ನವದೆಹಲಿ: ಆಕ್ಸ್ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಗೊಳಿಸಿರುವ ಹಾಗೂ ಭಾರತೀಯ ಸಿರಮ್ ಇನ್ಸ್ಟಿಟ್ಯೂಟ್ ಮೂಲಕ ತಯಾರಿಸಲಾಗುತ್ತಿರುವ ಕೊವಿಡ್ 19 ಲಸಿಕೆ (Covid Vaccine)ಯ ಮಾನವ ಶರೀರದ ಮೇಲೆ ಮೂರನೇ ಹಂತದ ಪರೀಕ್ಷೆ ಮುಂದಿನ ವಾರ ಪುಣೆಯ ಸಸೂನ್ ಆಸ್ಪತ್ರೆಯಲ್ಲಿ ಆರಂಭಗೊಳ್ಳಲಿದೆ. ಸರ್ಕಾರದ ವತಿಯಿಂದ ನಡೆಸಲಾಗುತ್ತಿರುವ ಸಸೂನ್ ಆಸ್ಪತ್ರೆಯ ಡೀನ್ ಹಾಗೂ ವೈದ್ಯ ಮುರಳಿಧರ್ ತಾಂಬೆ ಶನಿವಾರ ಸುದ್ದಿ ಸಂಸ್ಥೆ ಪಿಟಿಐಗೆ ಈ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

Also Read- Good News: ನವೆಂಬರ್ ನಲ್ಲಿ ಭಾರತಕ್ಕೆ ಬರಲಿದೆ Corona Vaccine! ರಷ್ಯಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ Dr.Reddy's Lab


'ಸಸೂನ್ ಆಸ್ಪತ್ರೆಯಲ್ಲಿ ಮುಂದಿನ ವಾರ 'ಕೊವಿಶಿಲ್ದ್' ಲಸಿಕೆಯ ಮೂರನೇ ಹಂತದ ಪರೀಕ್ಷೆ ಆರಂಭವಾಗಲಿದೆ. ಸಂಭವತಃ ಸೋಮವಾರದಿಂದ ಈ ಪರೀಕ್ಷೆ ಆರಂಭವಾಗುವ ಸಾಧ್ಯತೆ ಇದೆ. ಈ ಪರೀಕ್ಷೆಗಾಗಿ ಈ ಮೊದಲೇ ಕೆಲ ಸ್ವಯಂಸೇವಕರು ಮುಂದೆ ಬಂದಿದ್ದು, ಸುಮಾರು 150 ರಿಂದ 200 ಜನರಿಗೆ ಈ ಲಸಿಕೆ ನೀಡಲಾಗುವುದು' ಎಂದು ಅವರು ಹೇಳಿದ್ದಾರೆ.


Also Read- Coronavirus: ದೇಶದ ಮೊಟ್ಟಮೊದಲ Corona Vaccine Covaxineನ ಮೊಟ್ಟಮೊದಲ ಪ್ರಯೋಗ ಯಾರ ಮೇಲೆ ಗೊತ್ತಾ?


ಈ ಹಿಂದೆ, ಕೋವಿಡ್ -19 ಲಸಿಕೆ ಅಭಿವೃದ್ಧಿಗೆ ಸಹಕಾರದ ಸಾಧ್ಯತೆಯನ್ನು ಅನ್ವೇಷಿಸಲು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಶುಕ್ರವಾರ ಹೇಳಿದ್ದಾರೆ. ಲೋಕಸಭೆಯಲ್ಲಿನ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.


Also Read- Corona Vaccine ಹೆಸರಿನಲ್ಲಿ ರಾಷ್ಟ್ರೀಯತೆಯ ಡೋಲು ಬಾರುಸುವುದು ಸರಿಯಲ್ಲ: WHO


ಕರೋನಾ ವೈರಸ್‌ನ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ರಷ್ಯಾದಲ್ಲಿ ಅನುಮೋದಿಸಲಾಗಿದೆ ಎಂದು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ತಿಳಿಸಿದೆ ಎಂದು ಚೌಬೆ ಹೇಳಿದ್ದಾರೆ. ವಿಶ್ವಾದ್ಯಂತ 36 ಲಸಿಕೆಗಳ ಕೆಲಸ ನಡೆಯುತ್ತಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.


Also Read- 2020 ರ ಅಂತ್ಯದ ವೇಳೆಗೆ ಭಾರತಕ್ಕೆ ಮೊದಲ COVID-19 ಲಸಿಕೆ ಸಿಗಲಿದೆ-ಡಾ.ಹರ್ಷ್ ವರ್ಧನ್