ಅಗರ್ ಮಾಲ್ವಾ (ಮಧ್ಯಪ್ರದೇಶ): ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಮಹಮ್ಮದ್ ಅಲಿ ಜಿನ್ನಾ ಅವರು "ಬುದ್ಧಿವಂತಿಕೆಯ ಆಧಾರದ ಮೇಲೆ ದೇಶವನ್ನು ವಿಭಜಿಸಿದ್ದಾರೆ" ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಸಜ್ಜನ್ ಸಿಂಗ್ ವರ್ಮಾ ಹೇಳಿದ್ದಾರೆ.
ಮುಹಮ್ಮದ್ ಅಲಿ ಜಿನ್ನಾನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಸಜ್ಜನ್ ಸಿಂಗ್ ಕರೆದಿದ್ದು, "ಅವರು ದೇಶವನ್ನು ವಿಭಜಿಸುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಳೆದ ದಿನ ಮಾಧ್ಯಮದ ಮುಂದೆ ಈ ಹೇಳಿಕೆ ನೀಡಿದ್ದು ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಇದನ್ನು ಓದಿ: ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗೆ ಭಯವೇಕೆ?
"ನೆಹರೂ ಮತ್ತು ಜಿನ್ನಾ ದೇಶವನ್ನು ಎರಡು ಭಾಗಗಳಾಗಿ ವಿಭಜಿಸಿರುವುದು ಬುದ್ಧಿವಂತಿಕೆ ಕಾರ್ಯ. ಜಿನ್ನಾ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಆತನನ್ನು ನೆನಪಿಸಿಕೊಳ್ಳಬೇಕು. ಅವರು ದೇಶವನ್ನು ಒಡೆಯಲಿಲ್ಲ. ಸರಿಯಾದ ಕೆಲಸವನ್ನು ಮಾಡಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರನಲ್ಲವೇ?" ಅವರು ಹೇಳಿದರು. "ಸ್ವಾತಂತ್ರ್ಯ ಹೋರಾಟಗಾರನ ವ್ಯಾಖ್ಯಾನವು ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಬದಲಾಗುತ್ತದೆಯೇ" ಎಂದು ಕೇಳಿದರು.
"ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಸ್ವಾತಂತ್ರ್ಯ ಹೋರಾಟಗಾರನ ವ್ಯಾಖ್ಯಾನವೇ ಬದಲಾಗುತ್ತದೆಯೇ? ಬಿಜೆಪಿ ಈ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಜನವರಿ 26 ರಂದು ತಮ್ಮ ಭಾಷಣದಲ್ಲಿ ಜವಾಹರಲಾಲ್ ನೆಹರು ಮತ್ತು ಜಿನ್ನಾ ಅವರು 1947 ರಲ್ಲಿ ದೇಶ ವಿಭಜನೆಯಾಗಲು ಕಾರಣ" ಎಂದು ಹೇಳಿದರು. ದೇಶವು ಇಬ್ಬರಿಗೆ ಧನ್ಯವಾದ ಹೇಳಬೇಕು. ನಾಯಕರು ದೇಶವನ್ನು ಎರಡು ಭಾಗ ಮಾಡುವ ಮೂಲಕ ಬುದ್ಧಿವಂತಿಕೆಯ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಹೇಳಿದರು.
ಇದನ್ನು ಓದಿ: ನಾಳೆಯಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ ನೀಡಲಿದ್ದಾನೆ ಬುಧ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕ, ಜಿನ್ನಾ ಅವರು ದೇಶವನ್ನು ವಿಭಜಿಸದಿದ್ದರೆ ಅವರು ಪ್ರಸ್ತುತ ಅನುಭವಿಸುತ್ತಿರುವ ಸ್ಥಾನಗಳಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.