ಮಹಾರಾಷ್ಟ್ರದಲ್ಲಿ 3 ಲಕ್ಷ ಗಡಿ ದಾಟಿದ COVID-19 ಪ್ರಕರಣ
ಮುಂಬೈನಲ್ಲಿ ಒಟ್ಟು ಕರೋನಾವೈರಸ್ ಪ್ರಕರಣಗಳ ಸಂಖ್ಯೆ 1,00,350ಕ್ಕೆ ಏರಿದರೆ, ಸಾವಿನ ಸಂಖ್ಯೆ 5,650ಕ್ಕೆ ಹೆಚ್ಚಳಗೊಂಡಿದೆ.
ಮುಂಬೈ: ಮಹಾರಾಷ್ಟ್ರವು ಶನಿವಾರ (ಜುಲೈ 18, 2020) 8,348 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 3,00,937ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ (Maharashtra) ಸಾವನ್ನಪ್ಪಿದವರ ಸಂಖ್ಯೆ 144 ರಷ್ಟು ದಾಖಲಾಗಿದ್ದು ಈವರೆಗೆ ಮೃತಪಟ್ಟವರ ಸಂಖ್ಯೆ 11,596ಕ್ಕೆ ತಲುಪಿದೆ. ಶನಿವಾರ ಸಂಜೆ ವೇಳೆಗೆ ರಾಜ್ಯದಲ್ಲಿ 1,23,377 ಸಕ್ರಿಯ ಕರೋನಾ ಪ್ರಕರಣಗಳಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ನಗರವು 1,199 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದರಿಂದಾಗಿ ಮಹಾರಾಷ್ಟ್ರದ ರಾಜಧಾನಿ ಮುಂಬೈ ಒಂದರಲ್ಲೇ ಒಂದು ಲಕ್ಷಕ್ಕೂ ಅಧಿಕ ಕರೋನವೈರಸ್ ಪ್ರಕರಣಗಳಿವೆ.
ಮುಂಬೈನಲ್ಲಿ ಪ್ರಸ್ತುತ 1,00,350 ಮಂದಿ ಕರೋನಾವೈರಸ್ (Coronavirus) ಸೋಂಕಿಗೆ ಒಳಗಾಗಿದ್ದಾರೆ ಸಾವಿನ ಸಂಖ್ಯೆಯನ್ನು 5,650ಕ್ಕೆ ಹೆಚ್ಚಳಗೊಂಡಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಾರ ಮುಂಬೈನಲ್ಲಿ (Mumbai) ಇನ್ನೂ 24,039 ಸಕ್ರಿಯ ಪ್ರಕರಣಗಳಿವೆ.
ಕರೋನಾ ನಿಯಂತ್ರಿಸುವಲ್ಲಿ ಧಾರವಿ ಮಾದರಿ ಹೊಗಳಿದ WHO, 24 ಗಂಟೆಗಳಲ್ಲಿ ಕೇವಲ 12 ಪ್ರಕರಣಗಳು
ಮುಂಬೈನ ಧಾರವಿ ಪ್ರದೇಶದಲ್ಲಿ 6 ಹೊಸ ಪ್ರಕರಣಗಳು ದಾಖಲಾಗಿದ್ದು, ಭಾರತದ ಅತಿದೊಡ್ಡ ಕೊಳೆಗೇರಿ ಪ್ರದೇಶದಲ್ಲಿ ಕೋವಿಡ್-19 (COVID-19) ಸೋಂಕಿತರ ಸಂಖ್ಯೆ ಈಗ 2,444ಕ್ಕೆ ಏರಿದೆ.
ಕಳೆದ 24 ಗಂಟೆಗಳಲ್ಲಿ, ನವೀ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದಲ್ಲಿ 352 ಹೊಸಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಪ್ರದೇಶದಲ್ಲಿನ ಒಟ್ಟು ಕರೋನವೈರಸ್ ಸಕಾರಾತ್ಮಕ ರೋಗಿಗಳ ಸಂಖ್ಯೆಯನ್ನು 8,072ಕ್ಕೆ ತಲುಪಿದೆ. ಶನಿವಾರ ಇನ್ನೂ 10 COVID-19 ಸಾವುಗಳೊಂದಿಗೆ ನವೀ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದ ಸಾವಿನ ಸಂಖ್ಯೆ 340ಕ್ಕೆ ಏರಿದೆ.
ಕಲ್ಯಾಣ್ ಡೊಂಬಿವಾಲಿ ಮೆಟ್ರೋಪಾಲಿಟನ್ ಪ್ರದೇಶ, ಕಳೆದ 24 ಗಂಟೆಗಳಲ್ಲಿ 475 ಹೊಸ ಕರೋನಾ ಪ್ರಕರಣಗಳನ್ನು ದಾಖಲಿಸಿದೆ. ಸಕಾರಾತ್ಮಕ ರೋಗಿಗಳ ಸಂಖ್ಯೆ 15,480ಕ್ಕೆ ಏರಿದೆ. ಕಲ್ಯಾಣ್ ಡೊಂಬಿವಾಲಿ ಮಹಾನಗರ ಪ್ರದೇಶದಲ್ಲಿ ಈವರೆಗೆ 240 ಜನರು COVID-19 ನಿಂದ ಸಾವನ್ನಪ್ಪಿದ್ದಾರೆ.