Coronavirusಗೆ ಅಂತ್ಯ ಹಾಡಲು Molecule ಅನ್ವೇಷಿಸಿದ Tech Mahindra, ಪೇಟೆಂಟ್ ಗೆ ಅರ್ಜಿ

Molecule That Fights Against Coronavirus - ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಯಾಗಿರುವ Tech Mahindra ಹಾಗೂ Reagene Biosciences ಜಂಟಿಯಾಗಿ ಕೊರೊನಾ ವೈರಸ್ ಗೆ ಅಂತ್ಯ ಹಾಡುವ ಸಾಮರ್ಥ್ಯ ಹೊಂದಿರುವ ಔಷಧಿಯನ್ನು ತಯಾರಿಸುತ್ತಿವೆ. 

Written by - Nitin Tabib | Last Updated : May 2, 2021, 10:18 PM IST
  • ಕೊರೊನಾ ವಿರುದ್ಧ ಹೋರಾಡುವ ಮಾಲೀಕ್ಯೂಲ್ ಅನ್ವೇಷಿಸಿದ ಟೆಕ್ ಮಹಿಂದ್ರಾ
  • Reagene Biosciences ಜೊತೆ ಸೇರಿ ಪೇಟೆಂಟ್ ಅರ್ಜಿ ಸಲ್ಲಿಸಲು ಸಿದ್ಧತೆ.
  • ಪೇಟೆಂಟ್ ಪ್ರಕ್ರಿಯೆಯ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ ಟೆಕ್ ಮಹಿಂದ್ರಾ.
Coronavirusಗೆ ಅಂತ್ಯ ಹಾಡಲು Molecule ಅನ್ವೇಷಿಸಿದ Tech Mahindra, ಪೇಟೆಂಟ್ ಗೆ ಅರ್ಜಿ title=
Molecule That Fights Against Coronavirus (File Photo)

ನವದೆಹಲಿ:  Molecule That Fights Against Coronavirus - ಮಾಹಿತಿ ತಂತ್ರಜ್ಞಾನದ ದಿಗ್ಗಜ ಕಂಪನಿಯಾಗಿರುವ Tech Mahindra ಹಾಗೂ Reagene Biosciences ಜಂಟಿಯಾಗಿ ಕೊರೊನಾ ವೈರಸ್ ಗೆ (Coronavirus) ಅಂತ್ಯ ಹಾಡುವ ಸಾಮರ್ಥ್ಯ ಹೊಂದಿರುವ ಔಷಧಿಯನ್ನು ತಯಾರಿಸುತ್ತಿವೆ. ಈ ಎರಡು ಕಂಪನಿಗಳು ಔಷಧಿಯ ಮಾಲೀಕ್ಯೂಲ್ ನ ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿವೆ. ಈ ಕುರಿತು ಮಾಹಿತಿ ನೀಡಿರುವ ಟೆಕ್ ಮಹಿಂದ್ರಾ ಗ್ಲೋಬಲ್ ಮುಖ್ಯಸ್ಥ ನಿಖಿಲ್ ಮಲ್ಹೊತ್ರಾ, ಟೆಕ್ ಮಹಿಂದ್ರಾ ತನ್ನ ಅಂಗ ಸಂಸ್ಥೆ ಜೊತೆಗೆ ಸೇರಿ ಈ ಮಾಲಿಕ್ಯೂಲ್ ನ ಪೇಮೆಂಟ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದು, ಇದನ್ನು ಬಳಿಕ ಟೆಸ್ಟಿಂಗ್ ನಡೆಸಲಾಗುವುದು ಎಂದಿದ್ದಾರೆ. ಇದೇ ವೇಳೆ ಮಾಲಿಕ್ಯೂಲ್ ನ ಹೆಸರು ಬಹಿರಂಗಗೊಳಿಸಲು ಮಲ್ಹೊತ್ರಾ ನಿರಾಕರಿಸಿದ್ದಾರೆ ಹಾಗೂ ಪೇಟೆಂಟ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇದನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದಿದ್ದಾರೆ. ಮಾರ್ಕರ್ಸ್ ಲ್ಯಾಬ್ ಟೆಕ್ ಮಹಿಂದ್ರಾ ಕಂಪನಿಯ ರಿಶರ್ಚ್ ಅಂಡ್ ಡೆವಲಪ್ಮೆಂಟ್ ವೀಂಗ್ ಆಗಿದೆ.

ಇದನ್ನೂ ಓದಿ- Google Pay NFC Service: ಶೀಘ್ರದಲ್ಲಿಯೇ ಭಾರತದಲ್ಲಿ Google Pay ಬಳಕೆದಾರರು NFC ಬಳಸಿ ಸಂಪರ್ಕರಹಿತ UPI ಪೇಮೆಂಟ್ ಮಾಡಬಹುದು

ಈ ರೀತಿ ಮಾಲಿಕ್ಯೂಲ್ ಅನ್ನು ಕಂಡು ಹಿಡಿಯಲಾಗಿದೆ 
ಟೆಕ್ ಮಹಿಂದ್ರಾ ಹಾಗೂ ರಿಜಿನ್ ಬಯೋಸೈನ್ಸಸ್ ಸಂಶೋಧನೆಯಲ್ಲಿ ತೊಡಗಿವೆ. ಮಾರ್ಕರ್ಸ್ ಲ್ಯಾಬ್ ಕೊರೊನಾ ವೈರಸ್ ನ ಕಂಪ್ಯೂಟೆಶನಲ್ ಮಾಡಲಿಂಗ್ ಅನಲಿಸಿಸ್ ಅನ್ನು ಆರಂಭಿಸಿದೆ. ಇದರ ಆಧಾರದ ಮೇಲೆ ಟೆಕ್ ಮಹಿಂದ್ರಾ ಹಾಗೂ ಅದರ ಸಹಯೋಗಿ ಸಂಸ್ಥೆ FDA ನಿಂದ ಮಾನ್ಯತೆ ಪಡೆದ 8 ಸಾವಿರ ಔಷಧಿಗಳಲ್ಲಿ 10 ಡ್ರಗ್ ಮಾಲಿಕ್ಯೂಲ್ ಅನ್ನು ಶಾರ್ಟ್ ಲಿಸ್ಟ್ ಮಾಡಿವೆ.  ತಂತ್ರಜಾನದ ಸಹಾಯಕ್ದಿಂದ ಈ 10 ಔಷದಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಮತ್ತೆ ಮೂರು ಔಷಧಿಗಳ ಆಯ್ಕೆ ಮಾಡಲಾಗಿದೆ. ಇದರ ನಂತರ ಮೂರು ಆಯಾಮದ ಶ್ವಾಸಕೋಶವನ್ನು ರಚಿಸಿ ಅವುಗಳ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅನುವು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿರುವುದು ಕಂಡುಬಂದಿದೆ ಎಂದು ಮಲ್ಹೊತ್ರಾ ಹೇಳಿದ್ದಾರೆ.ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಟೆಕ್ ಮಹಿಂದ್ರಾ ಕಂಪ್ಯೂಟೆಶನಲ್ ಅನಾಲಿಸಿಸ್ ನಡೆಸಿದೆ. ಕೃತಕ ಬುದ್ಧಿಮತ್ತೆ ಹಾಗೂ ಇತರೆ ಕಂಪ್ಯೂಟೆಶನಲ್ ತಂತ್ರಜ್ಞಾನಗಳನ್ನು ಬಳಸಿ ಔಷಧಿಗಳ ಶೋಧದಲ್ಲಿ ತಗಲುವ ಸಮಯವನ್ನು ಕಡಿಮೆ ಮಾಡಬಹುದು ಎಂದು ಮಲ್ಹೊತ್ರಾ ಹೇಳಿದ್ದಾರೆ.

ಇದನ್ನೂ ಓದಿ- WhatsApp New Feature:ಶೀಘ್ರದಲ್ಲಿಯೇ WhatsApp ಪರಿಚಯಿಸುತ್ತಿದೆ ಈ ಹೊಸ ವೈಶಿಷ್ಟ್ಯ, ಬಳಕೆದಾರರಿಗೇನು ಲಾಭ?

ಭಾರತದಲ್ಲಿ Remdesivir ಹಾಗೂ Tocilizumab ಗೆ ಅನುಮತಿ
ವಿಶ್ವಾದ್ಯಂತ ಹಲವು ಔಷಧಿಗಳ ಮೇಲೆ ಪರೀಕ್ಷೆ ನಡೆಯುತ್ತಿದೆ. ಆದರೆ, ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನರು ಕೇವಲ ವ್ಯಾಕ್ಸಿನ್ ಭರವಸೆಯ ಮೇಲಿದ್ದಾರೆ. ಭಾರತ ಸರ್ಕಾರ ಕೊರೊನಾ ಸೋಂಕಿನ ಚಿಕಿತ್ಸೆಯಲ್ಲಿ ರೋಗಿಗಳ ಸ್ಥಿತಿಗೆ ಅನುಗುಣವಾಗಿ Remdesivir ಹಾಗೂ Tocilizumab ಔಷಧಿಗಳ ಪ್ರಯೋಗಕ್ಕೆ ಅನುಮತಿ ನೀಡಿದೆ. ಆದರೆ ಇದೀಗ ಈ ಔಷಧಿಗಳ ಕೊರತೆ ಕೂಡ ಎದುರಾಗುತ್ತಿದೆ.  Tocilizumab ಔಷಧಿಯ ಕೊರತೆ ಯಾವ ಮಟ್ಟಕ್ಕೆ ಎದುರಾಗಿದೆ ಎಂದರೆ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಕೇವಲ 150 ಪ್ರಮಾಣಗಳು ಮಾತ್ರ ಲಭ್ಯವಾಗಿವೆ.

ಇದನ್ನೂ ಓದಿ- WhatsAppನಿಂದ ಹೊಸ ವೈಶಿಷ್ಟ್ಯ ಪರಿಚಯ, ಬಳಕೆದಾರರಿಗೇನು ಲಾಭ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News