ನವದೆಹಲಿ: Covid-19 Third Wave In India - ಭಾರತದಲ್ಲಿ ಮುಂದಿನ 6-8 ವಾರಗಳಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಕದ ತಟ್ಟಲಿದೆ. AIIMS ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಈ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮೂರನೇ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬ ಸಂಕೇತಗಳನ್ನು ಕೂಡ ಅವರು ನೀಡಿದ್ದಾರೆ. ಮಾರ್ಚ್ ಕೊನೆಯ ತಿಂಗಳಿನಿಂದ ದೇಶದಲ್ಲಿ ಆರಂಭವಾದ ಲಾಕ್ ಡೌನ್ ಬಳಿಕ ಇದೀಗ  ದೇಶದ ಹಲವು ಭಾಗಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ದೇಶದಲ್ಲಿ ಮೂರನೆಯ ಅಲೆಯ ಸಾಧ್ಯತೆಯ ಕುರಿತು ತಜ್ಞರು ಈಗಾಗಲೇ ಎಚ್ಚರಿಕೆಯನ್ನು ಜಾರಿಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಡಾ. ರಣದೀಪ್ ಗುಲೇರಿಯಾ, "ದೇಶಾದ್ಯಂತ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ಮತ್ತೆ ಜನರಲ್ಲಿ ಕೊವಿಡ್ ಗೆ ಸಂಬಂಧಿಸಿದ ಆಚರಣೆಯಲ್ಲಿಇಳಿಕೆಯನ್ನು ಗಮನಿಸಲಾಗುತ್ತಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ನಾವು ಏನೆಲ್ಲಾ ಅನುಭವಿಸಿದ್ದೆವೆಯೋ ಅದರಿಂದ ನಾವು ಪಾಠ ಕಲಿತಲ್ಲ ಎನಿಸಲಾರಂಭಿಸಿದೆ. ಮತ್ತೆ ಜನಸಂದಣಿ ಉಂಟಾಗುತ್ತಿದೆ, ಜನರು ಪರಸ್ಪರ ಭೇಟಿಯಾಗುತ್ತಿದ್ದಾರೆ. ಆದರೆ, ಇದು ಕೇವಲ ಮುಂದಿನ 6-8 ವಾರಗಳವರೆಗೆ ಮಾತ್ರ ಇರಲಿದೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯ ಕೂಡ ಬೇಕಾಗಬಹುದು. ಆದರೆ, ನಾವು ಕೊವಿಡ್ ಸಂಬಂಧಿ ಆಚರಣೆಯನ್ನು ಪಾಲಿಸುತ್ತಿದ್ದೇವೆ ಹಾಗೂ ಜನಸಂದಣಿಯಿಂದ ದೂರ ಉಳಿಯುತ್ತಿದ್ದೆವೆಯೋ ಎಂಬುದರ ಮೇಲೆ ಇದು ಅವಲಂಭಿಸಿದೆ" ಎಂದು ಹೇಳಿದ್ದಾರೆ.


ಮಹಾರಾಷ್ಟ್ರದ ಹೆಚ್ಚು ಅಪಾಯದಲ್ಲಿದೆ
ಇತ್ತೀಚೆಗಷ್ಟೇ ಈ ಕುರಿತು ವರದಿ ಮಾಡಿದ್ದ ಮೂಲಗಳು ಮಹಾರಾಷ್ಟ್ರದಲ್ಲಿ ಈ ಮೊದಲು ಅಂದಾಜಿಸಿದ ಸಮಯಕ್ಕೂ ಮುನ್ನವೇ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಈ ಕುರಿತಾದ ಮಾಹಿತಿ ಮಾಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಚಿಸಿರುವ ತಜ್ಞರ ಸಮಿತಿ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಲಾಕ್ ಡೌನ್ ನಿಂದ ಸಡಿಲಿಕೆ ನೀಡಿದ ಬಳಿಕ ಮತ್ತೆ ಭಾರಿ ಸಂಖ್ಯೆಯಲ್ಲಿ ಜನರು ಒಗ್ಗೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಮೂರನೇ ಅಲೆಯ ಪೀಕ್ ಸ್ಟೇಜ್ ನಲ್ಲಿ ರಾಜ್ಯದಲ್ಲಿ 8 ಲಕ್ಷ  ಸಕ್ರೀಯ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.


ಇದನ್ನೂ ಓದಿ-Parliamentary Committee To Twitter: ದೇಶದ ಕಾನೂನು ಅತ್ಯುನ್ನತ, ನಿಮ್ಮ ನೀತಿಯಲ್ಲ, ದಂಡ ಯಾಕೆ ವಿಧಿಸಬಾರದು?


ನಿನ್ನೆಯಷ್ಟೇ ಈ ಕುರಿತು ವರದಿಯೊಂದನ್ನು ಪ್ರಕಟಿಸಿದ್ದ ಸುದ್ದಿ ಸಂಸ್ಥೆ ರಾಯ್ಟರ್ಸ್, ಬರುವ ಅಕ್ಟೋಬರ್ ನಲ್ಲಿ ಭಾರತದಲ್ಲಿ ಕೊವಿಡ್-19 ಮೂರನೇ ಅಲೆ ಆರಂಭವಾಗಲಿದೆ ಎಂದು ವಿಶ್ವದ ಸುಮಾರು 40 ಆರೋಗ್ಯ ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ ಎಂದಿತ್ತು. ಈ ಆರೋಗ್ಯ ತಜ್ಞರಲ್ಲಿ ವೈದ್ಯರು, ತಜ್ಞರು, ವಿಜ್ಞಾನಿಗಳು, ವೈರಾಲಾಜಿಸ್ಟ್ ಗಳು, ಎಪಿಡೆಮಿಯೋಲಾಜಿಸ್ಟ್ ಹಾಗೂ ಪ್ರೊಫೆಸರ್ ಗಳು ಶಾಮೀಲಾಗಿದ್ದಾರೆ. ಮೂರನೇ ಅಲೆ ಕದತಟ್ಟುವುದಕ್ಕು ಮುನ್ನ ಆದಷ್ಟು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆಯನ್ನು ಹಾಕುವುದರ ಮೂಲಕ ಮೂರನೇ ಅಲೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಸಮೀಕ್ಷೆ ಹೇಳಿತ್ತು.  ಅಷ್ಟೇ ಅಲ್ಲ ಎರಡನೇ ಅಲೆಯ ಹೋಲಿಕೆಯಲ್ಲಿ ಭಾರತ ಮೂರನೇ ಅಲೆಯನ್ನು ಸಾಕಷ್ಟು ಸಿದ್ಧತೆಗಳ ಮೂಲಕ ಹೋರಾಟ ನಡೆಸಲಿದ್ದು, ಮೂರನೇ ಅಲೆ ಮಕ್ಕಳ ಮೇಲೆ ಅಷ್ಟೊಂದು ಪ್ರಭಾವ ಬೀರುವುದಿಲ್ಲ ಎನ್ನಲಾಗಿತ್ತು.


ಇದನ್ನೂ ಓದಿ-Alert! ಸೌಂದರ್ಯವರ್ಧಕಗಳಲ್ಲಿನ ಈ ರಾಸಾಯನಿಕ Cancerಗೂ ಕಾರಣ ಎಚ್ಚರ!


ಮಕ್ಕಳ ಮೇಲೆ ಯಾವುದೇ ವಿಶೇಷ ಪ್ರಭಾವ ಇಲ್ಲ
ಇದಕ್ಕೂ ಮೊದಲು ಮೂರನೇ ಅಲೆಯ ಕುರಿತು ಸಿರೋ ಸರ್ವೇ ನಡೆಸಿದ್ದ AIIMS ಹಾಗೂ ವಿಶ್ವ ಆರೋಗ್ಯ ಸಂಘಟನೆ, ಮಕ್ಕಳಲ್ಲಿ ಹೈ-ಸಿರೋಪಾಸಿಟಿವಿಟಿ ಇರುವ ಕಾರಣ ಮೂರನೇ ಅಲೆಯೂ ಕೂಡ ಮಕ್ಕಳ ಮೇಲೆ ಯಾವುದೇ ವಿಶೇಷ ಪ್ರಭಾವ ಬೀರವುದಿಲ್ಲ ಎಂದಿದ್ದವು.


ಇದನ್ನೂ ಓದಿ- ಭಾರತದ ವಿರುದ್ಧ ಚೀನಾ ಹೊಸ ಕುತಂತ್ರ, ಪ್ರಮುಖ ಸಂಸ್ಥೆಗಳ ಮೇಲೆ Cyber Attack!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.