"ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"

ಈಗಾಗಲೇ ಎರಡನೇ ಅಲೆಗೆ ತುತ್ತಾದ ದೇಶಗಳಿಂದ ಕಲಿಯುವ ಮೂಲಕ ಭಾರತ ಕರೋನವೈರಸ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಛತ್ತೀಸ್‌ಗಡ್ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದ್ದಾರೆ.

Last Updated : Apr 18, 2021, 03:28 PM IST
  • ಭಾರತದ ಲಸಿಕೆ ಉಪಕ್ರಮವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು.
  • ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ವ್ಯಾಕ್ಸಿನೇಷನ್ ಡ್ರೈವ್ ಅನ್ನು ಹೆಚ್ಚಿಸಲು ಯೋಜಿಸಿದ್ದರಿಂದ ಈಗ ಲಸಿಕೆಯ ತೀವ್ರ ಕೊರತೆಯನ್ನು ಅನುಭವಿಸುತ್ತಿವೆ.
"ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"  title=

ನವದೆಹಲಿ: ಈಗಾಗಲೇ ಎರಡನೇ ಅಲೆಗೆ ತುತ್ತಾದ ದೇಶಗಳಿಂದ ಕಲಿಯುವ ಮೂಲಕ ಭಾರತ ಕರೋನವೈರಸ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ಛತ್ತೀಸ್‌ಗಡ್ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದ್ದಾರೆ.

"ಎರಡನೆಯ ಅಲೆ ಹೆಚ್ಚು ಕಳವಳಕಾರಿಯಾಗಿದೆ. ಸಂಖ್ಯೆಗಳು ವೇಗವಾಗಿ ಏರುತ್ತಿವೆ. ಕೊರೊನಾ (Coronavirus) ದಿಂದ ವೃದ್ಧರಲ್ಲದೆ, ಯುವಕರು ಸಹ ಸಾಯುತ್ತಿದ್ದಾರೆ. ಇದು ಈಗಲೂ ಒಂದು ದೊಡ್ಡ ಕಳವಳದ ಸಂಗತಿಯಾಗಿದೆ. ನಾವು ಇತರ ದೇಶಗಳಿಂದ ಪಾಠ ಕಲಿಯಬೇಕಾಗಿತ್ತು. ದೆಹಲಿಯಲ್ಲಿ ಕುಳಿತುಕೊಳ್ಳುವ ಜನರು ನಿರ್ದೇಶನ ನೀಡಬೇಕು "ಎಂದು ಬಾಗೆಲ್ ಹೇಳಿದರು.

ಇದನ್ನೂ ಓದಿ -ಬಾಲಿವುಡ್ ನಟ ಸೋನು ಸೂದ್ ಗೆ ಕೊರೋನಾ ಪಾಸಿಟಿವ್!

ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆ ಟೀಕಿಸುತ್ತಾ ಇತರ ದೇಶಗಳಿಗೆ ಲಕ್ಷಾಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಉಡುಗೊರೆಯಾಗಿದೆ ನೀಡಲಾಗಿದೆ ಎಂದು ಬಾಗೆಲ್ ಟೀಕಿಸಿದರು. "ನೀವು ರೆಮ್ಡೆಸಿವಿರ್ ಅನ್ನು ವಿವಿಧ ದೇಶಗಳಿಗೆ ಕಳುಹಿಸುತ್ತಿದ್ದೀರಿ.ಭಾರತದಲ್ಲಿ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ಹಾಕುವ ಅಗತ್ಯವಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ - ಕರೋನಾ ಬಿಕ್ಕಟ್ಟಿನ ಮಧ್ಯೆ ಸಂತರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು ಗೊತ್ತಾ?

ಭಾರತದ ಲಸಿಕೆ ಉಪಕ್ರಮವು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಸಮುದಾಯದ ಪ್ರಶಂಸೆಯನ್ನು ಪಡೆಯಿತು. ಆದಾಗ್ಯೂ ಭಾರತದಲ್ಲಿ ಕೊರೊನಾ ತೀವ್ರ ಪ್ರಮಾಣದಲ್ಲಿ ಹರಡಿದೆ.ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ವ್ಯಾಕ್ಸಿನೇಷನ್ ಡ್ರೈವ್ ಅನ್ನು ಹೆಚ್ಚಿಸಲು ಯೋಜಿಸಿದ್ದರಿಂದ ಈಗ ಲಸಿಕೆಯ ತೀವ್ರ ಕೊರತೆಯನ್ನು ಅನುಭವಿಸುತ್ತಿವೆ.

ಇಬ್ಬರು ಲಸಿಕೆ ತಯಾರಕರು ಸಾಕಾಗುವುದಿಲ್ಲ, ನಾವು ಈ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಬಾಗೆಲ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News