Oxygen Express: Corona ರೋಗಿಗಳವರೆಗೆ ಉಸಿರು ತಲುಪಿಸಲು ಮುಂದಾದ Indian Railways

Oxygen Express - ದೇಶಾದ್ಯಂತ ಕೊರೊನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ರಾಜ್ಯಗಳು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ ಮತ್ತು  ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಮ್ಲಜನಕ ತಲುಪಲು ಸಾಕಷ್ಟು ಸಮಯ ಬೇಕಾಗುತ್ತಿದೆ. 

Written by - Nitin Tabib | Last Updated : Apr 18, 2021, 07:12 PM IST
  • ಕೊರೊನಾ ರೋಗಿಗಳವರೆಗೆ ಉಸಿರು ತಲುಪಿಸಲಿದೆ ಭಾರತೀಯ ರೈಲು ಇಲಾಖೆ
  • ಕೇಂದ್ರ ರೇಲ್ವೆ ಸಚಿವರಿಂದ ಆಕ್ಸಿಜನ್ ಎಕ್ಸಪ್ರೆಸ್ ರೈಲು ಘೋಷಣೆ
  • ಸೋಮವಾರದಿಂದ ಈ ಸೇವೆ ಆರಂಭಗೊಳ್ಳಲಿದೆ.
Oxygen Express: Corona ರೋಗಿಗಳವರೆಗೆ ಉಸಿರು ತಲುಪಿಸಲು ಮುಂದಾದ Indian Railways title=
Oxygen Express (File Photo)

ನವದೆಹಲಿ: Oxygen Express - ದೇಶಾದ್ಯಂತ ಕೊರೊನಾ ವೈರಸ್ (Coronavirus) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ರಾಜ್ಯಗಳು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿವೆ ಮತ್ತು  ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಆಮ್ಲಜನಕ ತಲುಪಲು ಸಾಕಷ್ಟು ಸಮಯ ಬೇಕಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲು ಇಲಾಖೆ ಇದೀಗ ಈ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತುಕೊಂಡಿದೆ. ಅತಿ ಕಡಿಮೆ ಸಮಯದಲ್ಲಿ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ತಲುಪಿಸುವ ಸಲುವಾಗಿ ರೈಲು ಇಲಾಖೆ ಆಕ್ಸಿಜನ್ ಎಕ್ಸಪ್ರೆಸ್ ರೈಲನ್ನು ಓಡಿಸಲು ನಿರ್ಧರಿಸಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ (Piyush Goyal)ಅವರೇ ಖುದ್ದು ಈ ಆಕ್ಸಿಜನ್ ಎಕ್ಸ್‌ಪ್ರೆಸ್( Oxygen Express) ರೈಲು ಓಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ರೈಲ್ವೆ ಯಾವುದೇ ರೀತಿಯ ಕೊರತೆಯಾಗಳು ಬಿಡುವುದಿಲ್ಲ ಎಂದು ಪಿಯೂಷ್ ಗೋಯಲ್ ಭಾನುವಾರ ಟ್ವೀಟ್ ಮಾಡಿದ್ದಾರೆ. ಇದಕ್ಕಾಗಿ ನಾವು ಗ್ರೀನ್ ಕಾರಿಡಾರ್ ಅನ್ನು ಬಳಸುತ್ತಿದ್ದೇವೆ ಮತ್ತು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ತ್ವರಿತವಾಗಿ ರೋಗಿಗಳವರೆಗೆ ಆಮ್ಲಜನಕವನ್ನು ತಲುಪಿಸುವ ಸಲುವಾಗಿ ಓಡಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ- Social Media ದಲ್ಲಿ ಆಸ್ಪತ್ರೆಗಳ ಹಾಸಿಗೆ, ರೆಮ್‌ಡೆಸಿವಿರ್, ಪ್ಲಾಸ್ಮಾಕ್ಕಾಗಿ ಜನರಿಂದ ಬೇಡಿಕೆ!

ಇದಕ್ಕೂ ಮೊದಲು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳು ಆಮ್ಲಜನಕ ಪೂರೈಕೆಗಾಗಿ ಭಾರತೀಯ ರೈಲ್ವೆಯ ಸಹಾಯವನ್ನು ಕೋರಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ. ರಾಜ್ಯಗಳ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ  ಗ್ರೀನ್ ಕಾರಿಡಾರ್ ಮೂಲಕ ಆಮ್ಲಜನಕವನ್ನು ಪೂರೈಸಲಿದೆ. ರೈಲ್ವೆ ಮೂಲಕ ಆಮ್ಲಜನಕವನ್ನು ಹೇಗೆ ಸರಬರಾಜು ಮಾಡಲಾಗುತ್ತದೆ ಎಂಬುದನ್ನು ಕೂಡ ಇಲ್ಲಿ ತಿಳಿಯಬೇಕಾದ ಅವಶ್ಯಕತೆ ಇದೆ.

ಇದನ್ನೂ ಓದಿ- Manmohan Singh: ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪಿಎಂ ಮನಮೋಹನ್ ಸಿಂಗ್! ಯಾಕೆ?

ಈ ಕುರಿತು ಭಾರತೀಯ ರೈಲು ಇಲಾಖೆ ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ರೈಲಿನ ಮೇಲೆ ಅಳವಡಿಸಲಾಗಿರುವ ಟ್ಯಾಂಕರ್ ವೊಂದರಲ್ಲಿ ಆಕ್ಸಿಜನ್ ತುಂಬಿಸಲಾಗುತ್ತಿದೆ. ಈ ರೀತಿ ಹಲವಾರು ಟ್ಯಾಂಕರ್ ಗಳನ್ನೂ ಏಕಕಾಲಕ್ಕೆ ಲೋಡ್ ಮಾಡಿ  ಬಳಿಕ ರೈಲನ್ನು ರವಾನಿಸಲಾಗುತ್ತಿದೆ. ಈ ಆಕ್ಸಿಜನ್ ಟ್ಯಾಂಕರ್ ಗಳನ್ನು ಹಸಿರು ಕಾರಿಕಾರ್ ಮೂಲಕ ಓಡಿಸುವುದರಿಂದ ಈ ರೈಲುಗಳು ಯಾವುದೇ ವಿಳಂಬವಿಲ್ಲದೆ ತಮ್ಮ ನಿರ್ಧಾರಿತ ಗುರಿಯನ್ನು ತಲುಪಲಿವೆ. ಈ ರೈಲುಗಳು ಸೋಮವಾರ ಮಹಾರಾಷ್ಟ್ರದಿಂದ ಖಾಲಿ ಟ್ಯಾಂಕರ್ ಹೊತ್ತು ಮಹಾರಾಷ್ಟ್ರದಿಂದ ತನ್ನ ಪ್ರಯಾಣ ಆರಂಭಿಸಲಿವೆ. ಬಳಿಕ ಅವು ವೈಜಾಗ್, ಜಮ್ಷೆಡ್ಪುರ್, ರಾವುರ್ಕೇಲಾ ಹಾಗೂ ಬೋಕಾರೂಗಳಿಂದ ಆಕ್ಸಿಜನ್ ಗಳನ್ನು ತುಂಬಿಸಿಕೊಳ್ಳಲಿವೆ ಎಂದು ರೇಲ್ವೆ ಇಲಾಖೆ ಹೇಳಿದೆ.

ಇದನ್ನೂ ಓದಿ- Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ '

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News