ನವದೆಹಲಿ : ಲಾಕ್ ಡೌನ್ (Lock down), ನೈಟ್ ಕರ್ಫ್ಯು ಯಾವುದಕ್ಕೂ ಕರೋನಾಸುರ ಜಗ್ಗುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.  ಕರೋನಾಸುರನಿಗೆ ಕಡಿವಾಣ ಹಾಕುವ ಸರ್ಕಾರದ ಕ್ರಮಗಳು ಯಶಸ್ವಿಯಾಗಿದೆಯೇ ಎನ್ನುವುದಕ್ಕೆ ಇದೀಗ ಪುರಾವೆ ಸಿಗುತ್ತಿಲ್ಲ. ಯಾಕೆಂದ್ರೆ, ಕಳೆದ 24 ಗಂಟೆಗಳಲ್ಲಿ 3 ಲಕ್ಷ 49 ಸಾವಿರದ 691 ಜನರ ಮೇಲೆ ಕರೋನಾ ದಾಳಿ ಮಾಡಿದೆ.  ಇದೇ ವೇಳೆ ಕಳೆದ ಒಂದೇ ದಿನ 2767 ಜನರನ್ನು ಬಲಿ ಪಡೆದುಕೊಂಡಿದೆ ಕರೋನಾ ವೈರಸ್ (Coronavirus).  ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದೆ. ನಂತರ ಕ್ರಮವಾಗಿ ಉತ್ತರ ಪ್ರದೇಶ, ಕರ್ನಾಟಕ, ಕೇರಳ ಮತ್ತು ದೆಹಲಿಯಲ್ಲಿ ಕರೋನಾ ಭೀಕರವಾಗಿ ಹರಡುತ್ತಿದೆ.  ಕಳೆದ ಕೆಲವು ದಿನಗಳಿಂದ ನಿತ್ಯದ ಕರೋನಾ ಕೇಸ್ (Coroan case) ಮೂರು ಲಕ್ಷಕ್ಕೂ ಅಧಿಕ ದಾಖಲಾಗುತ್ತಿದೆ.  


COMMERCIAL BREAK
SCROLL TO CONTINUE READING


ಕಳೆದ ಒಂದೇ ದಿನ   ಅತಿ ಹೆಚ್ಚು ಸಾವು :
ಆರೋಗ್ಯ  ಇಲಾಖೆ ಮಾಹಿತಿ ಪ್ರಕಾರ ಕಳೆದ ಒಂದೇ ದಿನ 2767 ಜನರನ್ನು ಕರೋನಾ ( COVID) ಬಲಿ ಪಡೆದುಕೊಂಡಿದೆ. ಇದು ಭಾರತದ ಮಟ್ಟಿಗೆ ಒಂದೇ ದಿನದಲ್ಲಿ ದಾಖಲಾದ  ಅತಿ ಹೆಚ್ಚು ಸಂಖೆಯ ಮರಣ ಪ್ರಮಾಣವಾಗಿದೆ. ಇದರ ಜೊತೆಗೆ ಇದೀಗ ದೇಶದಲ್ಲಿ ಒಂದು ಕೋಟಿ 69 ಲಕ್ಷದ 60 ಸಾವಿರದ 172 ಮಂದಿಗೆ ಕರೋನಾ ಸೋಂಕು (Coronavirus) ತಗುಲಿದೆ. 26.82 ಲಕ್ಷ ಆಕ್ಟಿವ್ ಪಾಸಿಟಿವ್ ಕೇಸ್ ಗಳು ಭಾರತದಲ್ಲಿ ಇದೀಗ ಇವೆ.  ಬಹುತೇಕ 14 ಕೋಟಿ ಜನಸಂಖ್ಯೆಗೆ ವಾಕ್ಸಿನೇಶನ್ (Vaccination) ಮಾಡಲಾಗಿದೆ. ಮಹಾರಾಷ್ಟ್ರ (Maharastra) ,  ಉತ್ತರ ಪ್ರದೇಶ, ದೆಹಲಿ, ಕರ್ನಾಟಕ(Karnataka), ಛತ್ತೀಸ್ ಗಢ, ಮಧ್ಯಪ್ರದೇಶ, ಕೇರಳ, ಗುಜರಾತ್, ತಮಿಳುನಾಡು, ರಾಜಾಸ್ತಾನ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ  ಅತಿ ಹೆಚ್ಚು ಪ್ರಕರಣಗಳು ವರಿಯಾಗಿವೆ.   


ಕೋವಾಕ್ಸಿನ್ ಬೆಲೆ ಪ್ರಕಟಿಸಿದ Bharat Biotech; ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರ ನಿಗದಿ


ಈ ಮಧ್ಯೆ, ದೆಹಲಿಯಲ್ಲಿ ಮತ್ತೆ ಆರು ದಿನಗಳ ಲಾಕ್ ಡೌನ್ (Lockdown) ಹೇರಲಾಗಿದೆ. ಮುಂದಿನ ಸೋಮವಾರದ ಬೆಳಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಮುಂದುವರೆಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ. ದೇಶದಲ್ಲಿ ವರದಿಯಾಗುತ್ತಿರುವ ಹೊಸ ಪ್ರಕರಣಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ. 



ಇದನ್ನೂ ಓದಿ :  ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.