ನವದೆಹಲಿ: ದೇಶಾದ್ಯಂತ ತಲ್ಲಣ ಸೃಷ್ಟಿಸಿರುವ ಕರೋನಾವೈರಸ್ ಅಲೆಯು ಹಲವೆಡೆ ಕೊಂಚ ತಗ್ಗಿದಂತೆ ಕಾಣುತ್ತಿದೆ. ಗಮನಾರ್ಹವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಕರೋನಾ ಎರಡನೇ ಅಲೆಯ ಅಬ್ಬರ ಇಳಿಮುಖವಾಗತೊಡಗಿದೆ. ಈ ರಾಜ್ಯಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. 


COMMERCIAL BREAK
SCROLL TO CONTINUE READING

ಈ ಮಧ್ಯೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕರೋನಾ ಎರಡನೇ ಅಲೆ (Corona Second Wave) ಉತ್ತುಂಗಕ್ಕೇರುತ್ತಿದ್ದು ಹೆಚ್ಚು ಜಾಗರೂಕತೆಯಿಂದ ಇರುವ ಅವಶ್ಯಕತೆ ಇದೆ. ಇದಲ್ಲದೆ ಕೇರಳ, ಬಿಹಾರ, ಜಾರ್ಖಂಡ್, ರಾಜಸ್ಥಾನ, ಹರಿಯಾಣ ಮತ್ತು ತೆಲಂಗಾಣಗಳಲ್ಲಿ ಕೂಡ ಕರೋನಾದ ಅತಿದೊಡ್ಡ ಬೆದರಿಕೆಗಳಿವೆ ಎಂಬ ವರದಿಯನ್ನು ಐಐಟಿ ಹಿರಿಯ ವಿಜ್ಞಾನಿ ಪ್ರೊ. ಮಹೇಂದ್ರ ಕುಮಾರ್ ವರ್ಮಾ ಮತ್ತು ಪ್ರೊ. ರಾಜೇಶ್ ರಂಜನ್ ಅವರು ಆರೋಗ್ಯ ಸಚಿವಾಲಯಕ್ಕೂ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ - ಕರೋನಾ ಒಂದು ಪ್ರಾಣಿ.! ಅದಕ್ಕೂ ಜೀವಿಸುವ ಅಧಿಕಾರ ಇದೆ.! ಹೀಗೆಂದ ಮಹಾಶಯ ಯಾರು ಗೊತ್ತಾ..?


ಐಐಟಿಯ ಪ್ರೊ ಮಹೇಂದ್ರ ಕುಮಾರ್ ವರ್ಮಾ ಅವರು ಕರೋನಾ ಸೋಂಕಿನ ಎರಡನೇ ತರಂಗದ ದೈನಂದಿನ ಪ್ರಕರಣಗಳ ಆಧಾರದ ಮೇಲೆ ಎಸ್‌ಎಆರ್ (ದಿ ಸಸ್ಪೆಷಿಯಸ್ ಸೋಂಕಿತ ನಿರೋಧಕ) ಮಾದರಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದರ ಆಧಾರದ ಮೇಲೆ, ಪ್ರಕರಣಗಳ ಹೆಚ್ಚಳ ಮತ್ತು ಇಳಿಕೆಯ ಸಂಖ್ಯೆಯನ್ನು ಅಂದಾಜು ಮಾಡಬಹುದು ಎಂದವರು ತಿಳಿಸಿದ್ದಾರೆ. 


ಪ್ರತಿ ರಾಜ್ಯಕ್ಕೂ ಪ್ರತ್ಯೇಕ ವರದಿಯನ್ನು ಸಿದ್ಧಪಡಿಸಿರುವ ಪ್ರೊ. ವರ್ಮಾ ತನ್ನ ವರದಿಯಲ್ಲಿ ರಾಜ್ಯದ ಪ್ರಕಾರ ಟಿಪಿಆರ್ (100 tests on number of positive cases) ಮತ್ತು ಸಿಎಫ್ಆರ್ (100 cases on The percentage of death) ಅನ್ನು ಸಹ ನಿರ್ಣಯಿಸಿದ್ದಾರೆ. ವರದಿಯ ಪ್ರಕಾರ, ದೆಹಲಿ (Delhi) ಯಲ್ಲಿ ಟಿಪಿಆರ್ ಮತ್ತು ಸಿಎಫ್ಆರ್ ಎರಡೂ ಹೆಚ್ಚು. ಅವರು ಮೇ 8 ರ ಆಧಾರದ ಮೇಲೆ ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಕಳುಹಿಸಿದ್ದಾರೆ.


ಇದನ್ನೂ ಓದಿ- Mask: ಅಮೇರಿಕನ್ನರಿಗೆ ಬಿಗ್ ರಿಲೀಫ್, Corona vaccine ಪಡೆದವರು ಈ ನಿಯಮ ಪಾಲಿಸುವ ಅಗತ್ಯವಿಲ್ಲ


ಈ ರಾಜ್ಯಗಳಲ್ಲಿ ಕರೋನಾ ಏರಿಳಿತ:
ಪ್ರದೇಶ ಟಿಪಿಆರ್ ಸಿಎಫ್ಆರ್
ಕೇರಳ 27 0.14
ಜಾರ್ಖಂಡ್ 11 2.22
ಬಿಹಾರ 14 0.49
ರಾಜಸ್ಥಾನ 20 0.91
ಹರಿಯಾಣ 28 1.17
ತೆಲಂಗಾಣ 0.80

 


ಮುಂದಿನ ದಿನಗಳಲ್ಲಿ ಕರೋನಾ ಉತ್ತುಂಗಕ್ಕೇರಲಿರುವ ರಾಜ್ಯಗಳು:
ಪ್ರದೇಶ ಟಿಪಿಆರ್ ಸಿಎಫ್ಆರ್
ಕರ್ನಾಟಕ 31 0.82
ಆಂಧ್ರಪ್ರದೇಶ 19 0.38
ತಮಿಳುನಾಡು 16 0.76

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.