ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ನ (Coronavirus in India) ಆಕ್ರಂದನ ಮುಂದುವರೆದಿದೆ ಮತ್ತು ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದ್ದಂತೆ, ಸಾವಿನ ಸಂಖ್ಯೆಯೂ ಸ್ಥಿರವಾಗಿ ಹೆಚ್ಚುತ್ತಿದೆ. ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ, ಕೋವಿಡ್ -19 ರ ಎಲ್ಲಾ ದಾಖಲೆಗಳು ಮುರಿದು ಬಿದ್ದವು. ವರ್ಲ್ಡ್ ಮೀಟರ್ ಪ್ರಕಾರ, ಭಾನುವಾರ ರಾತ್ರಿ 12 ಗಂಟೆಯವರೆಗೆ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 2.75 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದಕ್ಕೂ ಮುನ್ನ ಭಾನುವಾರ (ಏಪ್ರಿಲ್ 18) ದೇಶಾದ್ಯಂತ 2.61 ಲಕ್ಷ ಹೊಸ ಕರೋನಾವೈರಸ್ ಪ್ರಕರಣಗಳು ವರದಿಯಾಗಿವೆ.


COMMERCIAL BREAK
SCROLL TO CONTINUE READING

24 ಗಂಟೆಗಳಲ್ಲಿ 2,75,306 ಜನರು ಸೋಂಕಿಗೆ ಒಳಗಾಗಿದ್ದಾರೆ:
ವರ್ಲ್ಡ್ ಮೀಟರ್ ಪ್ರಕಾರ, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2 ಲಕ್ಷ 75 ಸಾವಿರ 306 ಜನರು ಕರೋನವೈರಸ್ (Coronavirus) ಸೋಂಕಿಗೆ ಒಳಗಾಗಿದ್ದರೆ, ಈ ಸಮಯದಲ್ಲಿ 1625 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 1 ಕೋಟಿ 50 ಲಕ್ಷ 57 ಸಾವಿರ 767 ಕ್ಕೆ ಏರಿದೆ ಮತ್ತು 1.75 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ - Oxygen Express: Corona ರೋಗಿಗಳವರೆಗೆ ಉಸಿರು ತಲುಪಿಸಲು ಮುಂದಾದ Indian Railways


ದೇಶದಲ್ಲಿ19 ಲಕ್ಷ ದಾಟಿದ  ಸಕ್ರಿಯ ಪ್ರಕರಣ :
ಅಂಕಿಅಂಶಗಳ ಪ್ರಕಾರ, ದೇಶಾದ್ಯಂತ 1 ಕೋಟಿ 29 ಲಕ್ಷ 48 ಸಾವಿರ 848 ಜನರನ್ನು ಕೋವಿಡ್ -19 (Covid-19) ರಿಂದ ಗುಣಪಡಿಸಲಾಗಿದೆ. ಆದಾಗ್ಯೂ, ಕಳೆದ ಕೆಲವು ದಿನಗಳಲ್ಲಿ, ಚೇತರಿಕೆಯ ದರದಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ ಮತ್ತು ಇದು ಶೇಕಡಾ 86 ಕ್ಕೆ ತಲುಪಿದೆ. ಇದರೊಂದಿಗೆ, ಸಕ್ರಿಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಮತ್ತು ದೇಶಾದ್ಯಂತ 19 ಲಕ್ಷ 23 ಸಾವಿರ 877 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಇದು ಒಟ್ಟು ಸೋಂಕಿತ ಜನರ ಶೇಕಡಾ 12.76 ರಷ್ಟಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ - Coronavirus Airborne: ಗಾಳಿಯಿಂದ ಹರಡುವ ಕೊರೊನಾಗೆ ಭಯಪಡಬೇಡಿ, ವೈದ್ಯರ ಈ ರಾಮಬಾಣ ಉಪಾಯ ಅನುಸರಿಸಿ


ಮಹಾರಾಷ್ಟ್ರದಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದ ವೀಕೆಂಡ್ ಲಾಕ್‌ಡೌನ್:
ದೇಶದಲ್ಲೇ ಅತಿ ಹೆಚ್ಚು ಕರೋನಾ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಕರೋನಾವೈರಸ್ ನಿಗ್ರಹಿಸುವ ನಿಟ್ಟಿನಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಲಾಕ್‌ಡೌನ್ ಅಥವಾ ವಾರಾಂತ್ಯದ ಲಾಕ್‌ಡೌನ್ ನಿಂದ ಯಾವುದೇ ಪ್ರಯೋಜನವಾಗಿಲ್ಲ. ವಾಸ್ತವವಾಗಿ ಭಾನುವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕರೋನವೈರಸ್ ಪ್ರಕರಣಗಳ ಸಂಖ್ಯೆ ಎಂದರೆ 68 ಸಾವಿರ 631 ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ಒಂದೇ ದಿನದಲ್ಲಿ 503 ಮಂದಿ ಕರೋನಾ ಸೋಂಕಿತರು ಸಾವನ್ನಪ್ಪಿರುವುದು ಆತಂಕಕಾರಿ ವಿಷಯವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.