿ ನಮೂದಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ ಅವನು ಕುಟುಂಬದ ಮುಖ್ಯಸ್ಥ ಅಥವಾ ಇತರ ಸದಸ್ಯರ ಆಧಾರ್ ಕಾರ್ಡ್ ಅನ್ನು ನಮೂದಿಸಬೇಕಾಗುತ್ತದೆ.


Unlock-3: ಆಗಸ್ಟ್ 31 ರವರೆಗೆ ತೆರೆಯುವುದಿಲ್ಲ ಸ್ಕೂಲ್, ಮೆಟ್ರೋ, ಸಿನೆಮಾ ಹಾಲ್


COMMERCIAL BREAK
SCROLL TO CONTINUE READING

ಮಾದರಿಯನ್ನು ತೆಗೆದುಕೊಳ್ಳುವಾಗ ರೋಗಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆರ್‌ಟಿ-ಪಿಸಿಆರ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುವಂತೆ ರಾಜಸ್ಥಾನದ ಆರೋಗ್ಯ ಇಲಾಖೆ ಕರೋನಾ ಪರೀಕ್ಷಾ ಕೇಂದ್ರಗಳ ಲ್ಯಾಬ್ ತಂತ್ರಜ್ಞರಿಗೆ ಸೂಚನೆ ನೀಡಿದೆ. ಎಲ್ಲಾ ಲ್ಯಾಬ್ ತಂತ್ರಜ್ಞರಿಗೆ ರೋಗಿಯ ಆಧಾರ್ ಕಾರ್ಡ್ (Aadhaar Card) ಸಂಖ್ಯೆಯನ್ನು ನಮೂದಿಸಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.


ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್ ಅನ್ನು ನೋಂದಾಯಿಸದಿದ್ದರೆ ಅಂತಹ ಪ್ರಕರಣವನ್ನು ನೋಂದಾಯಿಸಲಾಗುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಐಶ್ವರ್ಯಾ ರೈ ಧನ್ಯವಾದ ಅರ್ಪಿಸಿದ್ದು ಹೀಗೆ!


ಈ ನಿರ್ಧಾರದ ಹಿಂದಿನ ಕಾರಣ....?
ಆರೋಗ್ಯ ಇಲಾಖೆಯ ಪ್ರಕಾರ ಕರೋನಾ ತನಿಖೆಯ ಸಮಯದಲ್ಲಿ ರಾಜಸ್ಥಾನದಲ್ಲಿ ಕೆಲವರು ತಮ್ಮ ಸರಿಯಾದ ಮಾಹಿತಿಯನ್ನು ನೋಂದಾಯಿಸುತ್ತಿಲ್ಲ, ಇದರಿಂದಾಗಿ ಪ್ರಕರಣಗಳನ್ನು ಪತ್ತೆಹಚ್ಚುವುದು ಕಷ್ಟ ಮತ್ತು ಇದು ಸರ್ಕಾರಕ್ಕೆ ತನ್ನ ಕಾರ್ಯತಂತ್ರವನ್ನು ರೂಪಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. 


ಕರೋನಾ ಟೆಸ್ಟ್ ಒಂದೊಮ್ಮೆ ಪಾಸಿಟಿವ್ ಎಂದಾದರೆ ಆ ವ್ಯಕ್ತಿ ವಾಸಿಸುವ ಪ್ರದೇಶವನ್ನು ಧಾರಕ ಪ್ರದೇಶವನ್ನಾಗಿ ಮಾಡಿ ಪ್ರತಿ ಮನೆ ಮತ್ತು ವ್ಯಕ್ತಿಗೆ ಕರೋನಾ ಟೆಸ್ಟ್ ಮಾಡಿಸಲಾಗುತ್ತದೆ. ಇದರಿಂದ ವೈರಸ್ ಸೋಂಕು ಹರಡದಂತೆ ತಡೆಯಬಹುದು ಎಂದು ಇಲಾಖೆ ಹೇಳುತ್ತದೆ. ಆದರೆ ರೋಗಿಯ ಸರಿಯಾದ ಮಾಹಿತಿಯನ್ನು ಹೊಂದಿಲ್ಲದಿದ್ದರೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಲ್ಲುವುದಾದರು ಹೇಗೆ? ಹಾಗಾಗಿಯೇ ಕರೋನಾವೈರಸ್ ಪರೀಕ್ಷೆಗೆ ಒಳಪಡುವ ವ್ಯಕ್ತಿಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.