ನವದೆಹಲಿ: ದೇಶದಲ್ಲಿ ಕರೋನಾ ಪೀಡಿತರ ಸಂಖ್ಯೆ 24,500 ದಾಟಿದ್ದು  ಕರೋನಾವೈರಸ್ (Coronavirus) ‌ನಿಂದ ಮೃತಪಟ್ಟವರ ಸಂಖ್ಯೆ 776ಕ್ಕೆ ಏರಿಕೆಯಾಗಿದೆ.  ಏತನ್ಮಧ್ಯೆ ಉತ್ತರ ಪ್ರದೇಶ ಸರ್ಕಾರ ಐಸಿಎಂಆರ್ ಪ್ರಮಾಣೀಕೃತ ಕರೋನಾ ಪರೀಕ್ಷಾ ಪ್ರಯೋಗಾಲಯದಲ್ಲಿ ಪರೀಕ್ಷಾ ಶುಲ್ಕವನ್ನು ನಿಗದಿಪಡಿಸಿದೆ. ಸರ್ಕಾರದ ಆದೇಶದ ಪ್ರಕಾರ ಕೋವಿಡ್ 19 ರ ಒಂದು ಹಂತದ ತನಿಖೆಗೆ ಕೇವಲ 2500 ರೂಪಾಯಿಗಳನ್ನು ವಿಧಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಆದರೆ ಈ ಶುಲ್ಕವನ್ನು ಐಸಿಎಂಆರ್ (ICMR) ನಿಗದಿಪಡಿಸಿಲ್ಲ, ಅದು ಖಾಸಗಿ ಲ್ಯಾಬ್‌ಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಪ್ರಸ್ತುತ ಕರೋನಾ ಪರೀಕ್ಷೆಗಾಗಿ ಒಮ್ಮೆಗೆ  4500 ರೂ. ವಿಧಿಸಲಾಗುತ್ತಿದ್ದು ಅಷ್ಟೊಂದು ಹಣ ಬರಿಸಲು ಶಕ್ತರಾಗದ ಜನರು ಕರೋನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನಗಂಡ ಯೋಗಿ ಸರ್ಕಾರ Covid-19 ಟೆಸ್ಟ್ ಶುಲ್ಕವನ್ನು ನಿಗದಿಪಡಿಸಿದೆ.  


ಉತ್ತರ ಪ್ರದೇಶದ ಸರ್ಕಾರದ ಪ್ರಧಾನ ಕಾರ್ಯದರ್ಶಿ (ವೈದ್ಯಕೀಯ) ಅಮಿತ್ ಮೋಹನ್ ಹೊರಡಿಸಿದ ಆದೇಶದ ಪ್ರಕಾರ ಒಂದು ಬಾರಿಗೆ ಕೋವಿಡ್-19 (Covid-19)  ಪರೀಕ್ಷೆ ನಡೆಸಿದಾಗಲೇ ಸೋಂಕು ಪತ್ತೆ ಹಚ್ಚಬಹುದಾಗಿದೆ. ಒಂದು ಲ್ಯಾಬ್ ಏಕ ಹಂತದ ಪರೀಕ್ಷೆಗೆ 2500 ರೂಪಾಯಿಗಳಿಗಿಂತ ಹೆಚ್ಚಿನ ಶುಲ್ಕ ವಿಧಿಸಿದರೆ ಅಂತಹ ಲ್ಯಾಬ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.


ATMನಿಂದ ಹರಡುತ್ತಿದೆಯಂತೆ ಕರೋನಾವೈರಸ್, ಹಣ ವಿತ್ ಡ್ರಾ ಮಾಡುವ ಮುನ್ನ ಇದನ್ನೊಮ್ಮೆ ಓದಿ


ಐಸಿಎಂಆರ್ ಕೊರೊನಾವೈರಸ್ ಪರೀಕ್ಷೆ ಮಾಡುವ 87 ಲ್ಯಾಬ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಐಸಿಎಂಆರ್ ಪ್ರಕಾರ ಈ ಲ್ಯಾಬ್ ದೇಶದ 15 ರಾಜ್ಯಗಳಲ್ಲಿದೆ. ಅವುಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 20 ಲ್ಯಾಬ್‌ಗಳಿವೆ. ಅದರ ನಂತರ ತೆಲಂಗಾಣದಲ್ಲಿ 12, ದೆಹಲಿಯಲ್ಲಿ 11, ತಮಿಳುನಾಡಿನಲ್ಲಿ 10, ಹರಿಯಾಣದಲ್ಲಿ 7, ಪಶ್ಚಿಮ ಬಂಗಾಳದಲ್ಲಿ 6, ಕರ್ನಾಟಕದಲ್ಲಿ 5, ಗುಜರಾತ್‌ನಲ್ಲಿ 4, ಕೇರಳ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ 2 ಲ್ಯಾಬ್‌ಗಳಿವೆ. ಉತ್ತರಾಖಂಡ ಮತ್ತು ಒಡಿಶಾದಲ್ಲಿ 1-1 ಲ್ಯಾಬ್‌ಗಳಿವೆ.


Coronavirus: ಈ ಬ್ಯಾಂಕಿನಲ್ಲಿ ಸಿಗಲಿಗೆ 5 ವಿಶೇಷ ತುರ್ತು ಸಾಲ


ಕರೋನಾ ವೈರಸ್‌ನಿಂದ ಇದುವರೆಗೆ 718 ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಉತ್ತರಪ್ರದೇಶದಲ್ಲಿ ಈವರೆಗೆ 1510 ಜನರು ಕೊರಾನಾ ವೈರಸ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ, ಈ ಪೈಕಿ 206 ಜನರನ್ನು ಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 24 ಜನರು ಇಲ್ಲಿ ಸಾವನ್ನಪ್ಪಿದ್ದಾರೆ.