ಕೋವಾಕ್ಸಿನ್ ಬೆಲೆ ಪ್ರಕಟಿಸಿದ Bharat Biotech; ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರ ನಿಗದಿ

 ರಾಜ್ಯ ಸರ್ಕಾರ ಒಂದು ಡೋಸ್  ಕೋವಾಕ್ಸಿನ್ ಗೆ  600 ರೂ. ಪಾವತಿಸಿದರೆ, ಖಾಸಗಿ ಆಸ್ಪತ್ರೆಗಳು ಒಂದು ಡೋಸ್‌ಗೆ 1200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಮಧ್ಯೆ, ಕೋವಿಶೀಲ್ಡ್ ಬೆಲೆ ಕೂಡಾ ಒಂದೂವರೆ ಪಟ್ಟು ಹೆಚ್ಚಾಗಲಿದೆ. ಶೀಘ್ರದಲ್ಲೇ ಕೋವಿಶೀಲ್ಡ್ ನ ಹೊಸ ಬೆಲೆ ಪ್ರಕಟವಾಗಲಿದೆ. 

Written by - Ranjitha R K | Last Updated : Apr 25, 2021, 08:40 AM IST
  • ಕೋವಾಕ್ಸಿನ್ ಬೆಲೆ ಪ್ರಕಟಿಸಿದ ಭಾರತ್ ಬಯೋಟೆಕ್
  • ಒಂದೂವರೆ ಪಟ್ಟು ಹೆಚ್ಚಾಗಲಿದೆ ಕೋವಿಶೀಲ್ಡ್ ಬೆಲೆ
  • ಮೂರನೇ ಹಂತದ ವಾಕ್ಸಿನೇಷನ್ ಗೆ ಇಂದಿನಿಂದ ನೋಂದಣಿ ಆರಂಭ
ಕೋವಾಕ್ಸಿನ್ ಬೆಲೆ ಪ್ರಕಟಿಸಿದ Bharat Biotech; ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇರೆ ಬೇರೆ ದರ ನಿಗದಿ title=
ಕೋವಾಕ್ಸಿನ್ ಬೆಲೆ ಪ್ರಕಟಿಸಿದ ಭಾರತ್ ಬಯೋಟೆಕ್ (file photo)

ನವದೆಹಲಿ : ಕರೋನಾ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ (Bharat Biotech) ಶನಿವಾರ ರಾತ್ರಿ ಕೋವಾಕ್ಸಿನ್ (Covaxin)  ಬೆಲೆಯನ್ನು ಪ್ರಕಟಿಸಿದೆ. ಕಂಪನಿಯ ಪ್ರಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳು ಒಂದೇ ಪ್ರಮಾಣದ ಕೊವಾಕ್ಸಿನ್ ಗೆ  ಬೇರೆ ಬೇರೆ ಬೆಲೆಗಳನ್ನು ಪಾವತಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಒಂದು ಡೋಸ್ ಗೆ  600 ರೂ. ಪಾವತಿಸಿದರೆ, ಖಾಸಗಿ ಆಸ್ಪತ್ರೆಗಳು ಒಂದು ಡೋಸ್‌ಗೆ 1200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಕೇಂದ್ರಕ್ಕೆ 150 ರೂ.ಗೆ ಸಿಗಲಿದೆ ಲಸಿಕೆ ಸಿಗಲಿದೆ : 
ಈ ಲಸಿಕೆ (Vaccine) ಕೇಂದ್ರ ಸರ್ಕಾರಕ್ಕೆ ಕೇವಲ 150 ರೂ.ಗೆ ಲಭ್ಯವಾಗಲಿದೆ ಎಂದು ಭಾರತೀಯ ಬಯೋಟೆಕ್ (Bharat Biotech) ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಈ ಲಸಿಕೆಯ ಎಕ್ಸ್ ಪೋರ್ಟ್  ಡ್ಯೂಟಿಯ   ಸುಂಕವನ್ನು 15 ರಿಂದ 20 ಡಾಲರ್‌ಗೆ ನಿಗದಿಪಡಿಸಲಾಗಿದೆ. ಕರೋನಾ (Coronavirus) ರೋಗಿಗಳ ಚಿಕಿತ್ಸೆ ಮತ್ತು ಅಗತ್ಯವಿರುವ ಇತರ ವೈದ್ಯಕೀಯ ಚಿಕಿತ್ಸೆಗಳಿಗಾಗಿ ಕಡಿಮೆ ಬೆಲೆಯಲ್ಲಿಯೇ ಲಸಿಕೆಯನ್ನು ಪೂರೈಸುವುದಾಗಿ ಕಂಪನಿ ಹೇಳಿದೆ.  ಲಸಿಕೆ ಉತ್ಪಾದನೆಯ ಸೀಮಿತ ಸ್ಟಾಕ್ ಅನ್ನು ಮಾತ್ರ ಖಾಸಗಿ ಕಂಪನಿಗೆ ಸರಬರಾಜು ಮಾಡಲಾಗುವುದು. ಉಳಿದ ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ತಲುಪಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು

ಒಂದೂವರೆ ಪಟ್ಟು ಹೆಚ್ಚಾಗಲಿದೆ ಕೋವಿಶೀಲ್ಡ್ ಬೆಲೆ : 
ಈ ಹಿಂದೆ, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ಕೋವಿಶೀಲ್ಡ್ ಲಸಿಕೆ (Covishield) ಬೆಲೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸ್‌ಗೆ 600 ರೂ ಎಂದು ಹೇಳಿತ್ತು. ಈ ಹೇಳಿಕೆ ನಂತರ ವಿವಾದಕ್ಕೂ ಕಾರಣವಾಗಿತ್ತು. ಇದರ ನಂತರ, ಕಂಪನಿಯು ಈ ಬಗ್ಗೆ ಸ್ಪಷ್ಟೀಕರಣ ಕೂಡಾ ನೀಡಿತ್ತು. ಲಸಿಕೆಯ ಆರಂಭಿಕ ಬೆಲೆ ಎಡ್ವಾನ್ಸ್  ಫಂಡಿಂಗ್ ಅನ್ನು ಆಧರಿಸಿತ್ತು.  ಆದರೆ ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಹೂಡಿಕೆಯ ಅಗತ್ಯವಿದೆ. ಆದ್ದರಿಂದ, ಲಸಿಕೆಯ ಬೆಲೆಯನ್ನು ಒಂದೂವರೆ ಪಟ್ಟು ಹೆಚ್ಚಿಸಲಾಗುವುದು ಮತ್ತು ಶೀಘ್ರದಲ್ಲೇ ಹೊಸ ಬೆಲೆಗಳನ್ನು ಘೋಷಿಸುವುದಾಗಿ ಕಂಪನಿ ತಿಳಿಸಿತ್ತು. 

ಯಾರೆಲ್ಲಾ ಲಸಿಕೆಗಾಗಿ ಹಣ ಪಾವತಿಸಬೇಕಾಗುತ್ತದೆ:
ಕರೋನಾ ವ್ಯಾಕ್ಸಿನೇಷನ್ (Corona Vaccination) ಮೂರನೇ ಹಂತವು ಮೇ 1 ರಿಂದ ದೇಶಾದ್ಯಂತ ಪ್ರಾರಂಭವಾಗಲಿದೆ. ಇದರ ಅಡಿಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕರೋನಾ ಲಸಿಕೆ ನೀಡಲಾಗುವುದು. ಇದಕ್ಕಾಗಿ ನೋಂದಣಿ ಇಂದಿನಿಂದ ಅಂದರೆ ಏಪ್ರಿಲ್ 24ರಿಂದ ಪ್ರಾರಂಭವಾಗಿದೆ. ಏತನ್ಮಧ್ಯೆ, ಲಸಿಕೆ ತಯಾರಕ ಕಂಪನಿಗಳು ಒಂದು ಡೋಸ್ ಲಸಿಕೆಯ ಬೆಲೆಯನ್ನು ಘೋಷಿಸಿವೆ. ಆದಾಗ್ಯೂ, ಕೆಲವು ರಾಜ್ಯ ಸರ್ಕಾರಗಳು ಮೂರನೇ ಹಂತದಲ್ಲಿ ಉಚಿತ ವ್ಯಾಕ್ಸಿನೇಷನ್ ಘೋಷಿಸಿವೆ. ಆದರೆ ಕೆಲ ರಾಜ್ಯಗಳಲ್ಲಿ, ಸಾರ್ವಜನಿಕರು ತಮ್ಮ ಜೇಬಿನಿಂದ ಹಣವನ್ನು ಪಾವತಿಸಿ ಲಸಿಕೆ ಪಡೆಯಬೇಕಾಗುತ್ತದೆ.

ಇದನ್ನೂ ಓದಿ : Oxygen Supply ತಡೆ ಹಿಡಿಯುವವರನ್ನು ಗಲ್ಲಿಗೇರಿಸಲಾಗುವುದು: ಹೈಕೋರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News