COVID 19 ಎಫೆಕ್ಟ್ ಯಾವ ರಾಜ್ಯಗಳ ಮೇಲೆ ಎಷ್ಟೆಷ್ಟಿದೆ?
ವ್ಯಾಪಕವಾಗಿ ಹರಡುತ್ತಿರುವ ದೇಶದ COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರ ಕೊಡುಗೆಯೇ ಮೂರನೇ ಒಂದುರಷ್ಟು ಪಾಲಿದೆ. ನಂಬರ್ 1 ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ.
ನವದೆಹಲಿ: COVID 19 ವೈರಸ್ ನಿಯಂತ್ರಿಸಲು ಜಾರಿಗೊಳಿಸಲಾಗಿದ್ದ ನಾಲ್ಕನೇ ಹಂತದ ಲಾಕ್ಡೌನ್ ಕೂಡ ಕೊನೆಯಾಗುತ್ತಿದೆ. ಆದರೆ ಕರೋನವೈರಸ್ (Coronavirus) ಸೋಂಕು ಹರಡುವಿಕೆ ಮಾತ್ರ ಕಡಿಮೆ ಆಗಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ.
ಒಂದು ವಾರದಿಂದ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ COVID 19 ವೈರಸ್ ನಿನ್ನೆ ಯಾವ ರಾಜ್ಯಗಳಲ್ಲಿ ಎಷ್ಟು ಮಂದಿಗೆ ಕಾಣಿಸಿಕೊಂಡಿದೆ, ಅಲ್ಲಿನ ಒಟ್ಟಾರೆ ಕೊರೋನಾ ಪೀಡಿತರ ಸಂಖ್ಯೆ ಎಷ್ಟು ಎಂಬ ವಿವರಗಳು ಈ ರೀತಿ ಇವೆ.
ವ್ಯಾಪಕವಾಗಿ ಹರಡುತ್ತಿರುವ ದೇಶದ ಕೋವಿಡ್ -19 (Covid-19) ವೈರಸ್ ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ರಾಜ್ಯವೊಂದರ ಕೊಡುಗೆಯೇ ಮೂರನೇ ಒಂದುರಷ್ಟು ಪಾಲಿದೆ. ನಂಬರ್ 1 ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ. ನಂತರದ ಸ್ಥಾನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ರಾಜ್ಯದ್ದು. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ ಹೀಗಿದೆ.
ರಾಜ್ಯವಾರು ಕೊರೊನಾ ಪೀಡಿತರ ವಿವರ
ಮಹಾರಾಷ್ಟ್ರ: 2,190 ಹೊಸ ಪ್ರಕರಣಗಳು, ಒಟ್ಟು 56,948
ತಮಿಳುನಾಡು: 817 ಹೊಸ ಪ್ರಕರಣಗಳು; ಒಟ್ಟು 18,545
ದೆಹಲಿ: 792 ಹೊಸ ಪ್ರಕರಣಗಳು; ಒಟ್ಟು 15,257
ಗುಜರಾತ್: 376 ಹೊಸ ಪ್ರಕರಣಗಳು; ಒಟ್ಟು 15,205
ರಾಜಸ್ಥಾನ: 280 ಹೊಸ ಪ್ರಕರಣಗಳು; ಒಟ್ಟು 7,816
ಮಧ್ಯಪ್ರದೇಶ: 237 ಹೊಸ ಪ್ರಕರಣಗಳು; ಒಟ್ಟು 7,261
ಉತ್ತರ ಪ್ರದೇಶ: 269 ಹೊಸ ಪ್ರಕರಣಗಳು; ಒಟ್ಟು 6,991
ಪಶ್ಚಿಮ ಬಂಗಾಳ: 183 ಹೊಸ ಪ್ರಕರಣಗಳು; ಒಟ್ಟು 4,192
ಕರ್ನಾಟಕ: 135 ಹೊಸ ಪ್ರಕರಣಗಳು; ಒಟ್ಟು 2,418
ತೆಲಂಗಾಣ: 107 ಹೊಸ ಪ್ರಕರಣಗಳು; ಒಟ್ಟು 2,098
ಜಮ್ಮು ಮತ್ತು ಕಾಶ್ಮೀರ: 162 ಹೊಸ ಪ್ರಕರಣಗಳು; ಒಟ್ಟು 1,921
ಹರಿಯಾಣ: 76 ಹೊಸ ಪ್ರಕರಣಗಳು; ಒಟ್ಟು 1,381
ಕೇರಳ: 40 ಹೊಸ ಪ್ರಕರಣಗಳು; ಒಟ್ಟು 1,004
ಅಸ್ಸಾಂ: 60 ಹೊಸ ಪ್ರಕರಣಗಳು; ಒಟ್ಟು 774
ಜಾರ್ಖಂಡ್: 263 ಸಕ್ರಿಯ ಪ್ರಕರಣಗಳು; ಒಟ್ಟು 458
ಹಿಮಾಚಲ ಪ್ರದೇಶ: 177 ಸಕ್ರಿಯ ಪ್ರಕರಣಗಳು; ಒಟ್ಟು 251
ಗೋವಾ: 1 ಪಾಸಿಟಿವ್; ಒಟ್ಟು 31
ಲಡಾಖ್: 1 ಹೊಸ ಪ್ರಕರಣ; ಒಟ್ಟು 11