Coronavirus: ದೇಶದ ಮೊಟ್ಟಮೊದಲ Corona Vaccine Covaxineನ ಮೊಟ್ಟಮೊದಲ ಪ್ರಯೋಗ ಯಾರ ಮೇಲೆ ಗೊತ್ತಾ?

ಭಾನುವಾರ ICMR ಪಟ್ನಾ ಕೇಂದ್ರದಿಂದ ಯುವಕನಿಗೆ ದೂರವಾಣಿ ಕರೆಬಂದಿದ್ದು, ಕೊವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಗಾಗಿ ಅವರನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಪ್ರೋಸೆಸ್ ಗಾಗಿ ಭುವನೇಶ್ವರ್ ಗೆ ಬರಲು ಹೇಳಲಾಗಿದೆ.

Last Updated : Jul 8, 2020, 02:24 PM IST
Coronavirus: ದೇಶದ ಮೊಟ್ಟಮೊದಲ Corona Vaccine Covaxineನ ಮೊಟ್ಟಮೊದಲ ಪ್ರಯೋಗ ಯಾರ ಮೇಲೆ ಗೊತ್ತಾ? title=

ನವದೆಹಲಿ: ಕರೋನವೈರಸ್ ವಿರುದ್ಧ ಹೋರಾಡಲು ದೇಶದಲ್ಲಿ ಲಸಿಕೆ ಸಿದ್ಧಗೊಂಡಿದೆ. ಮುಂದಿನ ವಾರ ಈ ನೂತನ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯಲಿದೆ. ಆದರೆ, ಇದರಲ್ಲಿ ಕುತೂಹಲಕಾರಿ ಸಂಗತಿ ಎಂದರೆ, ದೇಶದಲ್ಲಿ ಮೊಟ್ಟಮೊದಲು ಈ ಲಸಿಕೆಯನ್ನು ಯಾರ ಮೇಲೆ ಪ್ರಯೋಗಿಸಬೇಕು ಎಂಬ ವ್ಯಕ್ತಿಯನ್ನು ಕೂಡ ಆಯ್ಕೆ ಮಾಡಲಾಗಿದೆ.  ಆ ವ್ಯಕ್ತಿಯ ಹೆಸರು ಚಿರಂಜೀತ್ ಧೀಬರ್. ವೃತ್ತಿಯಲ್ಲಿ ಟೀಚರ್ ಆಗಿರುವ ಚಿರಂಜೀತ್ ಅವರ ಮೇಲೆ ಮುಂದಿನ ವಾರ ಕ್ಲಿನಿಕಲ್ ಟ್ರಯಲ್ ಆರಂಭಗೊಳ್ಳಲಿದೆ. ಇದರ ತರಬೇತಿಗಾಗಿ ಅವರು ಭುವನೇಶ್ವರ್ ನಲ್ಲಿರುವ ICMR ಕೇಂದ್ರಕ್ಕೆ ಭೇಟಿ ನೀಡಬೇಕಾಗಲಿದೆ.

ಭುವನೇಶ್ವರ್ ನಲ್ಲಿ ನಡೆಯಲಿದೆ ಟ್ರಯಲ್
ಈ ಸುದ್ದಿಯ ಕುರಿತು ತನ್ನ ಫೇಸ್ ಬುಕ್ ಪುಟದಲ್ಲಿ ಅಧಿಕೃತ ಮಾಹಿತಿ ನೀಡಿ ಬರೆದುಕೊಂಡಿರುವ ಚಿರಂಜೀತ್ ಧೀಬರ್, ಸಂಘದಿಂದ ಪ್ರೇರಣೆ ಪಡೆದು ನಾನು ನನ್ನ ಶರೀರವನ್ನು ಕೊರೊನಾ ವೈರಸ್ ನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಾಗಿ ದೇಶಕ್ಕಾಗಿ ದಾನ ಮಾಡಿದ್ದೇನೆ ಎಂದಿದ್ದಾರೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕಳೆದ ಏಪ್ರಿಲ್ ನಲ್ಲಿಯೇ ಚಿರಂಜೀತ್, ಕೊರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಗಾಗಿ ತಮ್ಮ ಶರೀರ ನೀಡುವ ಕುರಿತು ಅರ್ಜಿ ಸಲ್ಲಿಸಿದ್ದರು. ಭಾನುವಾರ ICMR ನ ಪಟ್ನಾ ಕೇಂದ್ರ ಅವರಿಗೆ ದೂರವಾಣಿ ಕರೆ ಮಾಡುವ ಮೂಲಕ, ಕ್ಲಿನಿಕಲ್ ಟ್ರಯಲ್ ಗಾಗಿ ಅವರ ಆಯ್ಕೆಯನ್ನು ಖಚಿತಪಡಿಸಿದೆ. ಅಷ್ಟೇ ಅಲ್ಲ ಮುಂದಿನ ಪ್ರೋಸೆಸ್ ಗಾಗಿ ಅವರನ್ನು ಭುವನೇಶ್ವರ್ ಗೆ ಬರಲು ಸೂಚಿಸಿದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ ಚಿರಂಜೀತ್
ಈ ವಿಷಯದ ಮಾಹಿತಿ ಹೊಂದಿದವರು ನೀಡಿರುವ ಮಾಹಿತಿ ಪ್ರಕಾರ ಚಿರಂಜೀತ್ ಧೀಬರ್ ವೆಸ್ಟ್ ಬೆಂಗಾಲ್ ನ ದುರ್ಗಾಪುರ್ ನಲ್ಲಿರುವ ಶಾಲೆಯೊಂದರಲ್ಲಿ ಅಧ್ಯಾಪಕರಾಗಿದ್ದಾರೆ. ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಘಟನೆಯಾಗಿರುವ ಅಖಿಲ್ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಪ್ರಾಧಮಿಕ ಒಕ್ಕೂಟದ ರಾಜ್ಯಮಟ್ಟದ ಸಮಿತಿಯ ಸದ್ಯಸ್ಯರೂ ಕೂಡ ಆಗಿದ್ದಾರೆ.

ಸಂಪೂರ್ಣ ಸ್ವದೇಶಿ ಕಂಪನಿಯಾಗಿರುವ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್, ICMR ಜೊತೆ ಸೇರಿ ಜಂಟಿಯಾಗಿ ಕೊವ್ಯಾಕ್ಸಿನ್ ಹೆಸರಿನ ಕೋರೋನಾ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 15 ಕ್ಕೆ ಈ ಲಸಿಕೆ ದೇಶಾದ್ಯಂತ ಬಿಡುಗಡೆ ಮಾಡಲು ಸರ್ಕಾರ ನಿರ್ಣಯ ಕೈಗೊಂಡಿದೆ.

Trending News