ಕೊರೊನಾ 4ನೇ ಅಲೆ ಭೀತಿ: ದೇಶದಲ್ಲಿ ಒಂದೇ ದಿನ 3,712 ಹೊಸ ಪ್ರಕರಣ ದಾಖಲು
ಸದ್ಯ ದೇಶದಲ್ಲಿ 19,509 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜೊತೆಗೆ ಒಂದು ದಿನದಲ್ಲಿ 2,584 ಮಂದಿ ಚೇತರಿಕೆ ಕಂಡಿದ್ದು, ಒಟ್ಟು ಗುಣಮುಖರ ಸಂಖ್ಯೆ 4,26,20,394ಕ್ಕೆ ಏರಿದೆ. ಇನ್ನು ಸಾವಿನ ಪ್ರಮಾಣ ಶೇಕಡಾ 1.22 ರಷ್ಟಿದೆ.
ನವದೆಹಲಿ: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,712 ಹೊಸ ಕೋವಿಡ್ ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,31,64,544 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸದ್ಯ ದೇಶದಲ್ಲಿ 19,509 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ಕಳೆದ 24 ಗಂಟೆಯಲ್ಲಿ 5 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜೊತೆಗೆ ಒಂದು ದಿನದಲ್ಲಿ 2,584 ಮಂದಿ ಚೇತರಿಕೆ ಕಂಡಿದ್ದು, ಒಟ್ಟು ಗುಣಮುಖರ ಸಂಖ್ಯೆ 4,26,20,394ಕ್ಕೆ ಏರಿದೆ. ಇನ್ನು ಸಾವಿನ ಪ್ರಮಾಣ ಶೇಕಡಾ 1.22 ರಷ್ಟಿದೆ.
ಇದನ್ನು ಓದಿ: "ಜಿನ್ಹಾ ದೇಶ ಒಡೆಯಲಿಲ್ಲ, ಒಳಿತು ಮಾಡಿದ್ದಾರೆ" ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ
ದೇಶದಲ್ಲಿ ಸದ್ಯ 0.05 ಪ್ರತಿಶತದಷ್ಟು ಸಕ್ರಿಯ ಪ್ರಕರಣಗಳಿವೆ. ಜೊತೆಗೆ ಕೋವಿಡ್ -19 ಚೇತರಿಕೆ ಪ್ರಮಾಣವು ಹೆಚ್ಚಿದ್ದು, 98.74 ಪ್ರತಿಶತದಷ್ಟು ದಾಖಲಾಗಿದೆ.
ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇಲ್ಲಿವರೆಗೆ 193.70 ಕೋಟಿಗೂ ಮೀರಿ ಡೋಸ್‌ಗಳನ್ನು ನೀಡಲಾಗಿದೆ. ಜೊತೆಗೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 4,41,989 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ.
ಈ ಮಧ್ಯೆ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಉತ್ತರ ಕೊರಿಯಾದ ಪ್ರಗತಿಯ ಹಕ್ಕುಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮಾನಗಳನ್ನು ವ್ಯಕ್ತಪಡಿಸಿದೆ.
ಇದನ್ನು ಓದಿ: 7th Pay Commission : ಕೇಂದ್ರ ನೌಕರರಿಗೆ ಡಬಲ್ ಗುಡ್ ನ್ಯೂಸ್, ಬಡ್ತಿಯ ಜೊತೆಗೆ ಡಿಎ ಬಗ್ಗೆ ಬಿಗ್ ಅಪ್ಡೇಟ್!
ಎರಡು ವಾರಗಳ ಹಿಂದೆ ಜ್ವರದಿಂದ ಬಳಲುತ್ತಿರುವ ಜನರ 390,000 ಕ್ಕೆ ಏರಿಕೆಯಾಗಿದೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ಹೇಳಿತ್ತು. ಆದರೆ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್ ಅಂಟಿದೆ ಎಂಬುದನ್ನು ನೇರವಾಗಿ ದೃಢಪಡಿಸಿಲ್ಲ. ಸರ್ಕಾರಿ ನಿಯಂತ್ರಿತ ಮಾಧ್ಯಮಗಳ ಪ್ರಕಾರ, ನಿಜ ಮಾಹಿತಿ ಬದಲಿಗೆ, ಅಂಕಿಅಂಶಗಳಲ್ಲಿ ಸುಳ್ಳು ಮಾಹಿತಿ ನೀಡುಲಾಗುತ್ತಿದೆ ಎಂಬ ಅನುಮಾನವನ್ನು ಕೆಲ ತಜ್ಞರು ವ್ಯಕ್ತಪಡಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.