Parliamentary Committee To Twitter: ದೇಶದ ಕಾನೂನು ಅತ್ಯುನ್ನತ, ನಿಮ್ಮ ನೀತಿಯಲ್ಲ, ದಂಡ ಯಾಕೆ ವಿಧಿಸಬಾರದು?

Parliamentary Committee To Twitter - ಈ ವಿಷಯದಲ್ಲಿ ದೆಹಲಿ ಪೊಲೀಸರು ಮೇ 31 ರಂದು ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಯನ್ನು ಪ್ರಶ್ನಿಸಿದ್ದರು. ಮೇ 24 ರಂದು ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೆಹಲಿ ಮತ್ತು ಗುರಗಾಂವ್ನಲ್ಲಿರುವ ಟ್ವಿಟ್ಟರ್ ಕಚೇರಿಗಳನ್ನು ತಲುಪಿದ್ದರು.

Written by - Nitin Tabib | Last Updated : Jun 18, 2021, 10:30 PM IST
  • ಸಂಸದೀಯ ಸಮಿತಿಯ ಮುಂದೆ ಹಾಜರಾದ ಟ್ವಿಟ್ಟರ್ ಇಂಡಿಯಾ ಅಧಿಕಾರಿಗಳು
  • ನಮ್ಮ ಪಾಲಿಗೆ ದೇಶದ ಕಾನೂನು ಅತ್ಯುನ್ನತ ಎಂದ ಸಮಿತಿ.
  • ನಿಮ್ಮ ನೀತಿಯಲ್ಲ, ದಂಡ ಯಾಕೆ ವಿಧಿಸಬಾರದು ಉತ್ತರಿಸಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ ಸಮಿತಿ.
Parliamentary Committee To Twitter: ದೇಶದ ಕಾನೂನು ಅತ್ಯುನ್ನತ, ನಿಮ್ಮ ನೀತಿಯಲ್ಲ, ದಂಡ ಯಾಕೆ ವಿಧಿಸಬಾರದು?  title=
Parliamentary Committee To Twitter India (File Photo)

ನವದೆಹಲಿ: Parliamentary Committee To Twitter - ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವಿನ ಭಿನ್ನಾಭಿಪ್ರಾಯಗಳ ನಡುವೆಯೇ, ಮೈಕ್ರೋಬ್ಲಾಗಿಂಗ್ ಸೈಟ್ ಅಧಿಕಾರಿಗಳು ಶುಕ್ರವಾರ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನೇತೃತ್ವದ ಸಂಸದೀಯ ಸಮಿತಿಯ ಮುಂದೆ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಗಟ್ಟುವ ಬಗ್ಗೆ ತಮ್ಮ ನಿಲುವನ್ನು ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ, ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಸದಸ್ಯರು ಟ್ವಿಟರ್‌ಗೆ ಭೂಮಿಯ ಕಾನೂನನ್ನು  (Law Of Land)'ಉಲ್ಲಂಘಿಸಿದ' ಕಾರಣಕ್ಕೆ ದಂಡ ಏಕೆ ವಿಧಿಸಬಾರದು ಎಂದು ಪ್ರಶ್ನಿಸಿದ್ದಾರೆ. ದೇಶದ ಕಾನೂನು ಅತ್ಯುನ್ನತವಾದುದು, ನಿಮ್ಮ ನೀತಿಯಲ್ಲ ಎಂದು ಅವರು ಟ್ವಿಟ್ಟರ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಇದಕ್ಕೆ ಉತ್ತರ ನೀಡಿರುವ ಟ್ವಿಟ್ಟರ್ ಅಧಿಕಾರಿಗಳು ನೂತನ ಐಟಿ ಕಾನೂನುಗಳ ಪರಿಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಈಗಾಗಲೇ ಆಂತರಿಕ ಮುಖ್ಯ ಅನುಸರಣಾ ಅಧಿಕಾರಿಯ ನಿಯುಕ್ತಿ ಕೂಡ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಐರ್ಲೆಂಡ್ ನಲ್ಲಿ ಈ ಮೊದಲು ಟ್ವಿಟ್ಟರ್ ಗೆ ದಂಡ ವಿಧಿಸಲಾಗಿದೆ ಎಂಬುದನ್ನು ಕೂಡ ಸಮೀತಿ (Parliamentary Committee) ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ-Google ಬಳಕೆದಾರರಿಗೆ ಸಿಹಿ ಸುದ್ದಿ : ಗೂಗಲ್‌ನಿಂದ 'Photos Hide' ಸೌಲಭ್ಯ, ಇಲ್ಲಿದೆ ಮಾಹಿತಿ

ಮೂಲಗಳಿಂದ ದೊರೆತ ಆಧಾರದ ಮೇಲೆ ಸುದ್ದಿ ಪ್ರಕಟಿಸಿರುವ ಸುದ್ದಿ ಸಂಸ್ಥೆ ANI, ಟ್ವಿಟ್ಟರ್ (Twitter India) ಈ ದೇಶದ ಕಾನೂನನ್ನು ಪಾಲಿಸುತ್ತಿದೆಯೇ? ಎಂಬ ಸಂಸದೀಯ ಸಮೀತಿಯ ಪ್ರಶ್ನೆಗೆ ಉತ್ತರಿಸಿರುವ ಟ್ವಿಟ್ಟರ್ ಸದಸ್ಯರೊಬ್ಬರು, "ನಾವು ನಮ್ಮ ನೀತಿಗಳನ್ನು ಪರಿಪಾಲಿಸುತ್ತೇವೆ" ಎಂದಿದ್ದಾರೆ. ಈ ವೇಳೆ ಸಂಸದೀಯ ಸಮಿತಿ, ಟ್ವಿಟ್ಟರ್ ಸದಸ್ಯರಿಗೆ, ಟ್ವಿಟ್ಟರ್ ಇಂಡಿಯಾದಲ್ಲಿ ನಿಮ್ಮನ್ನು ಹೇಗೆ ನೇಮಿಸಲಾಗಿದೆ ಮತ್ತು ಮಹತ್ವಪೂರ್ಣ ನಿರ್ಣಯಗಳನ್ನೂ ಕೈಗೊಳ್ಳುವಲ್ಲಿ ನಿಮಗೆ ಎಷ್ಟು ಅಧಿಕಾರ ಇದೆ ಎಂಬುದನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಹೇಳಿದೆ.

ಇದನ್ನೂ ಓದಿ-Whatsapp Number change : ಹೀಗೆ ಮಾಡಿದರೆ ಸುಲಭವಾಗಿ ಬದಲಾಯಿಸಬಹುದು ವಾಟ್ಸಾಪ್ ನಂಬರ್

ಇದೆ ತಿಂಗಳ ಆರಂಭದಲ್ಲಿ ಟ್ವಿಟ್ಟರ್ ಇಂಡಿಯಾಗೆ ನೋಟಿಸ್ ಜಾರಿಮಾಡಿದ್ದ ಕೇಂದ್ರ ಸರ್ಕಾರ, ನೂತನ ಐಟಿ ನಿಯಮಗಳನ್ನು (New IT Rules In India) ಕೂಡಲೇ ಅನುಷ್ಠಾನಕ್ಕೆ ತರಲು ಸೂಚಿಸಿತ್ತು. ಅಷ್ಟೇ ಅಲ್ಲ ನೂತನ ನಿಯಮಗಳನ್ನು ಪಾಲಿಸದೇ ಹೋದಲ್ಲಿ ಪ್ಲಾಟ್ಫಾರ್ಮ್ ಅನ್ನು IT ಕಾಯ್ದೆಯ ಅಡಿ ಉತ್ತರಿಸಲು ಕೇಳಲಾಗುವುದು ಎಂದು ಹೇಳಿತ್ತು.

ಇದನ್ನೂ ಓದಿ-Tecno Spark 7T- 6,000mAh ಬ್ಯಾಟರಿ ಸಾಮರ್ಥ್ಯದ ಅಗ್ಗದ ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News