ನವದೆಹಲಿ: ಹೆಚ್ಚುತ್ತಿರುವ ಕೊರೊನಾ ರೋಗಿಗಳ ಗ್ರಾಫ್ ಮತ್ತೊಮ್ಮೆ ಆರೋಗ್ಯ ಇಲಾಖೆಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಅನೇಕ ದೇಶಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಅದೃಷ್ಟವಶಾತ್ ಭಾರತದಲ್ಲಿ ಕೊರೊನಾ ಹರಡುವಿಕೆ ನಿಧಾನವಾಗಿದೆ. ಆದರೆ ಅಪಾಯವನ್ನು ಮನಗಂಡಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ಕೊರೊನಾ ವೈರಸ್ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ವಿದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕುರಿತು ಕೇಂದ್ರ ಆರೋಗ್ಯ ಸಚಿವರು ಬುಧವಾರ(ಡಿ.21)  ಬೆಳಗ್ಗೆ 11 ಗಂಟೆಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿ ಗೂಗಲ್ ಸಿಇಓ ಸುಂದರ್ ಪಿಚ್ಚೈ ಹೇಳಿದ್ದೇನು ಗೊತ್ತಾ?


ಆರೋಗ್ಯ ಸಚಿವಾಲಯದಿಂದ ರಾಜ್ಯಗಳಿಗೆ ಪತ್ರ


ಜಪಾನ್, ಅಮೆರಿಕ ಮತ್ತು ಚೀನಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೇಂದ್ರ ಆರೋಗ್ಯ ಸಚಿವಾಲಯವು ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಜೀನೋಮ್ ಅನುಕ್ರಮವನ್ನು ಹೆಚ್ಚಿಸುವುದರ ಹಿಂದಿನ ದೊಡ್ಡ ಕಾರಣವೆಂದರೆ ಹೊಸ ರೂಪಾಂತರಗಳು ಮತ್ತು ಅವುಗಳ ಹರಡುವಿಕೆಯನ್ನು ಸಮಯಕ್ಕೆ ಕಂಡುಹಿಡಿಯಬಹುದಾಗಿದೆ.


ವೈರಸ್ ಹಿನ್ನೆಲೆ ಹೈ ಅಲರ್ಟ್  


ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೊರನಾ ವೈರಸ್‍ನ ಜೀನೋಮ್ (Indian SARS-CoV-2 Genomics Consortium) ಅನುಕ್ರಮದ ಬಗ್ಗೆ ಗಮನ ಹರಿಸುವಂತೆ ಕೇಳಿದ್ದಾರೆ. ಅಮೆರಿಕ, ಬ್ರೆಜಿಲ್, ಚೀನಾ, ಜಪಾನ್ ಮತ್ತು ಕೊರಿಯಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ನಂತರ ಹೆಚ್ಚಿನ ನಿಗಾ ವಹಿಸಲಾಗಿದೆ.


ಇದನ್ನೂ ಓದಿ: "ಅವರ ಮನೆಯಲ್ಲಿ ದೇಶಕ್ಕಾಗಿ ನಾಯಿಯಾದರೂ ಸತ್ತಿದೆಯೇ?" : ಬಿಜೆಪಿ ವಿರುದ್ಧ ಖರ್ಗೆ ಕಿಡಿ


ಜೀನೋಮ್ ಅನುಕ್ರಮದ ಮೇಲೆ ಒತ್ತು


ಕೊರೊನಾ ವೈರಸ್‍ನ ಹೊಸ ರೂಪಾಂತರಗಳನ್ನು ಗುರುತಿಸಲು ಎಲ್ಲಾ ಸಕಾರಾತ್ಮಕ ಪ್ರಕರಣಗಳ ಜೀನೋಮ್ ಅನುಕ್ರಮವನ್ನು ಮಾಡಲು ರಾಜ್ಯಗಳನ್ನು ಕೇಳಲಾಗಿದೆ. ಜೀನೋಮ್ ಅನುಕ್ರಮದ ಎಲ್ಲಾ ಪ್ರಕರಣಗಳನ್ನು INSACOG (ಇಂಡಿಯನ್ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ಮೂಲಕ ವರದಿ ಮಾಡಬೇಕು. ಜೀನೋಮ್ ಅನುಕ್ರಮದ ಮೂಲಕ ವೈರಸ್‌ನ ಯಾವ ರೂಪಾಂತರವು ಹೆಚ್ಚು ಹರಡುತ್ತಿದೆ ಮತ್ತು ಯಾವ ಭಾಗದಲ್ಲಿ ಯಾವ ರೂಪಾಂತರವು ಹರಡುತ್ತಿದೆ ಎಂಬುದನ್ನು ಕಂಡುಹಿಡಿಯಬಹುದು. ವೈರಸ್ ರೂಪಾಂತರಗೊಂಡರೆ ಮತ್ತು ಹೊಸ ರೂಪಾಂತರವು ಪರಿಸರಕ್ಕೆ ಪ್ರವೇಶಿಸಿದರೆ ಅದನ್ನು ಸಹ ಕಂಡುಹಿಡಿಯಬಹುದು.


ಒಟ್ಟು 3490 ಸಕ್ರಿಯ ಕೊರೊನಾ ಪ್ರಕರಣಗಳು


ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುವ ಮೊದಲು ಜೀನೋಮ್ ಅನುಕ್ರಮವನ್ನು ಹೆಚ್ಚಿಸಲು ಮತ್ತು ಅದರ ವರದಿಯನ್ನು ಕೇಂದ್ರ ಮಟ್ಟದಲ್ಲಿ ಮತ್ತೆ ವೇಗಗೊಳಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಒಟ್ಟು 3490 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಈ ವಾರ ಭಾರತದಲ್ಲಿ ಇದುವರೆಗೆ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.