ಆಗ್ರಾ: ಕರೋನವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ (Lockdown) ಮಾಡಲಾಗಿದೆ. ಈ  ವೇಳೆ ಯಾರೂ ಸಹ ಮನೆಯಿಂದ ಹೊರಬರುವಂತಿಲ್ಲ ಎಂದು ಸರ್ಕಾರ ಸ್ಪಷ್ಟ ಸೂಚನೆಗಳನ್ನು ನೀಡಿದೆ. ರೈಲು, ಬಸ್ ಇತ್ಯಾದಿಗಳ ಸಂಚಾರ ಸೌಲಭ್ಯಗಳನ್ನು ಸಹ ರದ್ದುಪಡಿಸಲಾಗಿದೆ, ಆದರೆ ಇನ್ನೂ ಕೆಲವರು ರಸ್ತೆಯಲ್ಲಿ ಅಡ್ಡಾಡುವುದನ್ನು ಬಿಟ್ಟಿಲ್ಲ. ಇಂತಹ ಬೇಜವಾಬ್ದಾರಿಯುತ ವ್ಯಕ್ತಿಗಳ ಫೋಟೋವನ್ನು ಯುಪಿ ಪೊಲೀಸರು ಪೋಸ್ಟರ್‌ನೊಂದಿಗೆ ತೆಗೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ವಿಶೇಷವೆಂದರೆ, ಉತ್ತರ ಪ್ರದೇಶದ ಆಗ್ರಾದಲ್ಲಿ ವ್ಯಕ್ತಿಯೊಬ್ಬರು ಲಾಕ್ ಡೌನ್ ಹೊರತಾಗಿಯೂ ಬೈಕ್‌ನಲ್ಲಿ ಹೊರ ಹೋಗುತ್ತಿದ್ದರು, ಇದನ್ನು ಉತ್ತರಪ್ರದೇಶ (UP) ಪೊಲೀಸರು ಕಟ್ಟುನಿಟ್ಟಾಗಿ ನಿರ್ವಹಿಸಿದ್ದಾರೆ. ಪೊಲೀಸರು ಪೋಸ್ಟರ್ ಹಿಡಿದು ಈ ವ್ಯಕ್ತಿಯ ಫೋಟೋ ತೆಗೆದಿದ್ದಾರೆ. ಈ ಪೋಸ್ಟರ್‌ನಲ್ಲಿ 'ನಾನು ಸಮಾಜದ ಶತ್ರು, ಯಾವುದೇ ಕೆಲಸವಿಲ್ಲದೆ ಹೊರಗೆ ಸಂಚರಿಸುತ್ತೇನೆ' ಎಂದು ಬರೆಯಲಾಗಿದೆ.


ಆಗ್ರಾದ ಜಗದೀಶ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಶರ್ಮಾ ಅಂತಹ ಪ್ರಯತ್ನ ಕೈಗೊಂಡಿದ್ದಾರೆ. ವಾಸ್ತವವಾಗಿ, ಹೀಗೆ ಮಾಡುವ ಮೂಲಕ, ಕರೋನಾ ವೈರಸ್‌ನಿಂದಾಗಿ ಕೆಲಸವಿಲ್ಲದೆ ಮನೆಯಿಂದ ಹೊರಹೋಗದಂತೆ ಪೊಲೀಸರು ಜನರಿಗೆ ಮನವಿ ಮಾಡುತ್ತಿದ್ದಾರೆ.


ಇಲ್ಲಿಯವರೆಗೆ ದೇಶದಲ್ಲಿ ಕರೋನವೈರಸ್ (Coronavirus)  ರೋಗಿಗಳ ಸಂಖ್ಯೆ 471 ಕ್ಕೆ ಏರಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಈ ರೋಗಿಗಳಲ್ಲಿ 34 ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರೆ, 9 ಜನರು ಸಾವನ್ನಪ್ಪಿದ್ದಾರೆ.


ಭಾರತದಲ್ಲಿ ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು, ದೇಶದ 30 ರಾಜ್ಯಗಳ / ಕೇಂದ್ರಾಡಳಿತ ಪ್ರದೇಶಗಳ 548 ಜಿಲ್ಲೆಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. ಪಂಜಾಬ್ ನಂತರ ಮಹಾರಾಷ್ಟ್ರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ತಡರಾತ್ರಿ, ನಂತರ ಚಂಡೀಗಢ, ದೆಹಲಿಯಲ್ಲಿ ಕರ್ಫ್ಯೂ ಘೋಷಿಸಲಾಯಿತು. ಇದಲ್ಲದೆ ಪುದುಚೇರಿಯಲ್ಲಿಯೂ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾರ್ಚ್ 31 ರವರೆಗೆ ಕರ್ಫ್ಯೂ ವಿಧಿಸಲಾಗಿದೆ.