Coronavirus: ಮೊಮ್ಮಗನಿಗೆ ಕರೋನಾ ತಗುಲದಿರಲಿ ಎಂದು ಆತ್ಮಹತ್ಯೆಗೆ ಶರಣಾದ ಅಜ್ಜ-ಅಜ್ಜಿ
ಈ ಹಿರಿಯ ದಂಪತಿಗಳಿಗೆ ಏಪ್ರಿಲ್ 29 ರಂದು ಸೋಂಕು ದೃಢಪಟ್ಟಿತ್ತು ಮತ್ತು ಅಂದಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ಚಂದ್ ಶರ್ಮಾ ಹೇಳಿದ್ದಾರೆ.
ಕೋಟಾ: ಇಡೀ ವಿಶ್ವವನ್ನೇ ಆತಂಕದಲ್ಲಿ ಮುಳುಗಿಸಿರುವ ಕರೋನಾವೈರಸ್ ಮಹಾಮಾರಿಗೆ ಹೆದರಿ ವೃದ್ಧ ದಂಪತಿಗಳು ಚಲಿಸುವ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ವಾಸ್ತವವಾಗಿ ಇತ್ತೀಚೆಗಷ್ಟೇ ಕರೋನಾ ಸೋಂಕಿಗೆ (Coronavirus) ಒಳಗಾಗಿದ್ದ ಈ ವೃದ್ಧ ದಂಪತಿ ತಮ್ಮಿಂದ ತಮ್ಮ ಸೊಸೆ ಮತ್ತು ಮೊಮ್ಮಗನಿಗೆ ಕರೋನಾ ಸೋಂಕು ಹರಡಬಹುದು ಎಂಬ ಭಯದಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ - Lockdown In India: ಕರೋನಾ ಸೋಂಕಿನ ಸರಪಳಿ ಮುರಿಯಲು ಕಟ್ಟುನಿಟ್ಟಾದ ಲಾಕ್‌ಡೌನ್ ಅಗತ್ಯ- ಕೇಂದ್ರಕ್ಕೆ ಕೋವಿಡ್ ಟಾಸ್ಕ್ ಫೋರ್ಸ್ ಪತ್ರ
75 ವರ್ಷದ ಹಿರಾಲಾಲ್ ಬೈರ್ವಾ ಮತ್ತು ಅವರ 70 ವರ್ಷದ ಪತ್ನಿ ಶಾಂತಿಬಾಯಿ ಅವರ ಅವರ ಮಗ ಎಂಟು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಸದ್ಯ ಅವರು ತಮ್ಮ 18 ವರ್ಷದ ಮೊಮ್ಮಗ ಮತ್ತು ಸೊಸೆ ಜೊತೆಗೆ ನಗರದ ಪುರೋಹಿತ್ ಜಿ ಅವರ ತಪ್ರಿ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕರೋನಾ ಪಾಸಿಟಿವ್ ಆದ ಬಳಿಕ ಪ್ರತ್ಯೇಕವಾಗಿದ್ದ ವೃದ್ಧ ದಂಪತಿಗಳು :-
ಈ ಹಿರಿಯ ದಂಪತಿಗಳಿಗೆ ಏಪ್ರಿಲ್ 29 ರಂದು ಸೋಂಕು (Covid Positive) ದೃಢಪಟ್ಟಿತ್ತು ಮತ್ತು ಅಂದಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ ಎಂದು ರೈಲ್ವೆ ಕಾಲೋನಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಮೇಶ್ ಚಂದ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ - Coronavirusಗೆ ಅಂತ್ಯ ಹಾಡಲು Molecule ಅನ್ವೇಷಿಸಿದ Tech Mahindra, ಪೇಟೆಂಟ್ ಗೆ ಅರ್ಜಿ
ಪೊಲೀಸ್ ತನಿಖೆ ಮುಂದುವರೆದಿದೆ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಕೆ ಮುಂದುವರೆಸಿದ್ದು ಸ್ಥಳದಲ್ಲೇ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಇದರ ಹೊರತಾಗಿಯೂ ನಮ್ಮ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.